Karan Johar ಸೆಕ್ಸ್‌ ಲೈಫ್‌ ಬಗ್ಗೆ ಕ್ಯೂರಿಯಾಸಿಟಿ ಜಾಸ್ತಿ; ಶಾರುಖ್-ರಣಬೀರ್ ಶೋಗೆ ಬರದಿರಲು ಇದೇ ಕಾರಣ!

ಕಾಫಿ ವಿತ್ ಕರಣ್ ಕಾರ್ಯಕ್ರಮದಿಂದ ಶಾರುಖ್ ಖಾನ್ ಮತ್ತು ರಣಬೀರ್ ಕಪೂರ್ ದೂರ ಉಳಿದುಕೊಳ್ಳಲು ಕಾರಣವೇನು? ಕೊನೆಗೂ ಸತ್ಯ ರಿವೀಲ್...

Karan Johar answers why Shah rukh khan Ranbir kapoor didnt appear in koffee with Karan vcs

ಬಾಲಿವುಡ್ ಕಾಂಟ್ರವರ್ಷಿಯಲ್ ಮ್ಯಾನ್, ಡಿಫರೆಂಟ್ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಕರಣ್ ಜೋಹಾರ್ (Karan Johar) ನೇತೃತ್ವದಲ್ಲಿ ಮೂಡಿ ಬರುತ್ತಿರುವ ಟಾಕ್‌ ಶೋ ಕಾಫಿ ವಿತ್ ಕರಣ್ 7ನೇ (Koffee with karan) ಸೀಸನ್‌ಗೆ ಕಾಲಿಟ್ಟಿದೆ. ಇಲ್ಲಿ ಸಿನಿಮಾ ಪ್ರಚಾರ ಅಗಿದ್ದಕ್ಕಿಂತ ರಿಲೇಷನ್‌ಶಿಪ್‌ ಸೀಕ್ರೆಟ್‌ಗಳು ರಿವೀಲ್ ಆಗಿದ್ದೇ ಹೆಚ್ಚು, ಹೀಗಾಗಿ ಕರಣ್ ಜೊತೆ ಕಾಫಿ ಕುಡಿದವರಿಗೆ ಒಂದೆರಡು ತಿಂಗಳು ಪ್ರಚಾರ ಅಗತ್ಯವೇ ಇಲ್ಲ. ಬಂದವರೇ ಬರುತ್ತಾರೆ ಬೋರ್ ಅಗುತ್ತದೆ ಶಾರುಖ್‌ ಖಾನ್ ಮತ್ತು ರಣಬೀರ್ ಯಾಕೆ ಬರೋಲ್ಲ ಹಾಗೆ ಹೀಗೆ ಎಂದು ಪದೇ ಪದೇ ಪ್ರಶ್ನೆ ಕೇಳುವವರಿಗೆ ಕರಣ್ ಖಾಸಗಿ ವರದಿ ಮೂಲಕ ಉತ್ತರ ಕೊಟ್ಟಿದ್ದಾರೆ.

ಕರಣ್ ಜೋಹಾರ್ ತಮ್ಮ ಶೋನಲ್ಲಿ ಸೆಲೆಬ್ರಿಟಿಗಳು ಎಂದೂ ರಿವೀಲ್ ಮಾಡಿರದ ಹಾಗೂ ಎಲ್ಲಿಯೂ ಹೇಳಿಕೊಳ್ಳಲಾಗದ ವಿಚಾರಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಕಾಂಟ್ರವರ್ಸಿ ಬೇಡ ಎಂದು ಕೆಲವರು ದೂರ ಉಳಿಯುತ್ತಾರೆ. 'ನನಗೆ ಜನರ ಸೆಕ್ಸ್‌ ಲೈಫ್ ಬಗ್ಗೆ ತುಂಬಾನೇ ಕ್ಯೂರಿಯಾಸಿಟಿ ಅವರನ್ನು ಪ್ರಶ್ನೆ ಮಾಡುತ್ತೀನಿ ಎಂದು ಬರುವುದಿಲ್ಲ. ಆಲಿಯಾ ಭಟ್ ಬಗ್ಗೆ ನನಗೆ ಹೆಮ್ಮೆ, ನಾವು ಪ್ರತಿಯೊಂದು ಸಂದರ್ಶನದಲ್ಲೂ ಮಾತನಾಡುತ್ತೀವಿ ಆಕೆ ತಪ್ಪು ತಿಳಿದುಕೊಳ್ಳುವುದಿಲ್ಲ. ನನಗೆ ನೆಗೆಟಿವ್ ಫೀಡ್‌ ಬಂದರೆ ಅದನ್ನು ಹ್ಯಾಂಡಲ್ ಮಾಡಲು ಪೊಲೀಸರು ಇದ್ದಾರೆ' ಎಂದು ಕರಣ್ ಜೋಹಾರ್ ಹೇಳಿದ್ದಾರೆ. 

