ಸೈಫ್‌ ಅಲಿ ಖಾನ್ ಹಾಗೂ ಕರೀನಾ ಕಪೂರ್‌ ಕುಟುಂಬಕ್ಕೆ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿರುವ ನೆಟ್ಟಿಗರು ಶೀಘ್ರವೇ ಫೋಟೋ ಶೇರ್ ಮಾಡಿಕೊಳ್ಳುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. 

ತಂದೆ ರಣಧೀರ್‌ ಕಪೂರ್‌ ಬರ್ತ್‌ಡೇ ಪಾರ್ಟಿಯಲ್ಲಿ ಕಂಡ ಕರೀನಾ ಕಪೂರ್‌! 

ಕರೀನಾ ಆಪ್ತ ಸ್ನೇಹಿತರಾದ ಮನೀಶ್ ಮಲ್ಹೋತ್ರಾ, ಸಹೋದರಿ ರಿದ್ಧಿಮಾ ಗಂಡು ಮಗುವಿನ ಆಗಮನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.  

2012ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕರೀನಾ ಕಪೂರ್ ಹಾಗೂ ಸೈಫ್‌ಗೆ ಈಗಾಗಲೇ ನಾಲ್ಕು ವರ್ಷದ ಮಗನಿದ್ದಾನೆ.  ತಮ್ಮ ಎರಡನೇ ಪ್ರೆಗ್ನೆನ್ಸಿ ವಿಚಾರವನ್ನು ಆಗಸ್ಟ್‌ ತಿಂಗಳಲ್ಲಿ ರಿವೀಲ್ ಮಾಡಿದ್ದರು. 'ನಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಆಶೀರ್ವಾದ ಹಾಗೂ ಪ್ರೀತಿ ಹೀಗೆ ಇರಲಿ,' ಎಂದು ಕರೀನಾ ಬರೆದುಕೊಂಡಿದ್ದರು.

ಖಾಸಗಿ ಸಂದರ್ಶನವೊಂದರಲ್ಲಿ ಕರೀನಾ ಗರ್ಭಿಣಿಯಾಗಿರುವ ಸಂಗತಿ ತಿಳಿದಾಗ ಸೈಫ್‌  ಹೇಗೆ ರಿಯಾಕ್ಟ್ ಮಾಡಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ. 'ನಮ್ಮ ಮನೆಯಲ್ಲಿ ಯಾವ ಫಿಲ್ಮ್ ಇಲ್ಲ. ಎಲ್ಲವೂ ನೇರವಾಗಿ ಮಾತನಾಡುವುದೇ. ಸೈಫ್ ತುಂಬಾನೇ ನಾರ್ಮಲ್ ಆಗಿದ್ದರು. ವಿಚಾರ ಕೇಳಿ ತುಂಬಾ ಖುಷಿ ಪಟ್ಟರು. ನಾವು ಎರಡನೇ ಮಗುವಿಗೆ ಪ್ಲಾನ್ ಮಾಡಿರಲಿಲ್ಲ. ಆದರೆ ವಿಚಾರ ತಿಳಿದಾಗ ನಾವೆಲ್ಲರೂ ಸೆಲೆಬ್ರೇಟ್ ಮಾಡಿದೆವು,' ಎಂದು ಕರೀನಾ ಹೇಳಿದ್ದರು.

ಮಗಳ ಹೆರಿಗೆ ದಿನಾಂಕ ರಿವೀಲ್‌ ಮಾಡಿದ ಕರೀನಾರ ತಂದೆ ರಣಧೀರ್‌ ಕಪೂರ್‌! 

ತೈಮೂರ್ ಹುಟ್ಟಿದಾಗ ಇಡೀ ಮೀಡಿಯಾದ ಗಮನ ಆತನ ಮೇಲಿತ್ತು. ಬೆಳೆಯುತ್ತಿದ್ದಂತೆ ತೈಮೂರ್ ಹಾಗೂ ಮಾಧ್ಯಮದವರ ಸಂಬಂಧ ಗಟ್ಟಿಯಾಗಿತ್ತು, ಕೆಲವೊಮ್ಮೆ ಫೋಟೋ ಬೇಡ ಎಂದು ಕಿರುಚುತ್ತಿದ್ದ. ತೈಮೂರ್ ಈಗೀಗ ಪೋಸ್‌ ಕೊಡುತ್ತಾನೆ. ಕರೀನಾ ಎರಡನೇ ಮಗು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.