ಖ್ಯಾತ ನಟ ನರಸಿಂಹರಾಜು ಹಿರಿಯ ಪುತ್ರಿ ಧರ್ಮವತಿ ಹೃದಯಾಘಾತದಿಂದ ನಿಧನ
ಸ್ಯಾಂಡಲ್‌ವುಡ್‌ನ ಹಾಸ್ಯ ಚಕ್ರವರ್ತಿಯಾಗಿ ಮಿಂಚಿದ ನಟ ನರಸಿಂಹ ರಾಜು ಅವರ ಹಿರಿಯ ಪುತ್ರಿ ಧರ್ಮವತಿ ನಿಧನರಾಗಿದ್ದಾರೆ. ಇಂದು (ಜೂನ್ 4) ಮುಂಜಾನೆ 5.30ಕ್ಕೆ ಧರ್ಮವತಿ ಕೊನೆಯುಸಿರೆಳೆದರು ಎನ್ನವ ಮಾಹಿತಿಯನ್ನು ಕುಟುಂಬದವರು ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ಹಾಸ್ಯ ಚಕ್ರವರ್ತಿಯಾಗಿ ಮಿಂಚಿದ ನಟ ನರಸಿಂಹ ರಾಜು(Legendary Actor Narasimha Raju) ಅವರ ಹಿರಿಯ ಪುತ್ರಿ ಧರ್ಮವತಿ ನಿಧನರಾಗಿದ್ದಾರೆ(Dharmavati Passed Away). ಇಂದು (ಜೂನ್ 4) ಮುಂಜಾನೆ 5.30ಕ್ಕೆ ಧರ್ಮವತಿ ಕೊನೆಯುಸಿರೆಳೆದರು ಎನ್ನವ ಮಾಹಿತಿಯನ್ನು ಕುಟುಂಬದವರು ತಿಳಿಸಿದ್ದಾರೆ. ಧರ್ಮವತಿ ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ. ಹೃದಯಾಘಾತದಿಂದ(Heartattack) ಧರ್ಮವತಿ ನಿಧನರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಧರ್ಮವತಿ ಪುತ್ರ, ನಟ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಅಮ್ಮ ಇನ್ನಿಲ್ಲ ಎನ್ನುವ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.
ಧರ್ಮವತಿ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು, ಸ್ನೇಹಿತರು, ಆಪ್ತರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಧರ್ಮವತಿ ಅವರ ಅಗಲಿಕೆಯಿಂದ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಕನ್ನಡ ಚಿತ್ರರಂಗಕ್ಕೆ ನಟ ನರಸಿಂಹ ರಾಜು ಕೊಡುಗೆ ಅಪಾರ. ಅನೇಕ ಸಿನಿಮಾಗಳಲ್ಲಿ ನಟಿಸಿರುವ ನರಸಿಂಹ ರಾಜು ಅದ್ಭುತ ಪಾತ್ರಗಳ ಮೂಲಕ ಕನ್ನಡ ಚಿತ್ರರಸಿಕರನ್ನು ರಂಜಿಸಿದ್ದರು. ಸದ್ಯ ಅವರ ಕುಟುಂಬದ ಕೆಲವು ಸದಸ್ಯರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ನರಸಿಂಹ ರಾಜು ಎರಡನೇ ಪುತ್ರಿ, ಧರ್ಮವತಿ ಅವರ ಸಹೋದರಿ ಸುಧಾ ನರಸಿಂಹ ರಾಜು ಅವರು ನಟಿಯಾಗಿ ಖ್ಯಾತಿಗಳಿಸಿದ್ದಾರೆ. ಸುಧ ಅವರು ಈಗಾಗಲೇ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಸುಧಾ ನರಸಿಂಹರಾಜು ಸದ್ಯ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ನಾಯಕಿಯ ತಾಯಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
Bhajan Sopori Passed Away: ಸಂತೂರ್ ಮಾಂತ್ರಿಕ ಪಂಡಿತ್ ಭಜನ್ ಸೊಪೋರಿ ವಿಧಿವಶ
ಧರ್ಮವತಿ ಅವರ ಮಕ್ಕಳಾದ ಅವಿನಾಶ್ ಮತ್ತು ಅರವಿಂದ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಧರ್ಮವತಿ ಅವರ ಹಿರಿಯ ಪುತ್ರ ಅರವಿಂದ್ ಅವರು ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಲಾಸ್ಟ್ ಬಸ್ ಸಿನಿಮಾ ಮೂಲಕ ಅವಿನಾಶ್ ಕನ್ನಡ ಚಿತ್ರರಸಿಕರ ಗಮನ ಸೆಳೆದಿದ್ದರು. ಕಿರಿಯ ಪುತ್ರ ಅವಿನಾಶ್ ನರಸಿಂಹ ರಾಜು ಕೂಡ ನಟನಾಗಿ ಗುರುತಿಸಿಕೊಂಡಿದ್ದು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
Singer KK ಸಂಗೀತ ಕಾರ್ಯಕ್ರಮ ನೀಡಿದ ಬೆನ್ನಲ್ಲೇ ಖ್ಯಾತ ಬಾಲಿವುಡ್ ಗಾಯಕ ಕೆಕೆ ನಿಧನ
ಲಾಸ್ಟ್ ಬಸ್, ಚೇಸ್ ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕೆಲವು ಮ್ಯೂಸಿಕ್ ವಿಡಿಯೋದಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯ ಅವಿನಾಶ್ ಕಟ್ಟೆ ಎನ್ನುವ ಕನ್ನಡದ ಒಟಿಟಿಗಾಗಿ ಕೆಲಸ ಮಾಡುತ್ತಿದ್ದಾರೆ. ಧರ್ಮವತಿ ಹಿರಿಯ ಪುತ್ರ, ನಟ ಅರವಿಂದ್ ತಾಯಿಯ ಫೋಟೋ ಶೇರ್ ಮಾಡಿ 'ಅಮ್ಮ ಇನ್ನಿಲ್ಲ..' ಎಂದು ಬರೆದುಕೊಂಡಿದ್ದಾರೆ. 'ಇಂದು ಮುಂಜಾನೆ ಅಮ್ಮ ನಮ್ಮನ್ನು ಅಗಲಿದ್ದಾರೆ' ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಜೊತೆಗೆ ಅಮ್ಮನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಂದು ಸಂಜೆ ಹೆಬ್ಬಾಳದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.