Asianet Suvarna News Asianet Suvarna News

'ಸ್ವಾತಿ ಮುತ್ತಿನ ಮಳೆ ಹನಿಯೇ' ಕತೆ ಏನು?: ನಿರ್ಮಾಪಕಿ ಆಗಿ ಲಾಂಚ್ ಆಗ್ತಿದ್ದಾರೆ ನಟಿ ರಮ್ಯಾ!

ಈಗ ರಾಜ್ ಬಿ ಶೆಟ್ಟಿ ನಿಮ್ಮನ್ನ ಸ್ವಾತಿ ಮಳೆಯಲ್ಲಿ ನೆನೆಸೋಕೆ ರೆಡಿಯಾಗಿದ್ದಾರೆ. ಮಳೆಗಾಲ ಎಲ್ರಿಗೂ ಇಷ್ಟ. ಆದ್ರೆ ಈಗ ಮಳೆಗಾಲ ಮುಗಿತಾ ಬಂತು. ಮುಂಗಾರು ಹೋಗಿ ಹಿಂಗಾರು ಬಂದಿದೆ. ಭಟ್ ಕನ್ನಡ ಬೆಳ್ಳಿ ತೆರೆ ಮೇಲೆ ಮಾತ್ರ ಸ್ವಾತಿ ಮುತ್ತಿನ ಮಳೆ ಹನಿಗಳು ಪಟ ಪಟ ಅಂತ ಬೀಳೋ ಟೈಂ ಬಂದಿದೆ. 
 

Raj B Shetty Starrer Swathi Mutthina Male Haniye Released On Nov 24th gvd
Author
First Published Nov 23, 2023, 8:35 PM IST

ರಾಜ್ ಬಿ ಶೆಟ್ಟಿ ಹೇಳಿದ್ದ ಒಂದು ಮೊಟ್ಟೆ ಕಥೆ ನೋಡಿ ಖುಷಿ ಪಟ್ಟಿದ್ದಾಯ್ತು. ಆ ಬಳಿಕ ಗರುಡಾಗಮನ ರುಷಭ ವಾಹಸ ಮಾಡಿ ರಕ್ತವನ್ನ ಮೈ ಮೇಲೆ ಎರಚಿಕೊಂಡ್ರು ಶೆಟ್ರು. ನಾನ್ ಗುಬ್ಬಿ ನನ್ ಮೇಲೆ ಬ್ರಹ್ಮಾಸ್ರ್ತ ಪ್ರಯೋಗ ಮಾಡ್ಬೇಡಿ ಅಂತ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾನೂ ಕೊಟ್ರು. ಇದಾದ್ಮೇಲೆ ಟೋಬಿಯಲ್ಲಿ ನಿಮಗೆ ಥ್ರಿಲ್ ಹುಟ್ಟಿಸಿದ್ರು. ಈಗ ರಾಜ್ ಬಿ ಶೆಟ್ಟಿ ನಿಮ್ಮನ್ನ ಸ್ವಾತಿ ಮಳೆಯಲ್ಲಿ ನೆನೆಸೋಕೆ ರೆಡಿಯಾಗಿದ್ದಾರೆ. ಮಳೆಗಾಲ ಎಲ್ರಿಗೂ ಇಷ್ಟ. ಆದ್ರೆ ಈಗ ಮಳೆಗಾಲ ಮುಗಿತಾ ಬಂತು. ಮುಂಗಾರು ಹೋಗಿ ಹಿಂಗಾರು ಬಂದಿದೆ. ಭಟ್ ಕನ್ನಡ ಬೆಳ್ಳಿ ತೆರೆ ಮೇಲೆ ಮಾತ್ರ ಸ್ವಾತಿ ಮುತ್ತಿನ ಮಳೆ ಹನಿಗಳು ಪಟ ಪಟ ಅಂತ ಬೀಳೋ ಟೈಂ ಬಂದಿದೆ. 

ಇದೇ ವಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರೋ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ತೆರೆ ಕಾಣುತ್ತಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ ನಿರ್ಮಾಪಕಿ ಕ್ವೀನ್ ರಮ್ಯಾ. ಆ್ಯಪಲ್ ಬಾಕ್ಸ್ ಅನ್ನೋ ಸಂಸ್ಥೆ ಹುಟ್ಟಾಗಿ ಅದರಡಿಯಲ್ಲೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಮ್ಯಾ ನಿರ್ಮಾಪಕಿ ಆಗಿ ಡೆಬ್ಯೂ ಆಗ್ತಿರೋ ಫಸ್ಟ್ ಸಿನಿಮಾ ಇದು. ಹೀಗಾಗಿ ಎಲ್ಲಾ ಸಿನಿಮಾದಲ್ಲೂ ಎಲ್ಲಾ ಕ್ಷೇತ್ರದಲ್ಲೂ ಸಕ್ಸಸ್ ಕಂಡಿರೋ ಪದ್ಮಾವತಿ ನಿರ್ಮಾಪಕಿ ಆಗಿಯೂ ಗೆಲ್ತಾರೆ ಅನ್ನೋ ನಿರೀಕ್ಷೆ ಇದೆ. ಯಾಕಂದ್ರೆ ಇದು ರಾಜ್ ಬಿ ಶೆಟ್ಟಿ ಸಿನಿಮಾ. 

