ಇತ್ತೀಚೆಗಷ್ಟೇ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ ಬಾಲಿವುಡ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ಗೆ ಶುಭಾಶಯ ತಿಳಿಸಲು ಸೈಫ್ ಮಗಳು ನಟಿ ಸಾರಾ ಅಲಿ ಖಾನ್ ಗಿಫ್ಟ್ ಜೊತೆ ಬಂದಿದ್ದಾರೆ.

ಅಟ್ರಾಂಗಿ ರೇ ನಟಿ ಕರೀನಾ ಸೈಫ್ ಮನೆಗೆ ಬಂದಿದ್ದಾರೆ. ತನ್ನ ಪುಟ್ಟ ತಮ್ಮನಿಗಾಗಿ ಗಿಫ್ಟ್ ತೆಗೆದುಕೊಂಡು ಬಂದಿದ್ದಾರೆ ಸಾರಾ. ಅಮ್ಮ ಮಗುವಿನ ಬ್ರಾಂಡ್ ಸ್ಟೋರ್ನಿಂದ ಸ್ಪೆಷಲ್ ಗಿಫ್ಟ್ ತಂದಿದ್ದಾರೆ ನಟಿ.

ಬಾಲಿವುಡ್ ನಟಿ ದೀಪಿಕಾಳ ಪರ್ಸ್ ಎಳೆದ ಮಹಿಳೆ

ಆರ್ಮಿ ಗ್ರೀನ್ ಬೋಟ್ ನೆಕ್ ಡ್ರೆಸ್ ಧರಿಸಿದ್ದ ಸಾರಾ ಮಾಸ್ಕ್ ಧರಿಸಿದ್ದರು. ನಟಿ ಗಿಫ್ಟ್ ಬ್ಯಾಗ್ಸ್ ಹಿಡಿದುಕೊಂಡು ಸೈಫಿನಾ ಮನೆಗೆ ತೆರಳಿದ್ದಾರೆ.
ಪಪ್ಪರಾಜಿ ಮಾಸ್ಕ್ ತೆಗೆಯುವಂತೆ ಹೇಳಿದರೂ ನಟಿ ಮಾಸ್ಕ್ ತೆಗೆದಿಲ್ಲ. ಸ್ಮೈಲ್ ಕೊಟ್ಟು ಕಾರ್ ಒಳಗೆ ಕೂತಿದ್ದಾರೆ.

ಕೂಲಿ ನಂಬರ್ 1 ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ ಈಗ ಅಕ್ಷಯ್ ಮತ್ತು ಟಾಲಿವುಡ್ ನಟ ಧನುಷ್ ಜೊತೆಗೂ ತೆರೆ ಹಂಚಿಕೊಳ್ಳಲಿದ್ದಾರೆ. ಈ ನಡುವೆ ಚಿಕ್ಕ ತಮ್ಮನನ್ನು ನೋಡಲು ಬಂದಿದ್ದಾರೆ.