ಮಾಲಿವುಡ್ ನಟಿ ನವ್ಯಾ ನಾಯರ್ ಕನ್ನಡದಲ್ಲಿ ಹೆಸರು ಮಾಡಿದ್ದು ಗಜ ಸಿನಿಮಾ ಮೂಲಕ. ಮಲಯಾಳಂನ ಟಾಪ್ ನಟರ ಜೊತೆ ನಟಿಸಿದ್ದ ನವ್ಯಾ ನಾಯರ್ ವಿವಾಹವಾಗಿದ್ದು ಮುಂಬೈ ಮೂಲದ ಉದ್ಯಮಿಯನ್ನು.

ದರ್ಶನ್ ಜೊತೆ ತೆರೆ ಹಂಚಿಕೊಂಡು ಸೂಪರ್ ಜೋಡಿಯಾಗಿ ಹಿಟ್ ಸಿನಿಮಾ ಕೊಟ್ಟ ನವ್ಯಾ ನಾಯರ್ ಸಿನಿಮಾಗಳಿಂದ ಸದ್ಯ ದೂರವಿದ್ದಾರೆ. ಪತಿ ಮತ್ತು ಮಗನ ಜೊತೆ ಫ್ಯಾಮಿಲಿ ಟೈಂ ಎಂಜಾಯ್ ಮಾಡ್ತಿದ್ದಾರೆ ನಟಿ.

ಕೇರಳದವರಾದ್ರೂ ಭಾವನಾ ಧರಿಸೋದು ಕರ್ನಾಟಕ ಶೈಲಿಯ ಕರಿಮಣಿ ಸರ..!

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನವ್ಯಾ ಫ್ಯಾನ್ಸ್ ಜೊತೆ ಫೋಟೋ, ವಿಡಿಯೋ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ನಟಿ ತಮ್ಮ ನೃತ್ಯಾಭ್ಯಾಸದ ವಿಡಿಯೋಗಳನ್ನೇ ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿದ್ದು, ನವ್ಯಾ ಸೀರಿಯಸ್ ಅಗಿ ಡ್ಯಾನ್ಸ್ ಕಲೀತಿದ್ದಾರೆ ಅನ್ನೋದು ಪಕ್ಕಾ.

 
 
 
 
 
 
 
 
 
 
 
 
 
 
 

A post shared by Navya Nair (@navyanair143)

ಮಗನ ಬರ್ತ್‌ಡೇ, ಅವಾರ್ಡ್ ಫಂಕ್ಷನ್, ಹಬ್ಬ, ಪ್ರಯಾಣ, ಶೂಟಿಂಗ್ ಹೀಗೆ ಎಲ್ಲ ವಿಡಿಯೋ, ಫೋಟೋಗಳನ್ನು ನಟಿ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ನಟಿ ಮತ್ತೆ ಯಾವಾಗ ಕನ್ನಡಕ್ಕೆ ಎಂಟ್ರಿ ಕೊಡ್ತಾರೋ ಕಾದು ನೋಡಬೇಕು

 
 
 
 
 
 
 
 
 
 
 
 
 
 
 

A post shared by Navya Nair (@navyanair143)