18 ಲಕ್ಷದ ಬ್ಯಾಗ್, ಭಿಕ್ಷುಕನಂತಹ ವೇಷ: ಸಖತ್ ಟ್ರೋಲ್ ಆದ ಬಾಲಿವುಡ್ ನಿರ್ದೇಶಕ
ಕರಣ್ ಜೋಹರ್ ಅವರ ವಿಚಿತ್ರ ಡ್ರೆಸ್ಸಿಂಗ್ ಶೈಲಿ ಮತ್ತೆ ಟ್ರೋಲ್‌ಗೆ ಗುರಿಯಾಗಿದೆ. ಚಿತ್ತು ಚಿತ್ತಾದ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡ ಅವರನ್ನು ಭಿಕ್ಷುಕನಿಗೆ ಹೋಲಿಸಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ವಿಶಿಷ್ಠ ಶೈಲಿಯ ಫ್ಯಾಷನ್‌ಗೆ ಹೆಸರುವಾಸಿ. ಚಿತ್ರ ವಿಚಿತ್ರ ಡ್ರೆಸ್ಸಿಂಗ್ ಶೈಲಿಯಲ್ಲಿ ಕಾಣಿಸಿಕೊಳ್ಳುವ ಕರಣ್ ಜೋಹರ್ ಕೇವಲ ನಿರ್ದೇಶಕ ಮಾತ್ರವಲ್ಲ, ಸ್ಟೈಲ್ ಐಕಾನ್ ಕೂಡ ಹೌದು. ಆದರೆ ಕರಣ್ ಜೋಹರ್ ಅವರ ವಿಚಿತ್ರ ಅವತಾರಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ. ಇದೇ ಕಾರಣಕ್ಕೆ ಅವರು ತಮ್ಮ ಈ ವಿಚಿತ್ರ ಡ್ರೆಸ್ಸಿಂಗ್ ಶೈಲಿಯ ಕಾರಣಕ್ಕೆ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಅದೇ ರೀತಿ ಈಗ ಕರಣ್ ಜೋಹರ್ ಈಗ ಮತ್ತೆ ತಮ್ಮ ವಿಶಿಷ್ಠ ಶೈಲಿಯ ಬಟ್ಟೆಯ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಫ್ಯಾಷನ್ ಹೆಸರಲ್ಲಿ ಅನೇಕರು ಚಿತ್ರ ವಿಚಿತ್ರವಾದ ಧಿರಿಸುಗಳನ್ನು ಧರಿಸುತ್ತಾರೆ. ಹರಿದ ಪ್ಯಾಂಟುಗಳು ಚೆಲ್ಲು ಚೆಲ್ಲಾದ ಟೀ ಶರ್ಟ್‌ಗಳು, ಜಿರಳೆ ತಿಂದಂತೆ ಅಲ್ಲಲ್ಲಿ ತೂತು ಬಿದ್ದ ಶರ್ಟುಗಳನ್ನು ಜನ ಫ್ಯಾಷನ್ ಹೆಸರಿನಲ್ಲಿ ಧರಿಸಿ ಓಡಾಡುವುದನ್ನು ನೀವು ನೋಡಬಹುದು. ಅದೇ ರೀತಿ ಕರಣ್ ಜೋಹರ್ ತಿಳಿ ಬೂದಿ ಬಣ್ಣದ ಚಲ್ಲು ಚಲ್ಲಾಗಿ ಚೆಲ್ಲಾಡುತ್ತಿರುವ ಟೀ ಶರ್ಟ್ ಹಾಗೂ ಪ್ಯಾಂಟ್ ಧರಿಸಿ ಪಾಪಾರಾಜಿಗಳಿಗೆ ಫೋಸ್ ಕೊಟ್ಟು ಮುಂದೆ ಹೋಗಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಫ್ಯಾಷನ್ ಹೆಸರಿನಲ್ಲಿ ಗತಿ ಇಲ್ಲದವರಂತೆ ಈ ರೀತಿ ಜಿರಳೆ ತಿಂದಂತಹ ಬಟ್ಟೆ ಧರಿಸಿರುವ ಕರಣ್ ಜೋಹರ್‌ನನ್ನು ಜನ ಸಖತ್ ಟ್ರೋಲ್ ಮಾಡ್ತಿದ್ದಾರೆ.
