Asianet Suvarna News Asianet Suvarna News

ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ, ಕಾಲುಗಳು ನಡುಗುತ್ತಿದ್ದವು ಎಂದು ನೆನಪಿಸಿಕೊಂಡ ಕರಣ್​ ಜೋಹರ್​

ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ ಎಂದು ಹೇಳಿಕೊಂಡಿರುವ ನಿರ್ಮಾಪಕ ಕರಣ್​ ಜೋಹರ್​ ಅವರನ್ನು ಮೊದಲ ಬಾರಿ ಭೇಟಿಯಾದ ಅನುಭವ ತಿಳಿಸಿದ್ದಾರೆ.
 

Karan Johar shares he was crazily and madly in love with Shreedevi and knees were rattling suc
Author
First Published Jan 3, 2024, 1:15 PM IST

80-90ರ ದಶಕದಲ್ಲಿ ಬಾಲಿವುಡ್​ ಚಿತ್ರದಲ್ಲಿ ನಂ.1 ಪಟ್ಟವನ್ನು ಯಾರಿಗೂ ಬಿಟ್ಟುಕೊಡದಿದ್ದ ಚೆಲುವೆ ಶ್ರೀದೇವಿ (Shreedevi). ತಮ್ಮ ಮುಗ್ಧ ಮುಖ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಇವರು ಎಲ್ಲರ ಮನಸ್ಸು ಕದ್ದವರು. 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್‌ ಪ್ರಶಸ್ತಿ ಸೇರಿದಂತೆ ತಮ್ಮ ನಟನೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1997ರಿಂದ  ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಶ್ರೀದೇವಿ, 2012ರಲ್ಲಿ 'ಇಂಗ್ಲಿಷ್‌ಗೌರಿ ಶಿಂಧೆ ನಿರ್ದೇಶನದ  -ವಿಂಗ್ಲಿಷ್‌' ಚಿತ್ರದ ಮೂಲಕ ಮತ್ತೆ ನಟನೆಗೆ ವಾಪಸ್‌ ಆದರು. ಇದು ಇಂಗ್ಲಿಷ್​ ಬರದೇ ಮನೆಯವರಿಂದ ಕಡೆಗಣನೆಗೆ ಒಳಗಾಗುವ ಪಾತ್ರದಲ್ಲಿ ನಟಿಸಿದ್ದರು ಶ್ರೀದೇವಿ. ಈ ಚಿತ್ರವನ್ನೂ ಜನರ ಅದರಲ್ಲಿಯೂ ಗೃಹಿಣಿಯರ ಅಚ್ಚುಮೆಚ್ಚಿನದ್ದಾಗಿತ್ತು. ಶ್ರೀದೇವಿ  ಈ ಚಿತ್ರದಲ್ಲಿ ಶಶಿ (Shashi) ಹೆಸರಿನ ಪಾತ್ರ ಮಾಡಿದ್ದರು. ಶಶಿ ಮದುವೆ ಆದ ನಂತರದಲ್ಲಿ ಮನೆ ನೋಡಿಕೊಂಡಿರುವ ಗೃಹಿಣಿ.  ಮಕ್ಕಳು, ಗಂಡ ಆಕೆಯ ಪ್ರಪಂಚ. ಇಂಗ್ಲಿಷ್ ಬರುವುದಿಲ್ಲ ಎಂದು ಆಕೆಯನ್ನು ಕುಟುಂಬದವರೇ ಹಂಗಿಸುತ್ತಾರೆ. ಈ ಕಾರಣಕ್ಕೆ ಆಕೆ ಇಂಗ್ಲಿಷ್ ಕಲಿಯುವ ಪ್ರಯತ್ನ ಮಾಡುತ್ತಾಳೆ. ನಂತರ ಇಂಗ್ಲಿಷ್ ಕಲಿತು ಮಾತನಾಡುತ್ತಾಳೆ. ಸಿನಿಮಾ ಕೊನೆಯಲ್ಲಿ ಆಕೆ ಅರ್ಥಪೂರ್ಣವಾಗಿ ಇಂಗ್ಲಿಷ್ ಮಾತನಾಡುತ್ತಾಳೆ. ಈ ಚಿತ್ರದ ಸಂದೇಶ ಬಹಳ ಮೆಚ್ಚುಗೆಗೆ ಒಳಗಾಗಿತ್ತು. 

ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ (sad end) ಕಂಡು ಆರು ವರ್ಷಗಳಾಗುತ್ತಾ ಬಂದಿವೆ.  ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ  (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಇದೀಗ ಶ್ರೀದೇವಿಯವರನ್ನು ನೆನಪು ಮಾಡಿಕೊಂಡಿದ್ದಾರೆ ನಿರ್ದೇಶಕ, ನಿರ್ಮಾಪಕ ಕರಣ್​ ಜೋಹರ್​. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಮತ್ತು ಖುಷಿ ಕಪೂರ್​ ಜೊತೆ ತಮ್ಮ ಷೋ ಕಾಫಿ ವಿತ್​ ಕರಣ್​ನಲ್ಲಿ ಶ್ರೀದೇವಿಯವರನ್ನು ತಾವು ಎಷ್ಟು ಹುಚ್ಚನಂತೆ  ಪ್ರೀತಿಸುತ್ತಿದ್ದೆ ಎನ್ನುವುದನ್ನು ಕರಣ್​ ಬಹಿರಂಗಪಡಿಸಿದ್ದಾರೆ. 

ಮತ್ತೆ ಮುನ್ನೆಲೆಗೆ ಬಂತು ಮೀ ಟೂ: ಕಮಲ ಹಾಸನ್​ ವಿರುದ್ಧ ಖ್ಯಾತ ಗಾಯಕಿ ಚಿನ್ಮಯಿ ಕೆಂಡಾಮಂಡಲ!

 ಶ್ರೀದೇವಿ ಪುತ್ರಿಯರನ್ನು ಉದ್ದೇಶಿಸಿ ಕರಣ್​, 'ನಿಮಗೆ ತಿಳಿಯದೇ ಇರುವ  ಒಂದು ವಿಷಯವನ್ನು ನಾನು ಹೇಳಬೇಕಾಗಿದೆ. ನಾನು ನಿಮ್ಮ ತಾಯಿಯೊಂದಿಗೆ ಎಷ್ಟು ಹುಚ್ಚನಾಗಿದ್ದೆ  ಮತ್ತು ಎಷ್ಟು ಹುಚ್ಚುತನದ ಪ್ರೀತಿಯಲ್ಲಿದ್ದೆ ಎಂಬುದನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ.  ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ. ಅವರನ್ನು ಕಂಡಾಗ ನನ್ನ ಕಾಲುಗಳು ಕುಣಿಯಲು ಆರಂಭಿಸುತ್ತಿದ್ದವು' ಎಂದಿದ್ದಾರೆ ಕರಣ್​ ಜೋಹರ್​. ನೀವೆಲ್ಲರೂ ಈಗ ವಿಭಿನ್ನವಾದ ತಂತ್ರಜ್ಞಾನದ ಮೂಲಕ ಬದುಕಿದ್ದೀರಿ. ಆದರೆ ನಮ್ಮ ಕಾಲದಲ್ಲಿ ಹಾಗಿರಲಿಲ್ಲ. ನೆಚ್ಚಿನ ತಾರೆಯರನ್ನು ನೋಡಬೇಕು ಎಂದರೆ ಸಿನಿಮಾ ಹಾಲ್​ಗಳಿಗೇ ಹೋಗಬೇಕಿತ್ತು.  ನಾನು ವಾಸಿಸುತ್ತಿದ್ದ ಊರಿನಲ್ಲಿ ಯಾರೂ ಹಿಂದಿ ಸಿನಿಮಾ ನೋಡಲು ಹೋಗುತ್ತಿರಲಿಲ್ಲ. ಆದರೆ ಶ್ರೀದೇವಿಯವರ ಸಿನಿಮಾ ಬಂದರೆ ನಾನು ನೋಡದೇ ಬಿಡುತ್ತಿರಲಿಲ್ಲ. ಅದು ಶ್ರೀದೇವಿ  ಮತ್ತು ಜೀತೇಂದ್ರ ಅವರ ಸಿನಿಮಾ ಬಂದರಂತೂ ಎಷ್ಟೇ ದೂರವಿದ್ದರೂ ಹೋಗಿ ನೋಡುತ್ತಿದ್ದೆ. ಅಷ್ಟು ಹುಚ್ಚನಾಗಿದ್ದೆ ನಾನು ಎಂದು ಕರಣ್​ ಹೇಳಿದ್ದಾರೆ. 

