Bhajan Sopori Passed Away: ಸಂತೂರ್ ಮಾಂತ್ರಿಕ ಪಂಡಿತ್ ಭಜನ್ ಸೊಪೋರಿ ವಿಧಿವಶ
"ನಾವು ನಿಜವಾಗಿಯೂ ಶ್ರೇಷ್ಠ ಸಂಗೀತಗಾರ, ಶ್ರೇಷ್ಠ ಮನುಷ್ಯ ಹಾಗೂ ಅತ್ಯುತ್ತಮ ತಂದೆಯನ್ನು ಕಳೆದುಕೊಂಡಿದ್ದೇವೆ. ಇದನ್ನು ನಂಬುವುದು ಮತ್ತು ಅವರಿಲ್ಲದ ನನ್ನ ಜೀವನವನ್ನು ಕಲ್ಪಿಸಿಕೊಳ್ಳುವುದು ನನಗೆ ತುಂಬಾ ಕಷ್ಟ" ಎಂದು ಅವರ ಮಗ ಅಭಯ್ ಸೊಪೋರಿ ಹೇಳಿದ್ದಾರೆ.
ನವದೆಹಲಿ (ಜೂ. 2): ಕ್ಯಾನ್ಸರ್ ನಿಂದಾಗಿ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂತೂರ್ ಮಾಂತ್ರಿಕ ಪಂಡಿತ್ ಭಜನ್ ಸೊಪೋರಿ (Santoor maestro Pandit Bhajan Sopori ) ಗುರುವಾರ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
"ನಾವು ನಿಜವಾಗಿಯೂ ಶ್ರೇಷ್ಠ ಸಂಗೀತಗಾರ, ಶ್ರೇಷ್ಠ ಮನುಷ್ಯ ಹಾಗೂ ಅತ್ಯುತ್ತಮ ತಂದೆಯನ್ನು ಕಳೆದುಕೊಂಡಿದ್ದೇವೆ. ಇದನ್ನು ನಂಬುವುದು ಮತ್ತು ಅವರಿಲ್ಲದ ನನ್ನ ಜೀವನವನ್ನು ಕಲ್ಪಿಸಿಕೊಳ್ಳುವುದು ನನಗೆ ತುಂಬಾ ಕಷ್ಟ" ಎಂದು ಅವರ ಮಗ ಅಭಯ್ ಸೊಪೋರಿ (Abhay Sopori) ಹೇಳಿದ್ದಾರೆ. ಗುರುವಾರ ಮಧ್ಯಾಹ್ನ 3.30ರ ವೇಳೆಗೆ ತಂದೆ ಕೊನೆಯುಸಿರೆಳೆದರು. ಕಳೆದ ಮೂರು ವಾರಗಳಿಂದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅಭಯ್ ಸಪೋರಿ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅವರು ಕರುಳಿನ ಕ್ಯಾನ್ಸರ್ ನಿಂದ (colon cancer) ಬಳಲುತ್ತಿದ್ದರು. ಇದೇ ತಿಂಗಳ 22 ರಂದು ತಮ್ಮ 74ನೇ ಜನ್ಮದಿನವನ್ನು ಅವರು ಆಚರಿಸಿಕೊಳ್ಳಬೇಕಿತ್ತು. ಗುರುಗ್ರಾಮದ ಆಸ್ಪತ್ರೆಯಲ್ಲಿ ( Gurugram hospital) ಅವರು ನಿಧನರಾದರು ಎಂದು ಪಿಟಿಐ ವರದಿ ಮಾಡಿದೆ.
ಅವರಿಗೆ ಕರುಳಿನ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿತ್ತು. ಕ್ಯಾನ್ಸರ್ ಯಕೃತ್ತು ಮತ್ತು ಮೂಳೆಗಳಿಗೆ ಹರಡಿತ್ತು. ಅವರು ಫೆಬ್ರವರಿ 2022 ರಿಂದ ಗುರುಗ್ರಾಮ್‌ನ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯಲ್ಲಿ (ಎಫ್‌ಎಂಆರ್‌ಐ) ಚಿಕಿತ್ಸೆಯಲ್ಲಿದ್ದರು ಮತ್ತು ಕಳೆದ ಎರಡು ತಿಂಗಳುಗಳಲ್ಲಿ ಕೀಮೋಥೆರಪಿ, ಉದ್ದೇಶಿತ ಚಿಕಿತ್ಸೆ ಮತ್ತು ಇಮ್ಯುನೊಥೆರಪಿಯನ್ನು ಪಡೆದಿದ್ದರು. ಅವರ ಸ್ಥಿತಿ ಹದಗೆಟ್ಟ ನಂತರ ಅವರನ್ನು 2022ರ ಮೇ 18, ರಂದು ಎಫ್‌ಎಂಆರ್‌ಐಗೆ ದಾಖಲಿಸಲಾಯಿತು. ವೈದ್ಯರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ, ಅವರು ಜೂನ್ 2 ರಂದು ಬಹು ಅಂಗಾಂಗ ವೈಫಲ್ಯಕ್ಕೆ ಬಲಿಯಾದರು ಎಂದು ಗುರ್ಗಾಂವ್‌ನ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆ (Fortis Memorial Research Institute, Gurgaon) ತಿಳಿಸಿದೆ.
