Sampath Jayaram: ಕನ್ನಡ ಕಿರುತೆರೆ ನಟ ಸಂಪತ್ ಜಯರಾಮ್ ಆತ್ಮಹತ್ಯೆ!
ಕನ್ನಡ ಚಿತ್ರರಂಗದ ಉದಯೋನ್ಮುಖ ನಟ, ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ ಸಂಪತ್ ಜಯರಾಮ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರು (ಏ.23): ಕನ್ನಡ ಚಿತ್ರರಂಗದ ಉದಯೋನ್ಮುಖ ನಟ, 'ಅಗ್ನಿಸಾಕ್ಷಿ' ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದ ಸಂಪತ್ ಜಯರಾಮ್(sampath jayaram) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ನಿನ್ನೆ (ಎಪ್ರಿಲ್ 22) ನೆಲಮಂಗಲದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಸೂಕ್ತ ಅವಕಾಶವಿಲ್ಲದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಸಾವಿನ ಸುದ್ದಿ ತಿಳಿದು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ಆಪ್ತ ಗೆಳೆಯರು ಕಂಬನಿ ಮಿಡಿದಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ "ಬಾಲಾಜಿ ಫೋಟೊ ಸ್ಟುಡಿಯೋ' ಸಿನಿಮಾದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅವರ ಅಭಿನಯದ ಕುರಿತು ಪತ್ರಕರ್ತ, ಸಿನಿಮಾ ವಿಮರ್ಶಕ ನವೀನ್ ಸಾಗರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, "ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ನೋಡಿದಾಗ ಹಾಗೂ ನೋಡಿ ಹೊರಬಂದಮೇಲೂ ಮನಸಲ್ಲಿ ಹೆಚ್ಚು ಉಳಿದಿದ್ದು ಈ ನಟ ಕನ್ನಡಕ್ಕೆ ಒಬ್ಬ ಗಟ್ಟಿ ವಿಲನ್ ಆಗಿ ರೂಪುಗೊಳ್ಳಬಹುದು. ಅಂಥ ಅವಕಾಶಗಳು ಸಿಗಲಿ ಎಂದು ಹಾರೈಸಿದ್ದೆ. ಆದರೆ ಬೆಳಬೆಳಗ್ಗೆ ಸಾವಿನ ಸುದ್ದಿ..' ಎಂದು ಕಂಬನಿ ಮಿಡಿದಿದ್ದಾರೆ.