ಕೈಯಲ್ಲೊಂದು ಬ್ಯಾಗ್ ಹಿಡಿದುಕೊಂಡು ತೂತು ತೂತಾದ ಬಟ್ಟೆ ಧರಿಸಿಕೊಂಡು ಕರಣ್ ಜೋಹರ್ ತಲೆಗೊಂದು ಟೋಫಿ ಧರಿಸಿ ಕಣ್ಣಿಗೆ ಕನ್ನಡಕ ಹಾಕಿಕೊಂಡು ಏರ್‌ಫೋರ್ಟ್‌ಗೆ ಕರಣ್ ಜೋಹರ್ ಬಂದಿದ್ದು, ಅಲ್ಲಿ ಪಾಪಾರಾಜಿಗಳು ಕರಣ್‌ನ ಈ ವಿಚಿತ್ರ ಅವತಾರವನ್ನು ಸೆರೆ ಹಿಡಿದಿದ್ದಾರೆ. ಮ್ಯಾಚಿಂಗ್ ಪ್ಯಾಂಟ್ ಶರ್ಟ್ ಧರಿಸಿದ್ದು, ಪ್ಯಾಂಟ್‌ನ ಒಳಭಾಗವನ್ನು ಹೊರಭಾಗದಲ್ಲಿ(ಉಲ್ಟಾ) ಧರಿಸಿದಂತೆ ಕಂಡು ಬರುತ್ತಿದ್ದು, ಮೊಣಕಾಲಿನ ಜಾಗದಲ್ಲಿ ಬಿದ್ದಾಗ ಅಥವಾ ಆಕ್ಸಿಡೆಂಟ್ ಆದಾಗ ಕಲ್ಲು ತರಚಿ ಬಟ್ಟೆ ಹರಿದಂತೆ ದೊಡ್ಡ ಹಾಗೂ ಸಣ್ಣ ಸಣ್ಣ ಹಲವು ತೂತುಗಳಿವೆ. ಇನ್ನು ಇದಕ್ಕೆ ಮ್ಯಾಚ್ ಮಾಡಿರುವ ಟೀಶರ್ಟ್‌ನ ಕತೆ ಹೇಳೋದೇ ಬೇಡ. ಕುತ್ತಿಗೆ ಕತ್ತಿನ ಭಾಗ, ಹಾಗೂ ಎರಡು ಕೈಗಳ ತುದಿಗಳಲ್ಲಿ ಹರಿದು ಚಿತ್ತು ಚಿತ್ತಾದಂತೆ ಕಾಣಿಸುತ್ತಿದೆ.
ಈ ವೀಡಿಯೋ ನೋಡಿದ ಅನೇಕರು ಕರಣ್ ಜೋಹರ್‌ನನ್ನು ಭಿಕ್ಷುಕನಿಗೆ ಹೋಲಿಸಿದರೆ, ಭಿಕ್ಷುಕರು ಧರಿಸುವ ಧಿರಿಸಿಗಿಂತಲೂ ಈ ಬಟ್ಟೆ ಕೆಟ್ಟದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಲವರು ಅಂತಾರಾಷ್ಟ್ರೀಯ ಬೆಗ್ಗರ್ ಎಂದು ಕರೆದಿದ್ದಾರೆ. ಇವರು ಧರಿಸಿದರೆ ಫ್ಯಾಷನ್ ಅದರೆ ಪಾಪದವರು ಧರಿಸಿದರೆ ಭಿಕ್ಷುಕ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಉರ್ಫಿಯಿಂದ ಸ್ಪೂರ್ತಿ ಪಡೆದಿದ್ದು, ಓರಿಯಿಂದ ಕಾನ್ಫಿಡೆನ್ಸ್ ಪಡೆದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲರೂ ಶ್ರೀಮಂತರ ದರೋಡೆ ಮಾಡಿದ್ರ ಇವನ್ಯಾರೋ ಬಡವನ ಮನೆಯಲ್ಲಿ ದರೋಡೆ ಮಾಡಿದ ಹಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಈ ರೀತಿ ಭಿಕ್ಷುಕ ವೇಷ ಧರಿಸಿರುವ ಕರಣ್ ಜೋಹರ್ ಅವರು ಕೈಯಲ್ಲಿ ಹಿಡಿದಿರುವ ಬ್ಯಾಗ್ ಬೆಲೆ 18 ಲಕ್ಷ ರೂಪಾಯಿ ಎಂದರೆ ನೀವು ನಂಬಲೇಬೇಕು. ಹರ್ಮಿಸ್ ಬ್ರಾಂಡ್‌ನ ಶಾರ್ಕ್ ಬ್ಯಾಗ್ ಇದಾಗಿದೆ. 2024ರ ವರದಿಯ ಪ್ರಕಾರ ಕರಣ್ ಜೋಹರ್ ಅವರ ನೆಟ್‌ವರ್ತ್ ಸುಮಾರು 1400 ಕೋಟಿ. ನಿರ್ದೇಶಕನಾಗಿ ಹಣ ಗಳಿಕೆ ಮಾಡುತ್ತಿರುವುದಲ್ಲದೇ 9 ಯಶಸ್ವಿ ಬ್ರಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. 1976ರಲ್ಲಿ ಕರಣ್ ಜೋಹರ್ ತಂದೆ ಯಶ್ ಜೋಹರ್ ಅವರು ಸ್ಥಾಪಿಸಿದ ಧರ್ಮ ಪ್ರೊಡಕ್ಷನ್ ಕಲ್ ಹೋ ನಾ ಹೋ, ಕುಚ್ ಕುಚ್ ಹೋತಾ ಹೈ, ಯೇ ಜವಾನಿ ಹೈ ದೀವಾನಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಹಿಂದಿ ಚಿತ್ರರಂಗಕ್ಕೆ ನೀಡಿದೆ. ತಮ್ಮನ್ನು ತಾವು ಸಲಿಂಗಿ ಎಂದು ಗುರುತಿಸಿಕೊಂಡಿರುವ ಕರಣ್ ಜೋಹರ್ ಅವರು ಇಬ್ಬರು ಅವಳಿ ಮಕ್ಕಳಿಗೆ ಸಿಂಗಲ್ ಪೇರೆಂಟ್ ಕೂಡ ಆಗಿದ್ದಾರೆ.