ಮಾಧ್ಯಮಗಳ ಮಧ್ಯೆ ಸೆಲ್ಫಿ ತೆಗೆದುಕೊಳ್ಳುಲು ಪ್ರಯತ್ನಿಸಿದ ತಮ್ಮ ಅಭಿಮಾನಗಳ ಮೇಲೆ ಮಾಜಿ ಬಾಲಿವುಡ್ ನಟಿ ಮತ್ತು ರಾಜಕಾರಣಿ ಜಯಾ ಬಚ್ಚನ್ ಕೋಪಗೊಂಡ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಈಗ ಇಂತಹದ್ದೇ ಒಂದು ಘಟನೆ ನೆಡೆದಿದ್ದು ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ಜಯಾ ಬಚ್ಚನ್ ದೂಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯ 4ನೇ ಹಂತದ ಮತದಾನದ ಕೊನೆಯ ದಿನ ತೃಣಮೂಲ ಕಾಂಗ್ರೆಸ್ ಪರವಾಗಿ ಜಯಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

ಅಮಿತಾಬ್ ಬಚ್ಚನ್, ಜಯಾ ಮೊದಲು ಭೇಟಿಯಾಗಿದ್ದು ಎಲ್ಲಿ ಗೊತ್ತಾ?

ತಮ್ಮನ್ನು ನೋಡಲು ಬಂದ ಸಾವಿರಾರು ಜನರತ್ತ ಜಯಾ ಕೈ ಬೀಸುತ್ತಾ ಪ್ರಚಾರ ನಡೆಸುತ್ತಿದ್ದರು. ಇದೇ ವೇಳೆಯಲ್ಲಿ ಅವರ ಅಭಿಮಾನಿಯೊಬ್ಬ ಜಯಾ ಇದ್ದ ವಾಹನವನ್ನು ಹತ್ತಿ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದಾನೆ. ಆದರೆ ಕೋಪಗೊಂಡ ಜಯಾ ಅಭಿಮಾನಿಯನ್ನು ದೂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಯಾ ಬಚ್ಚನ್ ಯಾಕೆ ಈ ರೀತಿ ಅಭಿಮಾನಿಗಳ ಜೊತೆ ಈ ರೀತಿ ವರ್ತಿಸಿದ್ದಾರೆ ಎಂಬುದು ಅಸ್ಪಷ್ಟ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜಯಾರ ಈ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು ಜಯಾರ ಈ ವರ್ತನೆ ಅನಾಗರಿಕ ಮತ್ತು ಗರ್ವದಿಂದ ಕೂಡಿದ್ದು ಎಂದು ಹೇಳಿದ್ದಾರೆ. ಮಾಧ್ಯಮ ಮತ್ತು ಜನರ ಜೊತಗಿನ ಜಯಾರ ಈ ರೀತಿಯ ವರ್ತನೆ ಹೊಸದೇನಲ್ಲ. ಈ ಹಿಂದೆಯೂ ಸಂವಾದವೊಂದರಲ್ಲಿ ಪೋಟೋ ಕ್ಲಿಕ್ಕಿಸುತ್ತಿದ್ದ ಛಾಯಾಗ್ರಾಹಕರಿಗೂ ಜಯಾ ತರಾಟೆಗೆ ತೆಗೆದುಕೊಂಡಿದ್ದರು.

ಮಂಗಳಸೂತ್ರ ಧರಿಸಿದ ರೇಖಾ: ಡಿನ್ನರ್‌ಗೆ ಮನೆಗೆ ಕರೆದು ಜಯಾ ಬಚ್ಚನ್ ಹೀಗನ್ನಬಾರದಿತ್ತು

ಪಶ್ಚಿಮ ಬಂಗಾಳದ ಹೌರಾ ಜಲ್ಲೆಯಲ್ಲಿ  ತೃಣಮೂಲ ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ಜಯಾ ಭಾಗವಹಿಸಿದ್ದರು. ಪಶ್ಚಿಮ ಬಂಗಾಳ ಚುನಾವಣಾ ಅಖಾಡ ರಂಗೇರಿದೆ. ಒಟ್ಟು 8 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು ಇಂದು ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಮಾರ್ಚ್ 27 ರಂದು ಮೊದಲನೇ ಹಂತದ ಚುನಾವಣೆ ಆರಂಭವಾಗಿದ್ದು ಏಪ್ರಿಲ್ 29ರ ವರೆಗೆ ಚುನಾವಣೆ ನಡೆಯಲಿದೆ ಹಾಗೂ ಮೇ 2 ರಂದು  ಫಲಿತಾಂಶ ಹೊರ ಬೀಳಲಿದೆ. ಪಶ್ಚಿಮ ಬಂಗಾಲದಲ್ಲಿ ರಾಜಕೀಯ ಜಿದ್ದಾಜಿದ್ದಿ ಜೋರಾಗಿದ್ದು ಘಟಾನುಘಟಿಗಳು ಚುಣಾವನಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.