ನಟಿ ಕರೀನಾ ಕಪೂರ್ ಖಾನ್ ಕಳೆದ ತಿಂಗಳು ತನ್ನ ಎರಡನೇ ಮಗನಿಗೆ ಜನ್ಮ ನೀಡಿದ ನಂತರ ತನ್ನ ಮೊದಲ ಫೋಟೋ ಶೇರ್ ಮಾಡಿದ್ದಾರೆ. ಫೆಬ್ರವರಿ 15 ರಂದು ಜನಿಸಿದ ಗಂಡು ಮಗುವಿನ ಹೆಸರನ್ನು ನಟಿ ಇನ್ನೂ ಬಹಿರಂಗಪಡಿಸಿಲ್ಲ.

"ಓ ಹಲೋ ... ನಿಮ್ಮೆಲ್ಲರನ್ನೂ ಮಿಸ್ ಮಾಡಿಕೊಂಡೆ" ಎಂದು ಅವರು ಪೋಸ್ಟ್‌ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಕರೀನಾ ಪೌಟ್ ಮಾಡಿ ಕೂಲ್ ಮುಮ್ಮಿ ಪೋಸ್ ಕೊಟ್ಟಿದ್ದಾರೆ.

ಮಗು ನೋಡಲು ಬೇಬೋ ಮನೆಗೆ ಬಂದ ನಾದಿನಿ ಸೋಹಾ ಕುನಾಲ್‌ ದಂಪತಿ

ಇದು ಮಗುವಿನ ಜನನದ ನಂತರ ಅವರ ಎರಡನೇ ಇನ್‌ಸ್ಟಾಗ್ರಾಮ್ ಪೋಸ್ಟ್. ಮೊದಲನೆಯದು ಪತಿ ಸೈಫ್ ಅಲಿ ಖಾನ್ ಅವರ ಸಿನಿಮಾ ಚಿತ್ರ ಭೂತ್ ಪೊಲೀಸ್ ಪೋಸ್ಟರ್ ಆಗಿತ್ತು.

ಕರೀನಾ ಕಪೂರ್ ಸ್ಟ್ರಾ ಹ್ಯಾಟ್ ಧರಿಸಿ, ಸನ್ಗ್ಲಾಸ್ ಹಾಕಿ, ನೀಲಿ ಟಾಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತಮ್ಮ ಹೊಸ ಮನೆಯ ಟೆರೇಸ್ ಮೇಲಿಂದ ಪೋಸ್ ಕೊಟ್ಟಿದ್ದಾರೆ.

ಪುಟ್ಟ ತಮ್ಮನಿಗೆ ಗಿಫ್ಟ್ ತಂದ ಸಾರಾ ಅಲಿ ಖಾನ್..!

ಸೈಫೀನಾ ಎರಡನೇ ಮಗುವಿನ ಆಗಮನದ ಮುನ್ನ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ನಟಿಯನ್ನು ನೋಡಲು ಮಲೈಕಾ, ಅರ್ಜುನ್ ಕಪೂರ್ ಭೇಟಿ ಕೊಟ್ಟಿದ್ದರು.