Asianet Suvarna News Asianet Suvarna News

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳು ಹಿಟ್! ಕರಣ್ ಜೋಹರ್ ಪಾಲಾಗುತ್ತಾ ರಿಮೇಕ್ ಹಕ್ಕು?

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೈಡ್ ಎ ಹಾಗೂ ಬಿ ಸೂಪರ್ ಹಿಟ್ ಆಗಿದೆ. ಸೈಡ್ ಬಿ ರಿಲೀಸ್ ಆಗಿ ಥಿಯೇಟರ್ನಲ್ಲಿ ಭರ್ಜರಿಯಾಗಿ ಓಡುತ್ತಿದೆ. ಮನು ಪ್ರಿಯಾ ಪ್ರೀತಿ ಮಧ್ಯೆ ಸುರಭಿ ಎಂಟ್ರಿ ಆದ್ಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದಲ್ಲಿ ನೋಡಿ ಎಂಜಾಯ್ ಮಾಡ್ತಿದ್ದಾರೆ. 
 

Karan Johar to Acquire Hindi Remake Rights for Kannada Film Sapta Sagaradaache Ello gvd
Author
First Published Nov 23, 2023, 8:45 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸಿದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೈಡ್ ಬಿ ನವೆಂಬರ್​ 17ರಂದು ರಿಲೀಸ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಪ್ತ ಸಾಗರದಾಚೆ ಸೈಡ್ ಎ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಇದೀಗ ಸೈಡ್ ಬಿ ಕೂಡ ಪ್ರೇಕ್ಷಕರ ನಿರೀಕ್ಷೆ ಮುಟ್ಟಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಭಾಷೆಗಳಲ್ಲೂ ಕನ್ನಡ ಸಿನಿಮಾಗಳಿಗೆ ಡಿಮ್ಯಾಂಡ್​ ಹೆಚ್ಚಾಗಿದ್ದು, ಸಪ್ತ ಸಾಗರದಾಚೆ ಎಲ್ಲೋ  ಸಿನಿಮಾ ರಿಮೇಕ್ ಹಕ್ಕಿಗೆ ಪೈಪೋಟಿ ಜೋರಾಗಿದೆ ಎನ್ನುವ ಮಾತುಗಳ ಸಹ ಕೇಳಿ ಬಂದಿದೆ. 

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೈಡ್ ಎ ಹಾಗೂ ಬಿ ಸೂಪರ್ ಹಿಟ್ ಆಗಿದೆ. ಸೈಡ್ ಬಿ ರಿಲೀಸ್ ಆಗಿ ಥಿಯೇಟರ್ನಲ್ಲಿ ಭರ್ಜರಿಯಾಗಿ ಓಡುತ್ತಿದೆ. ಮನು ಪ್ರಿಯಾ ಪ್ರೀತಿ ಮಧ್ಯೆ ಸುರಭಿ ಎಂಟ್ರಿ ಆದ್ಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದಲ್ಲಿ ನೋಡಿ ಎಂಜಾಯ್ ಮಾಡ್ತಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ಮಾಣದ ಸಪ್ತ ಸಾಗದಾಚೆ ಎಲ್ಲೋ ಸಿನಿಮಾ ಎರಡು ಪಾರ್ಟ್ನಲ್ಲಿ ರಿಲೀಸ್ ಆಗಿ ಹಿಟ್ ಆಗಿದೆ. ಆದ್ರೆ ಈ ಸಿನಿಮಾಗಳು ಹಿಂದಿಗೆ ಡಬ್ ಆಗಿ ತೆರೆ ಕಂಡಿಲ್ಲ.  ಹೀಗಾಗಿ ಬಾಲಿವುಡ್ನಲ್ಲಿ ಈಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳ ರಿಮೇಕ್ಗೆ ಭಾರಿ ಡಿಮ್ಯಾಂಟ್ ಬಂದಿದೆ. 

ಬಾಲಿವುಡ್ ನ ಸ್ಟಾರ್ ಫಿಲ್ಮ್ ಮೇಕರ್ ಕರಣ್ ಜೋಹರ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ರಿಮೇಕ್ ರೈಟ್ಸ್ಗೆ ಬೇಡಿಕೆ ಇಟ್ಟಿದ್ದಾರಂತೆ. ರಕ್ಷತ್ ಶೆಟ್ಟಿ ಜೊತೆಗೂ ರಿಮೇಕ್ಸ್ ಹಕ್ಕು ಕೊಡಿ ಅಂತ ಕರಣ್ ಜೋಹರ್ ಮಾತನಾಡಿದ್ದಾರೆ. ಹಾಗೇನಾದ್ರು ಆದ್ರೆ ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳು ಹಿಂದಿಗೆ ರಿಮೇಕ್ ಆಗಿ ಹೊಸ ರೂಪದಲ್ಲಿ ಬಂದ್ರು ಆಶ್ಚರ್ಯವೇನಿಲ್ಲ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಸೈಡ್ ಬಿ ಪ್ರಸ್ತುತ ಎಲ್ಲಾ 4 ದಕ್ಷಿಣ ಭಾಷೆಗಳಲ್ಲಿ ರಿಲೀಸ್ ಆಗಿದೆ.  

'ಸ್ವಾತಿ ಮುತ್ತಿನ ಮಳೆ ಹನಿಯೇ' ಕತೆ ಏನು?: ನಿರ್ಮಾಪಕಿ ಆಗಿ ಲಾಂಚ್ ಆಗ್ತಿದ್ದಾರೆ ನಟಿ ರಮ್ಯಾ!

ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಕರಣ್ ಜೋಹರ್ ಹಿಂದಿಯಲ್ಲಿ ಈ ಸಿನಿಮಾ ರಿಮೇಕ್ ಮಾಡುವ ಯೋಜನೆಯಿಂದ ಯಾವುದೇ ಪ್ರಯೋಜನವಾಗೋದಿಲ್ಲ ಎಂಬ ಮಾತುಗಳು ಕೇಳಿ ಬರ್ತಿದೆ. ಡೈರೆಕ್ಟರ್ ಹೇಮಂತ್ ರಾವ್ ಸೈಡ್ ಬಿಯಲ್ಲಿ ಮತ್ತೊಂದು ಭಾವತೀವ್ರತೆಯ ವಿಷಯ ಹೇಳುತ್ತಿದ್ದಾರೆ. ಸೈಡ್ ಎ ಚಿತ್ರದ ಮುಂದುವರೆದ ಭಾಗ ಇದಾಗಿದ್ರೂ ಕೂಡ ಇಲ್ಲಿ ಇನ್ನೊಂದು ಟ್ರ್ಯಾಕ್ ಓಪನ್ ಆಗುತ್ತಿದೆ. ಸೈಡ್ ಎ ಕೊನೆಯಲ್ಲಿ ಇದರ ಝಲಕ್ ಕೊಟ್ಟು ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ. ಸೈಡ್ ಎ ಚಿತ್ರದಲ್ಲಿದ್ದ ಶರತ್ ಲೋಹಿತಾಶ್ವ ಪಾತ್ರ, ರಮೇಶ್ ಇಂದಿರಾ ಸೇರಿದಂತೆ ಇತರ ಪಾತ್ರಗಳ ರೂಪ ಸೈಡ್ ಬಿಯಲ್ಲಿ ಬದಲಾಗಿವೆ.

Follow Us:
Download App:
  • android
  • ios