ಕರೀನಾ ಕಪೂರ್ ಖಾನ್ ಫಿಟ್ನೆಸ್ ಉತ್ಸಾಹಿಯಾಗಿದ್ದು, ಜಿಮ್‌ನ ಹೊರಗೆ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾರೆ. ತನ್ನ ಎರಡನೇ ಗಂಡು ಮಗುವಿನ ಹೆರಿಗೆ ಮಾಡಿದ ಕೂಡಲೇ ನಟಿ ತನ್ನ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಅಮ್ಮನಂತೆ ತೈಮೂರ್ ಅಲಿ ಖಾನ್ ಕೂಡ ಸದೃಢವಾಗಿರಲು ಇಷ್ಟಪಡುತ್ತಾರೆ.

ಗುಡ್ ನ್ಯೂಜ್ ನಟಿ ತನ್ನ ನಾಲ್ಕು ವರ್ಷದ ಮಗ ತೈಮೂರ್ ಅವರ ಫೋಟೋವನ್ನು ಶೇರ್ ಮಾಡಿದ್ದಾರೆ. ತೈಮೂರ್ ಯೋಗ ಭಂಗಿ ಮಾಡುತ್ತಿರುವುದನ್ನು ಕಾಣಬಹುದು. ಆದರೆ ಮಮ್ಮಿ ಕರೀನಾ ಈ ಸ್ಟ್ರೆಚಿಂಗ್ ಯೋಗ ನೋಡಿ ಇದು ಒಂದು ಕಿರು ನಿದ್ದೆ ನಂತರದ್ದಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯ ತಲೆ ಹಿಡಿದು ಸಿಟ್ಟಲ್ಲಿ ದೂಡಿದ ಜಯಾ ಬಚ್ಚನ್!

ಇದು ಯೋಗದ ನಂತರ ಮೈ ಸ್ಟ್ರೆಚ್ ಮಾಡುವುದೋ ಅಥವಾ ನಿದ್ರೆ ನಂತವೋ… ಗೊತ್ತಿಲ್ಲ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ. ನಟಿ ಮಗ ತೈಮೂರ್ ಅವರ ಅನೇಕ ಅಭಿಮಾನಿಗಳಿಗಾಗಿ ಫೋಟೋ ಶೇರ್ ಮಾಡುತ್ತಿರುತ್ತಾರೆ.