ಕಿರುತೆರೆಯ ಖ್ಯಾತ ನಟಿ ಸುನೇತ್ರ ಪಂಡಿತ್(Sunetra Pandit) ಇತ್ತೀಚಿಗಷ್ಟೆ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರಸ್ತೆಯ ಗುಂಡಿಗಳು ಮತ್ತು ಹಂಪಿ ನಿಂದ ಅಪಘಾತಕ್ಕೆ ತುತ್ತಾಗಿದ್ದ ಸುನೇತ್ರ ಪಂಡಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಖ್ಯಾತ ಗಾಯಕ ಅಜಯ್ ವಾರಿಯರ್(Ajay Warrier) ಗಾಯಗೊಂಡಿದ್ದಾರೆ.
ಕಿರುತೆರೆಯ ಖ್ಯಾತ ನಟಿ ಸುನೇತ್ರ ಪಂಡಿತ್(Sunetra Pandit) ಇತ್ತೀಚಿಗಷ್ಟೆ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರಸ್ತೆಯ ಗುಂಡಿಗಳು ಮತ್ತು ಹಂಪ್ ನಿಂದ ಅಪಘಾತಕ್ಕೆ ತುತ್ತಾಗಿದ್ದ ಸುನೇತ್ರ ಪಂಡಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಖ್ಯಾತ ಗಾಯಕ ಅಜಯ್ ವಾರಿಯರ್(Ajay Warrier) ಗಾಯಗೊಂಡಿದ್ದಾರೆ. ರಸ್ತೆ ಗುಂಡಿಯಿಂದ ಅಜಯ್ ಕಾಲಿಗೆ ತೀವ್ರ ಏಟು ಬಿದ್ದಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫುಟ್ ಪಾತ್ ನಲ್ಲಿರುವ ಡ್ರೈನ್ ಹೋಲ್ ಗಳನ್ನು ಮುಚ್ಚದೆ ಹಾಗೆ ಬಿಟ್ಟಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಜಯ್ ಆಸ್ಪತ್ರೆ ಸೇರುವಂತೆ ಆಗಿದೆ. ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಡ್ರೈನ್ ಹೋಲ್ ಕಾಣದೆ ಅಜಯ್ ಗುಂಡಿಯೊಳಗೆ ಬಿದ್ದಿದ್ದಾರೆ. ಪರಿಣಾಮ ಕಾಲಿಗೆ ತೀವ್ರ ಏಟಾಗಿದೆ. ಈ ಬಗ್ಗೆ ಗಾಯಕ ಅಜಯ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
"
'ನಮ್ಮ ಬೆಂಗಳೂರಿನಲ್ಲಿ ಭಾನುವಾರ ಸಂಜೆ ಸಿಕ್ಕಾಪಟ್ಟೆ ಮಳೆ. ಕೇರಳಕ್ಕೆ ಹೋಗಲು ರೈಲು ಹಿಡಿಯಲೆಂದು ನಿಲ್ದಾಣದ ಕಡೆ ಹೊರಟಾಗ ಭಾರಿ ಮಳೆ ಸುರಿಯಿತು. ಇದು ನನ್ನ ಮಗಳ ಜನ್ಮದಿನದಂದು ಸರ್ಪ್ರೈಸ್ ಕೊಡುವ ಪ್ರವಾಸವಾಗಿತ್ತು. ಮಳೆಯಿಂದ ಓಲಾ ಅಥವಾ ಉಬರ್ ಆಯ್ಕೆಗಳ ನಡುವೆಯೂ ಮುಖ್ಯರಸ್ತೆ ಕಡೆಗೆ ನಡೆಯಲು ನಿರ್ಧರಿಸಿದೆ' ಎಂದಿದ್ದಾರೆ.
'ನಾನು ಮೆಟ್ರೊ ನಿಲ್ದಾಣವನ್ನು ಸಮೀಸುತ್ತಿದ್ದಂತೆ ಮುಖ್ಯ ರಸ್ತೆಯಲ್ಲಿ ದೊಡ್ಡ ನೀರಿನ ಅಡಚಣೆಯಿಂದ ಫುಟ್ ಪಾತ್ ಏರಿದೆ. ಕೆಲವೇ ಹೆಜ್ಜೆಗಳ ನಂತರ ನನ್ನ ಕಾಲು ಪುಟ್ ಪಾತ್ ಮೇಲಿನ ದೊಡ್ಡ ಗುಂಡಿಯೊಳಕ್ಕೆ ಕಾಲು ಹೋಯಿತು. ನಿಯಂತ್ರಣ ಕಳೆದುಕೊಂಡೆ. ಗುಂಡಿ ಎಂದು ಗೊತ್ತಾಗುತ್ತಿದ್ದಂತೆ ಚರಂಡಿ ಒಳಗೆ ಬಿದ್ದಿದೆ. ನೀರು ನನ್ನ ಎದೆಯವರೆಗೂ ಇತ್ತು. ಆದರ ನಾನು ಹಿಡಿದಿದ್ದ ಅದೃಷ್ಟದ ಸೂಟ್ ಕೇಸ್ ಅನ್ನು ನಾನು ನಂಬಿದ್ದೆ. ಅದು ನನ್ನನ್ನು ರಕ್ಷಿಸಿತು. ದೇವರ ದಯೆಯಿಂದ ನಾನು ಬದುಕಿ ಉಳಿಯಲು ಸಾಧ್ಯವಾಯಿತು. ಆದರೆ ಇದು ನನಗೆ ತೀವ್ರ ಆಘಾತ ಮತ್ತು ಕಾಲಿನ ಏಟಾಗಿದ್ದರಂತೆ ತೀವ್ರ ನೋವುಂಟು ಮಾಡಿದೆ' ಎಂದು ಬರೆದುಕೊಂಡಿದ್ದಾರೆ.
