ಕಾಂತಾರ-2 ಮೊದಲ ಪಾರ್ಟ್‌ಗಿಂತ ಹತ್ತಾರು ಪಟ್ಟು ಅದ್ದೂರಿ; ಬಜೆಟ್ ಎಷ್ಟು ಗೊತ್ತಾ?
ಜಗತ್ತಿನಾದ್ಯಂತ ದಾಖಲೆ ಸೃಷ್ಟಿಸಿದ ಸಿನಿಮಾ ಕಾಂತಾರ. ಚಿತ್ರ ಬಾಕ್ಸಾಫೀಸಿನಲ್ಲಿ ಬರೋಬ್ಬರಿ 398 ಕೋಟಿ ರೂ. ಗಳಿಸಿದೆ. ಹೀಗಾಗಿಯೇ ಸಹಜವಾಗಿಯೇ ಕಾಂತಾರ 2 ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಹೀಗಿರುವಾಗ 'ಕಾಂತಾರ 2' ಸಿನಿಮಾವನ್ನು ಮೊದಲ ಪಾರ್ಟ್‌ಗಿಂತ ಹತ್ತಾರು ಪಟ್ಟು ಅದ್ದೂರಿಯಾಗಿ ನಿರ್ಮಾಣ ಮಾಡುಲಾಗ್ತಿದೆ ಎಂಬ ಮಾತು ಕೇಳಿ ಬರ್ತಿದೆ. ಹಾಗಿದ್ರೆ ಕಾಂತಾರ 2 ಬಜೆಟ್ ಎಷ್ಟು?
ರಿಷಬ್ ಶೆಟ್ಟಿಯವರ ಕಾಂತಾರ 2 ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಅಭಿಮಾನಿಗಳು ಕಾಂತಾರ ಪಾರ್ಟ್-2ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕಾಂತಾರ ಮೊದಲನೇ ಭಾಗದ ಗ್ರ್ಯಾಂಡ್ ಸಕ್ಸಸ್ ನಂತರ, ನಟ-ನಿರ್ದೇಶಕ ರಿಷಬ್ ಶೆಟ್ಟಿ ವೀಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಸಿನಿಮಾವನ್ನು ತರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೀಗ ಚಿತ್ರ ತಂಡ ಕಾಂತಾರ-2 ವಿಚಾರವಾಗಿ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿಯನ್ನು ಬಹಿರಂಗಪಡಿಸಿದೆ.. ಬಿಗ್ ಬಜೆಟ್ ನಲ್ಲಿ ಕಾಂತಾರ 2 ಚಿತ್ರತಂಡ ನಿರ್ಮಾಣಕ್ಕೆ ರೆಡಿಯಾಗಿದೆ ಎಂದು ತಿಳಿದುಂದಿದೆ. ಇದರ ಬಜೆಟ್ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ.
ಕಾಂತಾರ-2 ಚಿತ್ರಕ್ಕೆ ಭರ್ಜರಿ ತಯಾರಿ, ಬಜೆಟ್ ಇಷ್ಟೊಂದಾ?
ಸಿನಿಮಾ ಕ್ಷೇತ್ರದಲ್ಲಿ ಕಾಂತಾರ ಸೃಷ್ಟಿಸಿದ ದಾಖಲೆ ಅಷ್ಟಿಷ್ಟಲ್ಲ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ತೆರೆಕಂಡಾಗ ಕೇವಲ ಕನ್ನಡ ಸಿನಿಮಾವಾಗಿತ್ತು. ಆದರೆ ನಂತರ ಅದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಿಂಚಿತು. ಸ್ಯಾಂಡಲ್ವುಡ್ ನೆಲದಿಂದ ವಿಶ್ವಾದ್ಯಂತ ಕನ್ನಡದ ಕಂಪನ್ನು ಪಸರಿಸಿತು ದಾಖಲೆಯ ಮೇಲೆ ದಾಖಲೆ ಬರೆದ ಕಾಂತಾರ ಭಾರತದಲ್ಲಿ 362 ಕೋಟಿ ಕಲೆ ಹಾಕಿದರೆ, ವಿಶ್ವಾದ್ಯಂತ 398 ಕೋಟಿ ಕ್ಲಬ್ಗೆ ಸೇರಿಸಿತು. ಕನ್ನಡದಲ್ಲಿ ನಿರ್ಮಿಸಿದ್ದ 'ಕಾಂತಾರ' ನಂತರ ತೆಲುಗು, ಹಿಂದಿ, ತಮಿಳು ವರ್ಷನ್‌ಗಳಲ್ಲಿಯೂ ಡಬ್ ಆಗಿ ಅಲ್ಲಿಯೂ ಜನ ಮೆಚ್ಚುಗೆ ಗಳಿಸಿತು. ಕಾಂತಾರ ಇನ್ನೂ ಹೆಚ್ಚು ಹೆಸರು ಮಾಡಲು ಕಾರಣವೆಂದರೆ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದಕ್ಕೆ ಖರ್ಚು ಮಾಡಿದ್ದು ಕೇವಲ 16 ಕೋಟಿ ರೂ.