ರಾಜ್‌ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ನಟನೆಯ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇಂಟ್ರೆಸ್ಟಿಂಗ್ ಆಗಿದೆ. ನಟನೆ ಜತೆಗೆ ನಿರ್ದೇಶನ ಮಾಡಿರುವ ರಾಜ್‌ ಬಿ ಶೆಟ್ಟಿ, ಬದುಕುವ ಅವಕಾಶ ಕಳೆದುಕೊಂಡು ಸಾವಿಗೆ ಎದುರು ನೋಡುತ್ತಿದ್ದವನ ರೋಲ್ ಮಾಡಿದ್ದಾರೆ. ಕೌನ್ಸಿಲರ್ ಪಾತ್ರದಲ್ಲಿ ನಟಿ ಸಿರಿ ರವಿಕುಮಾರ್‌ ಅಭಿನಯಿಸಿದ್ದಾರೆ. ರಾಜ್‌ ಬಿ ಶೆಟ್ಟಿಯದ್ದು ಆ ಕೌನ್ಸಿಲಿಂಗ್‌ ಕೇಂದ್ರಕ್ಕೆ ಸೇರುವ ಪೇಷೆಂಟ್‌ ರೋಲ್. ಬರೀ 18 ದಿನದಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಮುಗಿಸಿದ್ದಾರೆ ರಾಜ್ ಬಿ ಶೆಟ್ಟಿ. ಇದೇ ವಾರ ತೆರೆ ಮೇಲೆ ಬರುತ್ತಿರೋ ಈ ಸಿನಿಮಾ ರಾಜ್ ಬಿ ಶೆಟ್ಟಿಗೆ ಹಾಗು ರಮ್ಯಾಗೆ ಬ್ರೇಖ್ ತ್ರೂ ಕೊಡೋದು ಗ್ಯಾರಂಟಿ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ, ನಾನೊಬ್ಬ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ವಿದ್ಯಾರ್ಥಿ. ನಾನು ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಸಾವಿನಂಚಿನಲ್ಲಿರುವ ರೋಗಿಗಳನ್ನು ಶುಶ್ರೂಷೆ ಮಾಡುವ ಕೇಂದ್ರಕ್ಕೆ ಭೇಟಿ ನೀಡಿದಾಗ ಈ ಕಥೆ ಮಾಡಬೇಕೆನಿಸಿತು. ಇನ್ನು ಸ್ವಾತಿ ಮಳೆಯ ನೀರು ಆರೋಗ್ಯಕರ ಎಂದು ಆಯುರ್ವೇದ ಹೇಳುತ್ತದೆ. ಈ ಮಳೆಯ ನೀರು ಕಪ್ಪೆಚಿಪ್ಪಿನ ಜೊತೆ ಸೇರಿ ಮುತ್ತಾಗುತ್ತದೆ. 

ಈ ವಾರ ತೆರೆ ಮೇಲೆ 'ಶುಗರ್ ಫ್ಯಾಕ್ಟರಿ' ರಿಲೀಸ್: ಪಬ್‌ನಿಂದ ಆರಂಭ.. ಪಬ್‌ನಲ್ಲೇ ಕ್ಲೈಮ್ಯಾಕ್ಸ್.!

ಹಾಗಾಗಿ ನಮ್ಮ ಚಿತ್ರದ ಕಥೆಗೆ ಈ ಶೀರ್ಷಿಕೆ ಸರಿ ಹೊಂದುವುದರಿಂದ "ಸ್ವಾತಿ ಮುತ್ತಿನ ಮಳೆ ಹನಿಯೇ" ಎಂದು ಶೀರ್ಷಿಕೆ ಇಟ್ಟಿದ್ದೇವೆ. ಅನಿಕೇತ್ ನನ್ನ ಪಾತ್ರದ ಹೆಸರು. ಮಿಥುನ್ ಮುಕುಂದನ್ ಸುಮಧುರ ಸಂಗೀತದಲ್ಲಿ ಚಿತ್ರದ ಹಾಡುಗಳು ಇಂಪಾಗಿ ಮೂಡಿಬಂದಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಕೂಡ ಚೆನ್ನಾಗಿ ಬಂದಿದೆ ಎಂದರು. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಪ್ರೇರಣ. ಹಾಸ್ ಪೈಸ್ ವೊಂದರಲ್ಲಿ ಕೌನ್ಸಿಲರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ. ಸಾವಿನಂಚಿನಲ್ಲಿರುವವರಿಗೆ ಸಾವಿನ ಬಗ್ಗೆ ಧೈರ್ಯ ತುಂಬುವ ಪಾತ್ರ ಎನ್ನಬಹುದು ಎಂದು ನಾಯಕಿ  ಸಿರಿ ರವಿಕುಮಾರ್ ತಿಳಿಸಿದರು. 

Follow Us:
Download App:
  • android
  • ios