Sunetra Pandit: ಹಂಪಲ್ಲಿ ಎಗರಿ ಬಿದ್ದ ಸ್ಕೂಟರ್: ನಟಿ ಜೀವ ಉಳಿಸಿದ ಹೆಲ್ಮೆಟ್!
'ಡ್ರೈನ್ ಹೋಲ್ ಮುಚ್ಚುವ ಸಿಮೆಂಟ್ ಸ್ಲ್ಯಾಬ್ ಅನ್ನು ಬದಲಾಯಿಸಲು ತಲೆಕೆಡಿಸಿಕೊಳ್ಳದ ಅಧಿಕಾರಿಗಳ ಬೇಜವಾಬ್ದಾರಿತನ ನನ್ನ ಕಾಲಿಗೆ ಹಲವಾರು ಹೊಲಿಗೆಗಳು ಬೀಳುವಂತೆ ಆಯಿತು. ಸಂಕಷ್ಟದ ದಿನಗಳು, ಸಂಗೀತದಿಂದ ತುಂಬಾ ನಷ್ಟವಾಗುವಂತೆ ಮಾಡಿತು. ನನ್ನ ಪ್ರೀತಿಯ ಮಗಳ ಜನ್ಮದಿನದ ಸರ್ಪ್ರೈಸ್ ಸಂಭ್ರಮ ಹಾರಿ ಹೋಯಿತು ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ'
'ಈಗ ಯಾರನ್ನು ದೂಷಿಸಬೇಕು. ಅಫ್ಕೋರ್ಸ್ ನಾನೆ.. ಏಕೆಂದರೆ, ನಾನು ನೀರು ಮುಚ್ಚಿದ ರಸ್ತೆಯನ್ನು ಈಜಬೇಕಿತ್ತು. ಆದರೆ ಕಾಲು ದಾರಿಯನ್ನು ಸರಿಯಾಗಿ ತೆಗೆದುಕೊಂಡೆ. ಹುಚ್ಚು ನನಗೆ..ಧನ್ಯವಾದಗಳು ಅಧಿಕಾರಿಗಳಿಗೆ'
'ಸಾರ್ವಜನಿಕ ಸುರಕ್ಷತೆಯ ಎಚ್ಚರಿಕೆಯಾಗಿ ಈ ಸಂದೇಶವನ್ನು ಹರಡಲು ನಾನು ಇಲ್ಲಿ ಬಹಿರಂಗ ಪಡಿಸಿದ್ದೀನಿ. ಸಂಬಂಧ ಪಟ್ಟ ಅಧಿಕರಿಗಳು ಫುಟ್ ಪಾತ್ ಡ್ರೈನ್ ಹೋಲ್ ಮತ್ತು ಮೋರಿಗಳ ಮಹತ್ವವನ್ನು ಗುರುತಿಸದಿದ್ದರೆ ಇದು ನಮ್ಮಲ್ಲಿ ಯಾರಿಗಾದರೂ ಯಾವಾಗ ಬೇಕಾದರೂ ಸುಲಭವಾಗಿ ಸಂಭವಿಸಬಹುದು. ಎದೆಯ ಮಟ್ಟದ ನೋವನ್ನು ನೆನೆದು ನಡುಗುತ್ತಿದ್ದೇನೆ. ಒಂದು ವೇಳೆ ಪುಟ್ಟ ಮಗು ಅದರೊಳಗೆ ಕಾಲು ಹಾಕಿದರೆ ದೇವರೇ ಕಾಪಾಡಬೇಕು' ಎಂದು ಹೇಳಿದ್ದಾರೆ.
ಅವೈಜ್ಞಾನಿಕ ಟಾರಿನಿಂದ ಮೈಸೂರು ರಸ್ತೇಲಿ ಗಾಡಿ ಸ್ಕಿಡ್; ನಟಿ ಸುನೇತ್ರಾ ಪಂಡಿತ್ ಪೋಸ್ಟ್ ವೈರಲ್!
'ನಾನು ಕಾನೂನು ಪಾಲಿಸುವ, ತೆರಿಗೆ ಕಟ್ಟುವ ಬೆಂಗಳೂರಿನ ನಾಗರಿಕ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಗಮನಹರಿಸಿ ನಗರದ ನಿವಾಸಿಗಳಿಗೆ ಸುರಕ್ಷಿತ ರಸ್ತೆ ಹಾಗೂ ಫುಟ್ ಪಾಟ್ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಬರೆದ ಬಹಿರಂಗ ಪತ್ರ ಇದಾಗಿದೆ. ಬೆಂಗಳೂರಿಗರನ್ನು ನೋಡಿಕೊಳ್ಳಿ. ನಮ್ಮ ಜೀವನವೂ ಅಮೂಲ್ಯ..' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.
