Asianet Suvarna News Asianet Suvarna News

ಸಿಲ್ಕ್ ಸ್ಮಿತಾನ್ನ ಹತ್ತು ಹುಡುಗ್ರು ಎತ್ತಾಕ್ಕೊಂಡು ಹೋಗಿದ್ರಂತೆ; ಸಾಯೋ ಮೊದ್ಲು ಕನ್ನಡದ ಖ್ಯಾತ ನಟರಿಗೆ ಕಾಲ್ ಮಾಡಿದ್ರಂತೆ!?

ಕೆಲವರು ಹೇಳುವ ಪ್ರಕಾರ, ಗ್ಯಾಂಗ್ ರೇಪ್ ಮಾಡಿದ ಬಳಿಕ ಬಳಿಕ ಆಕೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿ, ಬಳಿಕ ಡೆತ್ ನೋಟ್ ಬರೆಸಿ, ಕೊಲೆ ಮಾಡಲಾಗಿದೆ ಎನ್ನುತ್ತಾರೆ. ಇದೊಂದು ಪ್ಲಾನ್ಡ್‌ ಕೊಲೆ ಎಂದಿದ್ದಾರೆ ಕೆಲವರು.

Group of boys raped hot actress Silk Smitha before her death is controversy of suicide or murder srb
Author
First Published Jan 24, 2024, 10:53 PM IST | Last Updated Jan 24, 2024, 11:01 PM IST

ಸಿಲ್ಕ್ ಸ್ಮಿತಾ 80-90ರ ದಶಕದಲ್ಲಿ ಭಾರೀ ಪ್ರಸಿದ್ಧಿ ಪಡೆದಿದ್ದ ನಟಿ. ಮಾದಕ ಮೈಮಾಟ ಪ್ರದರ್ಶನ, ಸೆಕ್ಸಿ ಲುಕ್ ಹಾಗೂ ಕ್ಯಾಬರೆ ಡಾನ್ಸ್‌ ಮೂಲಕ ಹದಿಹರೆಯದವರ ನಿದ್ದೆಗೆಡಿಸಿದ್ದರು ಸಿಲ್ಕ್ ಸ್ಮಿತಾ. ಆಕೆಯನ್ನು ನೋಡಲೇಂದೇ, ಆಕೆಯ ಡಾನ್ಸ್ ಎಂಜಾಯ್ ಮಾಡಲೆಂದೇ ಬಹಳಷ್ಟು ಜನರು ಸಿನಿಮಾ ಥಿಯೇಟರ್‌ಗಳಿಗೆ ಬರುತ್ತಾರೆ ಎಂಬುದನ್ನು ನಿರ್ಮಾಕಪರು ತಿಳಿದಿದ್ದರು ಎನ್ನಲಾಗಿದೆ. ಹೀಗಾಗಿ ಅಂದಿನ ಪ್ರತಿ ಸಿನಿಮಾದಲ್ಲಿ ನಟಿ ಸಿಲ್ಕ್ ಸ್ಮಿತಾಗೊಂದು (Silk Smitha) ಕ್ಯಾಬರೆ ಡಾನ್ಸ್ ಖಾಯಂ ಇರುತ್ತಿತ್ತು. 

ಕನ್ನಡ, ತಮಿಳು, ತೆಲುಗು, ಮಲಯಾಳಂ ಅಥವಾ ಹಿಂದಿ ಹೀಗೆ ಯಾವುದೇ ಭಾಷೆಯ ಎಷ್ಟೇ ದೊಡ್ಡ ಸ್ಟಾರ್ ಹೀರೋ ಅಥವಾ ಹೊಸಬರ ಚಿತ್ರವಿರಲಿ, ಊಟಕ್ಕೆ ಉಪ್ಪಿನಕಾಯಿ ಬೇಕೇ ಬೇಕು ಎಂಬಂತೆ ಅದರಲ್ಲಿ ಸಿಲ್ಕ್‌ ಸ್ಮಿತಾ ಡಾನ್ಸ್ ಇರುತ್ತಿತ್ತು. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಎಲ್ಲಾ ಸಿನಿಮಾಗಳಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಸಿಲ್ಕ್ ಸ್ಮಿತಾ, ಇಡೀ ಭಾರತದಲ್ಲಿ ಫೇಮಸ್ ನಟಿ ಎಂಬಂತಿದ್ದರು.  ಆದರೆ, 1996ರಲ್ಲಿ ಸಿಲ್ಕ್‌ ಸ್ಮಿತಾ (Silk Smitha) ಖ್ಯಾತಿಯ ನಟಿ ವಿಜಯಲಕ್ಷ್ಮೀ ಅಪಾರ್ಟ್‌ಮೆಂಟ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.  

ಸಿಲ್ಕ್‌ ಸ್ಮಿತಾ ಸಾವು ಕೊಲೆ, ಆತ್ಮಹತ್ಯೆಯಲ್ಲ ಎಂದವ್ರಿಗೂ ಕಗ್ಗಂಟು; ರೂಮಿನಲ್ಲಿ ನೋಡಬಾರದ ಸ್ಥಿತಿಯಲ್ಲಿ ಬಿದ್ದಿದ್ರಾ ನಟಿ!