ಮೊದಲ ಬಾರಿಗೆ ಶ್ರೀದೇವಿಯವರನ್ನು ನೋಡಿದ್ದು 1993ರಲ್ಲಿ. ಅವರು ನನ್ನ ತಂದೆ ನಿರ್ದೇಶಿಸಿದ  ಗುಮರಾಹ್​ ಎಂಬ ಚಲನಚಿತ್ರದಲ್ಲಿ ನಟಿಸುತ್ತಿದ್ದರು. ಆಗ ಶ್ರೀದೇವಿಯನ್ನು ಭೇಟಿ ಮಾಡಲು ಓಡಿ ಹೋಗಿದ್ದೆ. ಅವರ ಫೋಟೋ ಶೂಟ್​ ನಡೆಯುತ್ತಿತ್ತು. ಆಗ ಶ್ರೀದೇವಿಯರನ್ನು ಮೀಟ್​ ಮಾಡುವ ಅವಕಾಶ ನನಗೆ ಸಿಗುತ್ತದೆ ಎಂದು ತಿಳಿದು ನರ್ವಸ್​ ಆಗಿದ್ದದೆ. ನನ್ನ ಕಾಲುಗಳು ನಡುಗುತ್ತಿದ್ದವು ಎಂದು ನೆನಪಿಸಿಕೊಂಡಿರುವ ಕರಣ್​ ಜೋಹರ್​, ಶ್ರೀದೇವಿಯ ಮಿಸ್ಟರ್ ಇಂಡಿಯಾ ಚಿತ್ರ ನೋಡಿದ ಮೇಲಂತೂ ಮತ್ತೂ ಹುಚ್ಚುನಾಗಿ ಹೋಗಿದ್ದೆ ಎಂದಿದ್ದಾರೆ. ಮೊದಲಿಗೆ ಶ್ರೀದೇವಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಾಗ, ಅವರನ್ನು ನೋಡಿ ಏನೇನೋ ಹೇಳಬೇಕು ಅಂದುಕೊಂಡಿದ್ದೆ. ನೀವು ತುಂಬಾ ಸುಂದರವಾಗಿದ್ದೀರಿ ಎಂದು ಹೇಳುವ ಮನಸ್ಸಾಗಿತ್ತು. ಆದರೆ ಅವರನ್ನು ನೋಡಿ ಅಕ್ಷರಶಃ ಹೆದರಿ ಬಿಟ್ಟಿದ್ದೆ. ಬಾಯಿಯಿಂದ ಯಾವ ಪದಗಳೂ ಹೊರಡಲಿಲ್ಲ. ಏನು ಮಾತನಾಡುವುದು ಎಂದು ತಿಳಿಯದೇ ಮೂಕ ವಿಸ್ಮಿತನಾಗಿ ಅವರನ್ನು ನೋಡುತ್ತಾ ನಿಂತುಬಿಟ್ಟಿದ್ದೆ ಎಂದಿದ್ದಾರೆ. 
ಕಂಠಿ ಬಿಟ್ಟು ಅಕ್ಕನ ಗಂಡನಿಗೆ ಐ ಲವ್​ ಯು ಅನ್ನೋದಾ ಸ್ನೇಹಾ? ಇದೆಂಥ ಹೊಸ ಲವ್ವಿ ಡವ್ವಿ?

Follow Us:
Download App:
  • android
  • ios