ಪಂಡಿತ್ ಭಜನ್ ಸೊಪೋರಿ ಒಬ್ಬ ಸಂಯೋಜಕ, ಸಂಗೀತಶಾಸ್ತ್ರಜ್ಞ, ಶಿಕ್ಷಕ, ಬರಹಗಾರ ಮತ್ತು ಕವಿ. ದೇಶದ ಉಳಿದ ಭಾಗಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದ ಸಾಂಸ್ಕೃತಿಕ ಸೇತುವೆ ಎಂದು ಪರಿಗಣಿಸಲ್ಪಟ್ಟಿರುವ ಪಂಡಿತ್ ಭಜನ್ ಸೊಪೋರಿಯನ್ನು "ಸಂತೂರಿನ ಸಂತ" ಮತ್ತು "ತಂತಿಗಳ ರಾಜ" ಎಂದು ಪ್ರಶಂಸಿಸಲಾಗುತ್ತದೆ.
RIP Shivkumar Sharma ಖ್ಯಾತ ಸಂತೂರ್ ವಾದಕ ಪಂ. ಶಿವಕುಮಾರ್ ಶರ್ಮಾ ನಿಧನ
ಭಾರತೀಯ ಸಂಗೀತ ಮತ್ತು ಸಂಸ್ಕೃತಿಗೆ ಅವರ ಕೊಡುಗೆಗಾಗಿ, ಅವರು ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜೀವಮಾನ ಸಾಧನೆ ಪ್ರಶಸ್ತಿ, ಜಮ್ಮು ಮತತು ಕಾಶ್ಮೀರ ಸರ್ಕಾರದ ನಾಗರಿಕ ಪ್ರಶಸ್ತಿ, ಉತ್ಕಲ್ ವಿಶ್ವವಿದ್ಯಾಲಯ (ಒಡಿಶಾ) ದಿಂದ ಸಾಹಿತ್ಯದ ಡಾಕ್ಟರೇಟ್, ಈಜಿಪ್ಟ್ ಅರಬ್ ರಿಪಬ್ಲಿಕ್ ನಿಂದ ರಾಷ್ಟ್ರೀಯ ಧ್ವಜ ಗೌರವದಂಥ ಮನ್ನಣೆಗಳನ್ನು ಪಡೆದುಕೊಂಡಿದ್ದಾರೆ.
'ಅವನು ಒಬ್ಬನೇ ಬರೋನು..ಮಾನ್ ಸ್ಟರ್' ಡೈಲಾಗ್ ಹೊಡೆದು KGFನಲ್ಲಿ ಮಿಂಚಿದ್ದ ನಟ ಮೋಹನ್ ಜುನೇಜ ಇನ್ನಿಲ್ಲ
ಭಜನ್ ಸೊಪೋರಿ ಅವರ ಕಲೆ ಎಷ್ಟು ಅಗಾಧವಾಗಿತ್ತು ಎಂದರೆ ಅವರು ಸಂತೂರಿನಿಂದ ಸಿತಾರ್ ವರೆಗೆ ಎಲ್ಲವನ್ನೂ ನುಡಿಸಬಲ್ಲವರಾಗಿದ್ದರು. ಅವರು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಡಬಲ್ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದರು. ಇವೆಲ್ಲದರ ನಡುವೆಯೂ ಸಂಗೀತದ ಜೊತೆಗೆ ಭಾಷೆಯ ಮೇಲೂ ಅಪಾರ ಹಿಡಿತ ಹೊಂದಿದ್ದರು. ಅಂದಹಾಗೆ, ಅವರು ತಮ್ಮ ಮಹಾನ್ ಗುರು ಪಂಡಿತ್ ಶಂಕರ್ ಪಂಡಿತ್ ಜಿಯವರಿಂದಲೂ ಈ ಕಲೆಯನ್ನು ಪಡೆದರು. ಭಾರತದಲ್ಲಿ ಸೂಫಿ ಬಾಜ್ ಶೈಲಿಯನ್ನು ಜನಪ್ರಿಯಗೊಳಿಸಿದವರು ಶಂಕರ್ ಪಂಡಿತ್. ನಂತರ ಸೊಪೋರಿ ಕೂಡ ಆ ಕಲೆಯನ್ನು ಮುಂದಕ್ಕೆ ಸಾಗಿಸಿ ಸಂತೂರ್‌ಗೆ ಅಂತರಾಷ್ಟ್ರೀಯ ಮನ್ನಣೆಯನ್ನು ನೀಡಿದ್ದರು.