ಬಂಧನಕ್ಕೊಳಗಾದ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿ ಎಂದು ರೈತರು ಪ್ರತಿಭಟನೆ ಮಾಡುವ ಫೋಟೋಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಕಂಗನಾ ರಣಾವತ್ ಸಿಂಗರ್ ದಿಲ್ಜಿತ್ ದೋಸಂಜ್ ಹಾಗೂ ಪ್ರಿಯಾಂಕ ಚೋಪ್ರಾ ವಿರುದ್ಧ ಕಿಡಿ ಕಾರಿದ್ದಾರೆ. ಹೊಸ ಫಾರ್ಮ್‌ ಬಿಲ್ಸ್ ವಿರುದ್ಧ ಹೋರಾಡುತ್ತಿದ್ದ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಸಮಸ್ಯೆ ರೈತರದ್ದಲ್ಲ. ಅವರನ್ನು ಬೆಂಬಲಿಸುವ ಪ್ರತಿಯೊಬ್ಬರದ್ದೂ ತಪ್ಪಿದೆ.  ಫಾರ್ಮರ್ಸ್ ಬಿಲ್ ವಿರೋಧಿಸುವ ಜನರಿಗೆ ಇದು ರೈತರಿಗೆಷ್ಟು ಮುಖ್ಯವಾಗಿದ್ದು ಎಂದು ಚೆನ್ನಾಗಿ ತಿಳಿದಿದೆ.

ದೇವಾಲಯ ಕಟ್ಟಿಸ್ತಿದ್ದಾರೆ ಬಾಲಿವುಡ್ ಕ್ವೀನ್..! ಕಂಗನಾ ಪ್ಲಾನ್ ಶುರು

ಆದರೂ ಅವರು ಬೇಕೆಂದೇ ಮುಗ್ಧ ರೈತರನ್ನು ಕೆಟ್ಟದಾಗಿ ಪ್ರೇರೇಪಿಸುತ್ತಿದ್ದಾರೆ. ಅವರದ್ದೇ ಸ್ವಾರ್ಥಕ್ಕಾಗಿ ಭಾರತ್ ಬಂದ್ ಮಾಡಿ, ಗಲಭೆ, ದ್ವೇಷ ಹುಟ್ಟಿಸುತ್ತಿದ್ದಾರೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಕಂಗನಾ ಮತ್ತು ದಿಲ್ಜಿತ್ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಇವರನ್ನು ಲೆಫ್ಟ್ ಮೀಡಿಯಾ ಹೈಲೈಟ್ ಮಾಡುತ್ತಿದೆ ಎನಿಸುತ್ತಿದೆ ಎಂದಿದ್ದಾರೆ. ದಿಲ್ಜಿತ್, ಪ್ರಿಯಾಂಕಳಂತವರು ಲೆಫ್ಟ್ ಮೀಡಿಯಾಗೆ ಕೆಲಸ ಮಾಡುತ್ತಾರೆ. ರೈತ ಪ್ರತಿಭಟನೆಯನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.