Asianet Suvarna News Asianet Suvarna News

ಚಿತ್ರರಂಗದಲ್ಲಿ ಈ ವ್ಯಕ್ತಿ ಬಿಟ್ಟರೆ ನನಗೆ ಸ್ನೇಹಿತರಲಿಲ್ಲ: Jagapathi Babu

30 ವರ್ಷಗಳಿಂದ ಚಿತ್ರರಂಗದಲ್ಲಿರುವ ಜಗಪತಿ ಬಾಬು ಅವರಿಗೆ ಇರುವುದು ಇವರೊಬ್ಬರೇ ಸ್ನೇಹಿತನಂತೆ. ಹೀಗೆ ಹೇಳಲು ಕಾರಣವೇನು?

Kannada Jagapathi Babu says Arjun Sarja is his only friend in Film industry vcs
Author
Bangalore, First Published Jan 20, 2022, 1:04 PM IST

ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟ ಜಗಪತಿ ಬಾಬು (Jagapathi Babu) ಅವರ ಪಾತ್ರ ದೊಡ್ಡದ್ದು. ಒಂದು ಬಿಗ್ ಬಜೆಟ್ ಸಿನಿಮಾ ಅನೌನ್ಸ್‌ ಆಗುತ್ತಿದೆ, ಎಂದು ಗೊತ್ತಾಗುತ್ತಿದ್ದಂತೆ ಆ ಸಿನಿಮಾದಲ್ಲಿ ಜಗಪತಿ ಇದ್ದೇ ಇರುತ್ತಾರೆ ಎಂದು ಕೂಡ ಹಲವರಿಗೆ ಗೊತ್ತಿರುತ್ತದೆ. ಪ್ರತಿಯೊಬ್ಬ ಸ್ಟಾರ್ ನಟನಿಗೂ ಖಡಕ್ ವಿಲನ್ ಆಗಿ ಅಥವಾ ತಂದೆಯಾಗಿ ಜಗಪತಿ ಅವರೇ ಬೇಕು. ಹೀಗಾಗಿ ಕಳೆದ 30 ವರ್ಷಗಳ ಸಿನಿ ಜರ್ನಿಯಲ್ಲಿ ಜಗಪತಿ ಬಹುತೇಕ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಅಂದಾಜು 150ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಜಗಪತಿ ಅವರಿಗೆ ಚಿತ್ರರಂಗದಲ್ಲಿರುವ ಪ್ರತಿಯೊಬ್ಬರೂ ಸ್ನೇಹಿತರು ಎಂದು ಹೇಳಲಾಗುವುದಿಲ್ಲ. ಏಕೆಂದರೆ ನನಗೆ ಯಾರೂ ಸ್ನೇಹಿತರಲಿಲ್ಲ. ಆದರೆ ಈ ಒಬ್ಬ ವ್ಯಕ್ತಿ ಬಿಟ್ಟು ಎಂದು ಅವರೇ ಹೇಳಿಕೊಂಡಿದ್ದಾರೆ. ಅಭಿಮಾನಿಗಳ ಆಶ್ಚರ್ಯಕ್ಕೆ ಆ ಒಬ್ಬ ನಟ ನಮ್ಮ ಕನ್ನಡ ಚಿತ್ರರಂಗದವರೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಏಕೆಂದರೆ ಪ್ರತಿ ಸಿನಿಮಾ ಕಾರ್ಯಕ್ರಮದಲ್ಲೂ ಜಗಪತಿ ಬಾಬು ಈ ಒಬ್ಬ ಸ್ನೇಹಿತನ ಬಗ್ಗೆ ಮಾತನಾಡುತ್ತಾರೆ.

Kannada Jagapathi Babu says Arjun Sarja is his only friend in Film industry vcs

ಹೌದು! ಜಗಪತಿ ಬಾಬು ಅವರಿಗಿರುವ ಏಕೈಕಾ ಸಿನಿ ಸ್ನೇಹಿತ ಅಂದ್ರೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja). 'ನಾನು ಅರ್ಜುನ್‌ ಜೊತೆಗೆ ಹಲವು ಬಾರಿ ಜಗಳ ಮಾಡಿದ್ದೆನೆ. ಸ್ನೇಹದಲ್ಲಿ ಜಗಳ ಮಾಮೂಲು. ಆ ಜಗಳ ನಮ್ಮ ಸ್ನೇಹವನ್ನು ಇನ್ನಷ್ಟು ಗಟ್ಟಿ ಮಾಡಿದೆ,' ಎಂದು ಖಾಸಗಿ ಸಂದರ್ಶನದಲ್ಲಿ ಜಗಪತಿ ಮಾತನಾಡಿದ್ದಾರೆ. 