Karan Johar answers why Shah rukh khan Ranbir kapoor didnt appear in koffee with Karan vcs

ಕಾಫಿ ವಿತ್ ಕರಣ್ ಸೀಸನ್ 7ರಲ್ಲಿ ಕರೀನಾ ಕಪೂರ್, ಕತ್ರಿನಾ ಸೈಫ್, ಸೋನಂ ಕಪೂರ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಆಲಿಯಾ ಭಟ್, ಅನಿಲ್ ಕಪೂರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.  ಶಾರುಣ್ ಖಾನ್ ಎರಡು ಮೂರು ಸಲ ಸೀಸನ್‌ನಲ್ಲಿ ಭಾಗಿಯಾಗಿದ್ದರೂ ಎಪಿಸೋಡ್‌ಗಳು ಹೆಚ್ಚಿನ ವೀಕ್ಷಣೆ ಪಡೆಯಲಿಲ್ಲ ಇದಕ್ಕೆ ಕಾರಣ ಕರಣ್ ಯಾವ ರೀತಿನೂ ಕಾಂಟ್ರವರ್ಸಿ ಪ್ರಶ್ನೆ ಹೇಳಲಿಲ್ಲ ಹಾಗೂ ಎಲ್ಲಾದಕ್ಕೂ ಶಾರುಖ್ ತುಂಬಾ ಸಿಂಪಲ್ ಆಗಿ ಉತ್ತರ ಕೊಟ್ಟಿದ್ದರು. ರಣಬೀರ್ ಕಪೂರ್ ಕಾಂಟ್ರವರ್ಸಿ ಅಗುತ್ತೆ ಅನ್ನೋ ಭಯಕ್ಕೆ ಮೌನವಾಗಿರುತ್ತಾರೆ. 

Karan Johar ಇದ್ದಕ್ಕಿದ್ದಂತೆ ಟ್ವಿಟರ್‌ಗೆ ಗುಡ್‌ ಬೈ ಹೇಳಿದ ನಿರ್ದೇಶಕ!

ಯಾಕೆ ಹೆಚ್ಚಿನ ಸೆಲೆಬ್ರಿಟಿಗಳನ್ನು ಕರೆಯುವುದಿಲ್ಲ ಎಂದು ಕರಣ್‌ನ ಪ್ರಶ್ನೆ ಮಾಡಿದಾಗ ನೆಟ್ಟಿಗರಿಗೆ ಉತ್ತರ ಸಿಕ್ಕಿದೆ. 'ಕಾಫಿ ವಿತ್ ಕರಣ್ ಕಾರ್ಯಕ್ರಮ 12 ಎಪಿಡೋಸ್‌ಗಳಿರುತ್ತದೆ ಹೀಗಾಗಿ 26 ವ್ಯಕ್ತಿಗಳಿಗಿಂತ ಹೆಚ್ಚಾಗಿ ಯಾರನ್ನೂ ಕರೆಯುವಂತಿಲ್ಲ. ನಾನು ಎಂದೂ ಶೋ ಬರುವುದಿಲ್ಲ ಎಂದು ಹಾಸ್ಯ ಮಾಡಿದ್ದಾನೆ ಆದರೆ ಮುಂದಿನ ಸೀಸನ್‌ಗೆ ಕರೆಯುವ ಪ್ರಯತ್ನ ಮಾಡುತ್ತೀನಿ. ನಮ್ಮ ಶೋಲ್ಲಿ ರಣಬೀರ್ ಮ್ಯಾಜಿಕ್ ಕ್ರಿಯೇಟ್ ಮಾಡುತ್ತಾರೆ ಆದರೆ ಕಾಂಟ್ರವರ್ಸಿ ಭಯಕ್ಕೆ  ಸುಮ್ಮನಾಗುತ್ತಾರೆ' ಎಂದಿದ್ದಾರೆ ಕರಣ್.

ಗೌರಿ ಖಾನ್‌ ಸೀಸನ್ 7ರ ಒಂದು ಎಪಿಸೋಡ್‌ನಲ್ಲಿ ಭಾಗಿಯಾಗಿ ಪತಿ ಶಾರುಖ್‌ಗೆ ಫೋನ್ ಕಾಲ್ ಮಾಡಿದ್ದರು. ಕಿಂಗ್ ಧ್ವನಿ ಕೇಳಿ ನೆಟ್ಟಿಗರು ಥ್ರಿಲ್ ಆಗಿದ್ದಾರೆ. 

ಶೋನಲ್ಲಿ ಏನೆಲ್ಲಾ ಬದಲಾವಣೆಗಳು ಅಗಿದೆ?

'ಈಗ ಸೆಲೆಬ್ರಿಟಿಗಳು ತುಂಬಾನೇ ತಯಾರಿ ಮಾಡಿಕೊಂಡಿರುತ್ತಾರೆ. ಅದರಲ್ಲೂ  Rapid fire ಸಮಯದಲ್ಲಿ ಬೇಗ ಉತ್ತರ ಕೊಟ್ಟರೂ ಯೋಚನೆ ಮಾಡಿ ಕೊಡುತ್ತಾರೆ. ಹೀಗಾಗಿ ಮುಂದಿನ ಸೀಸನ್‌ನಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂದು ಪ್ಲ್ಯಾನ್ ನಡೆಯುತ್ತಿದೆ. ಯಾರಿಗೂ ಬೇಸರ ಮಾಡುವುದಕ್ಕೆ ಇಷ್ಟವಿಲ್ಲ ತಮಾಷೆ ಮಾಡುವುದಕ್ಕೂ ಮಿತಿ ಇರುತ್ತದೆ. ಎಲ್ಲಾ ರೀತಿ ನನ್ನ ತಂಡ ಯೋಚನೆ ಮಾಡಿ ಪ್ರಶ್ನೆ ತಯಾರಿ ಮಾಡುತ್ತಾರೆ' ಎಂದಿದ್ದಾರೆ ಕರಣ್.

Latest Videos
Follow Us:
Download App:
  • android
  • ios