ಪೋಸ್ಟ್‌ ಮಾರ್ಟಂ ರಿಪೋರ್ಟ್‌ನಲ್ಲಿ ಆಕೆ ಬಹಳಷ್ಟು ಆಲ್ಕೋಹಾಲ್ ಸೇವಿಸಿದ್ದಳು, ಅದರಂದಲೇ ಸಾವು ಸಂಭವಿಸಿದೆ ಎಂಬ ರಿಪೋರ್ಟ್ ಕೊಟ್ಟಿದ್ದಾರೆ ಎಎನ್ನಲಾಗಿದೆ. ಪೊಲೀಸರ ಪ್ರಕಾರ, ಆಕೆಯೇ ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದರೆ, ಸಿಲ್ಕ್‌ ಸ್ಮಿತಾರನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ, ಆಕೆಗೆ ಹೊಟ್ಟೆತುಂಬಾ ಕುಡಿಸಿ ಹತ್ತು ಹುಡುಗರು (Ten Boys) ಹೊತ್ತೊಯ್ದು ಗ್ಯಾಂಗ್‌ ರೇಪ್ (Gang Rape) ಮಾಡಿ ಬಳಿಕ ಕೊಲೆ (Murder) ಮಾಡಿದ್ದಾರೆ ಎನ್ನಲಾಗಿದೆ. ಯಾವುದು ನಿಜ, ಗೊತ್ತಿಲ್ಲ. 

ಸುಂದರ ನಟ ಸುನಿಲ್ ದುರ್ಮರಣ; ಅಪಘಾತಕ್ಕೆ ಯಾರು ಕಾರಣ, ಕಾಣದ ಕೈ ಕೆಲಸ ಮಾಡಿದ್ಯಾ?

ಕೆಲವರು ಹೇಳುವ ಪ್ರಕಾರ, ಗ್ಯಾಂಗ್ ರೇಪ್ ಮಾಡಿದ ಬಳಿಕ ಬಳಿಕ ಆಕೆಗೆ ಆತ್ಮಹತ್ಯೆಗೆ (Suicide) ಪ್ರಚೋದನೆ ನೀಡಿ, ಬಳಿಕ ಡೆತ್ ನೋಟ್ (Death Note) ಬರೆಸಿ, ಕೊಲೆ ಮಾಡಲಾಗಿದೆ ಎನ್ನುತ್ತಾರೆ. ಇದೊಂದು ಪ್ಲಾನ್ಡ್‌ ಕೊಲೆ ಎಂದಿದ್ದಾರೆ ಕೆಲವರು. ಸಾಯುವ ಮುನ್ನ ನಟಿ ಸಿಲ್ಕ್ ಸ್ಮಿತಾ ಕನ್ನಡದ ಖ್ಯಾತ ನಟರೊಬ್ಬರಿಗೆ (Kannada Actor) ಕಾಲ್ (phone Call) ಮಾಡಿದ್ದರು ಎಂಬ ಸುದ್ದಿಯಿದೆ. ಆದರೆ, ಅದನ್ನು ಯಾರೂ ಕನ್ಫರ್ಮ್‌ ಮಾಡಿಲ್ಲ. ಸಿಲ್ಕ್ ಸ್ಮಿತಾ ಹೇಳಲು ಅಸಾಧ್ಯ, ಆ ನಟ ಹೇಳಲೇಬೇಕು ಎಂದು ಹೇಳಲಾಗದು. ಅಷ್ಟಕ್ಕೂ ಆ ನಟ ಆಕೆಯ ಕಾಲ್ ರಿಸೀವ್ ಮಾಡಿದ್ದರೇ ಎಂಬ ಬಗ್ಗೆ ಕೂಡ ಖಾತ್ರಿಯಿಲ್ಲ. 

ಕಲಾವಿದರ ದುನಿಯಾ ಕಂಡು ಕಂಗಾಲಾಬೇಡಿ; 'ಸತ್ಯಂ ಶಿವಂ' ಬರ್ತಿದೆ, ಸೈಡ್‌ಗೆ ಹೋಗ್ಬೇಡಿ, ನೋಡಿ!

ಸಿಲ್ಕ್‌ ಸ್ಮಿತಾ ಬಗ್ಗೆ ಒಂದು ಜನಜನಿತ ಮಾತಿದೆ. ವೇದಿಕೆಗಳಲ್ಲಿ ಆಕೆ ಒಮ್ಮೆ ಕುಣಿದು ಹೋದರೂ ಮತ್ತೆ ಮತ್ತೆ ಕರೆಸಿ, ನೋಡಬೇಕು ಎಂದು ಜನರು ಆಯೋಜಕರಿಗೆ ದುಂಬಾಲು ಬೀಳುತ್ತಿದ್ದರಂತೆ. ಸಿನಿಮಾದಲ್ಲೂ ಅಷ್ಟೇ, ಸಿಲ್ಕ್‌ಗಾಗಿ ಒಂದು ಕ್ಯಾಬರೆ ಡಾನ್ಸ್ ಮೀಸಲಿರುತ್ತಿತ್ತು. ಆಕೆಯ ಡಾನ್ಸ್‌ಗೆ ಜನರನ್ನು ಥಿಯೇಟರ್‌ಗೆ ಕರೆಸುವ ಶಕ್ತಿಯಿತ್ತು, ಅದು ನಿರ್ಮಾಪಕರು ಮತ್ತು ನಿರ್ದೇಶಕರು ತಿಳಿದಿತ್ತು. ಒಟ್ಟಿನಲ್ಲಿ, ಸಿಲ್ಕ್‌ ಸ್ಮಿತಾ ಖ್ಯಾತಿಯ ನಟಿ ವಿಜಯಲಕ್ಷ್ಮೀ ನಮ್ಮಿಂದ ಬಹುಬೇಗ ಮರೆಯಾಗಿ ಹೋದರು. 

ದೇವತೆಯಂಥ ನಟಿ ಸುಧಾರಾಣಿ ಬಾಳಲ್ಲಿ ಯಾಕೆ ಬರಬೇಕಿತ್ತು ಅಂಥ ಭಯಾನಕ ಬಿರುಗಾಳಿ!

 

Latest Videos
Follow Us:
Download App:
  • android
  • ios