ಕೊಮೆಡಿಯನ್ ಕಪಿಲ್ ಶರ್ಮಾ ತಮ್ಮ ಬ್ಯುಸಿ ಶೆಡ್ಯೂಲ್ ಎಡ್ಜೆಸ್ಟ್ ಮಾಡ್ಕೊಂಡು ಮಗಳ ಬರ್ತ್‌ಡೇ ಆಚರಿಸಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ  ಮುದ್ದು ಕಂದನ ಫೋಟೋವನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ.

ಫ್ರಿಲ್ಲಿ ಪಿಂಕ್ ಡ್ರೆಸ್ ಹಾಕಿದ್ದ ಕಪಿಲ್ ಶರ್ಮಾ ಪುತ್ರಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾಳೆ. ಮಗಳು ಅನೈರಾ ಫೋಟೋ ಶೇರ್ ಮಾಡಿದ ಕೂಡಲೇ ಫ್ಯಾನ್ಸ್ ಶುಭಾಶಯಗಳನ್ನು ತಿಳಿಸಿದ್ದಾರೆ. ಪತ್ನಿ ಹಾಗೂ ಪುತ್ರಿ ಜೊತೆ ಫೋಗೆ ಪೋಸ್‌ ಕೊಟ್ಟಿದ್ದಾರೆ ಕಪಿಲ್ ಶರ್ಮಾ.

'ರೈತರ ದಿಕ್ಕು ತಪ್ಪಿಸ್ತಿದ್ದಾರೆ': ಪ್ರಿಯಾಂಕ ಬಗ್ಗೆ ಕಂಗನಾ ಕಿಡಿ

ನಮ್ಮ ಮಗಳ ಮೊದಲ ಬರ್ತ್‌ಡೇಗೆ ಶುಭಾಶಯ ಮತ್ತು ಪ್ರೀತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಕ್ಯಾಪ್ಶನ್ ಕೊಟ್ಟು ಬ್ಯೂಟಿಫುಲ್ ಸ್ಮೈಲ್ ಕೊಡೋ ಮಗುವಿನ ಫೋಟೋ ಸೇರ್ ಮಾಡಿದ್ದಾರೆ.  2019 ಡಿಸೆಂಬರ್‌ನಲ್ಲಿ ಕಪಿಲ್ ಶರ್ಮಾ ತಮ್ಮ ಮಗಳ ಆಗಮನದ ಸುದ್ದಿಯನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದರು. ಹೆಣ್ಣು ಮಗುವನ್ನು ಪಡೆದಿದ್ದೇವೆ. ನಿಮ್ಮ ಆಶಿರ್ವಾದವಿರಲಿ ಎಂದು ಸಿಹಿ ಸುದ್ದಿ ಹಂಚಿಕೊಂಡಿದ್ದರು.

ಕಪಿಲ್ ಶರ್ಮ ಗಿನ್ನಿ ಛತ್ರತ್ ಅವರನ್ನು ಹಿಂದೂ ಸಿಖ್ಖ್ ಸಂಪ್ರದಾಯದಂತೆ ವಿವಾಹವಾಗಿದ್ದರು. 2018 ಡಿಸೆಂಬರ್‌ನಲ್ಲಿ ಜಲಂಧರ್‌ನಲ್ಲಿ ವಿವಾಹ ನಡೆದಿತ್ತು. ನಂತರ ಅಮೃತ್‌ಸರ ಮತ್ತು ಮಂಬೈನಲ್ಲಿ ಗ್ರ್ಯಾಂಡ್ ರಿಸೆಪ್ಶನ್ ಪಾರ್ಟಿ ನಡೆದಿತ್ತು.

ಕೊರೋನಾ ರೋಗಿಗಳಿಗೆ 500 Remdesivir ಇಂಜೆಕ್ಷನ್ ನೀಡಿದ ಶಾರೂಖ್

ಕಪಿಲ್ ಶರ್ಮಾ ದಿ ಕಪಿಲ್ ಶರ್ಮಾ ಶೋ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಇವರು ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಸೀಸನ್ 3ರ ಮೂಲಕ ಟಿವಿ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಕಿಸ್‌ ಕಿಸ್‌ಕೋ ಪ್ಯಾರ್ ಕರೂಂ ಸಿನಿಮಾದಲ್ಲಿ ನಟಿಸಿದ್ದಾರೆ.