ಕಾಂತಾರ-2 ನಂತರ ಬಾಲಿವುಡ್ ನಿರ್ದೇಶಕರಿಂದ ರಿಷಭ್ ಶೆಟ್ಟಿಗೆ ಆ್ಯಕ್ಷನ್-ಕಟ್: ಕುತೂಹಲದ ಮಾಹಿತಿ ರಿವೀಲ್!
ಆದರೆ, ಕಾಂತಾರ-2 ಹಾಗಲ್ಲ. ಕಾಂತಾರ ಮೊದಲಿನ ಭಾಗದ ಸಕ್ಸಸ್‌ನಿಂದ ವೀಕ್ಷಕರಿಗೆ ಚಿತ್ರದ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ ಚಿತ್ರತಂಡ ಹೆಚ್ಚು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾತ್ರವಲ್ಲ, ಕಾಂತಾರ-2 ಬರೋಬ್ಬರಿ 150 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎಂದು ವರದಿಯಾಗಿದೆ. ಕಾಂತಾರ 2 ಮೇಲೆ ಭಾರಿ ನಿರೀಕ್ಷೆಗಳಿರುವ ಕಾರಣಕ್ಕಾಗಿಯೇ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.
ಕಾಂತಾರ ಪಾರ್ಟ್ 2ಗಾಗಿ 11 ಕೆಜಿ ತೂಕ ಇಳಿಸಿಕೊಳ್ಳಲಿರುವ ರಿಷಭ್ ಶೆಟ್ಟಿ
ಕಾಂತಾರ 2ನಲ್ಲಿನ ತನ್ನ ಪಾತ್ರಕ್ಕಾಗಿ ರಿಷಬ್ ಶೆಟ್ಟಿ ಕೂಡಾ ತೀವ್ರ ರೂಪಾಂತರಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ತೆಳ್ಳಗೆ ಕಾಣಿಸಿಕೊಳ್ಳಲು ಸುಮಾರು 11 ಕಿಲೋಗಳನ್ನು ಇಳಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. 'ಕಾಂತಾರ 2' ಚಿತ್ರದಲ್ಲಿ ರಿಷಬ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 11 ಕೆಜಿ ದೇಹ ತೂಕವನ್ನು ಕಮ್ಮಿ ಮಾಡಿಕೊಳ್ಳಲಿದ್ದಾರೆ. ಇನ್ನು, 'ಕಾಂತಾರ 2' ಕಥೆಯು ಕ್ರಿ ಶ 400ರಲ್ಲಿ ನಡೆಯಲಿದೆ ಎಂಬ ಮಾತು ಸಹ ಕೇಳಿ ಬರ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
'ಕಾಂತಾರ 2' ಬಗ್ಗೆ ಹರಡಿರೊ ಗಾಸಿಪ್ ನಿಜಾನಾ?: ಶೂಟಿಂಗ್, ರಿಲೀಸ್ ಡೇಟ್ ರಿವೀಲ್
'ಕಾಂತಾರ' ಕಥೆಯು ಕರಾವಳಿ ಹಿನ್ನೆಲೆಯಲ್ಲಿ ಸಾಗುವುದರಿಂದ, ಅಲ್ಲಿಯೇ ಶೂಟಿಂಗ್ ನಡೆಯಲಿದೆ. ಕಥೆ ಮತ್ತು ಚಿತ್ರಕಥೆ ಬರೆಯುವ ಸಲುವಾಗಿ ರಿಷಬ್ ಶೆಟ್ಟಿ ಮತ್ತು ಚಿತ್ರದ ಬರಹಗಾರರಾದ ಅನಿರುದ್ಧ್ ಮಹೇಶ್, ಶನೀಲ್ ಗುರು & ಟೀಮ್ ಈಗಾಗಲೇ ಮಂಗಳೂರಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ರಿಲೀಸ್ ಪ್ಲ್ಯಾನ್ ಏನು ಎಂಬ ಬಗ್ಗೆ ಸದ್ಯಕ್ಕಂತೂ ಮಾಹಿತಿ ಇಲ್ಲ.