'ನನ್ನ 30 ವರ್ಷಗಳ ಸಿನಿಮಾ ಪಯಣದಲ್ಲಿ ನನಗೆ ಒಬ್ಬೇ ಒಬ್ಬರೂ ಸಹ ಸರಿಯಾದ ಸ್ನೇಹಿತರಿಲ್ಲ. ಎಲ್ಲರೂ ಮೇಲಷ್ಟೇ ತೋರ್ಪಡಿಕೆಗೆ ಚೆನ್ನಾಗಿ ಮಾತನಾಡುತ್ತಾರೆ ಆದರೆ ನಿಜವಾದ ಸ್ನೇಹಬಂಧ ಯಾರಿಗೂ ಇಲ್ಲ. ಹಣವಿದ್ದರಷ್ಟೇ ನಿಮ್ಮ ಹತ್ತಿರಕ್ಕೆ ಸುಳಿಯುತ್ತಾರೆ. ಇಲ್ಲವಾದರೆ ಗುಡ್‌ ಬೈ ಹೇಳುತ್ತಾರೆ,' ಎಂದು ಜಗಪತಿ ಹೇಳಿದ್ದಾರೆ. 

ಸಲಾರ್‌ನಲ್ಲಿ ಪ್ರಭಾಸ್‌ಗೆ ವಿಲನ್ ಆಗ್ತಾರೆ ಜಗಪತಿ ಬಾಬು..! ವೈಲೆಂಟ್ ಲುಕ್ ವೈರಲ್

ಇನ್ನೂ ಜಗಪತಿ ಅವರ ಕೈಯಲ್ಲಿ ಸುಮಾರು 10ಕ್ಕೂ ಹೆಚ್ಚು ಸಿನಿಮಾಗಳಿದೆ. ಪ್ರಶಾಂತ ನೀಲ್ (Prashanth Neel) ಜೊತೆ ಸಲಾರ್ ಮತ್ತು 'Ghani' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಕೆಲವು ದಿನಗಳ ಹಿಂದೆ ಜ್ಯೂನಿಯರ್‌ ಎನ್‌ಟಿಆರ್‌  (Junior NTR) ಬಗ್ಗೆಯೂ ಇವರು ಮಾತನಾಡಿದ್ದರು. 'ಅರವಿಂದ ಸಮೇತ ಸಿನಿಮಾದಲ್ಲಿ ನಾನು ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಕೆಲವು ದಿನಗಳ ಹಿಂದೆ ತಾರಕ್‌ ಹೇಳಿದ್ದರು, ಬಾಸಿ ರೆಡ್ಡಿ ಪಾತ್ರವನ್ನು ಎಂದೂ ಜನರು ಮರೆಯುವುದಿಲ್ಲ. ತಾರಕ್ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಆದರೂ ನನ್ನ ಪಾತ್ರಕ್ಕೆ ಹೆಸರು ಬಂತು ಎಂದು ದಿನ ಹೇಳುವೆನು. ನನಗೆ ನೀವು ಇನ್ನೂ ನಾಲ್ಕು ವರ್ಷ ಮುಖ ತೋರಿಸಬೇಡಿ ಎಂದು. ನಗು ನಗುತ್ತಲೇ ಸರಿ ಎಂದು ಹೇಳಿದೆ,' ಎಂದಿದ್ದಾರೆ.

ಕೊನೆಗೂ ಸತ್ಯ ಬಯಲಾಯ್ತು ನಟಿ ಸೌಂದರ್ಯ ಹಾಗೂ ಜಗಪತಿ ಬಾಬು ಸಂಬಂಧ-ಅನುಬಂಧ

ರಜನೀಕಾಂತ್ (Rajanikanth) ನಟನೆಯ ಅಣ್ಣಾತ್ತೆ ಸಿನಿಮಾ ತಮಿಳಿನಲ್ಲಿ 'Peddanna' ಆಗಿ ಬಿಡುಗಡೆ ಕಂಡಿತ್ತು. 'ರಜನೀಕಾಂತ್ ಅವರ ಅಣ್ಣಾತ್ತೆ ಸಿನಿಮಾ ದೊಡ್ಡ ಫ್ಲಾಪ್ ಆಗಿದ್ದರೂ ನಾನು ಯಾಕೆ ಈ ತಮಿಳು ಸಿನಿಮಾ ಒಪ್ಪಿಕೊಂಡೆ ಎಂದು ನನಗೆ ಗೊತ್ತಿಲ್ಲ. Kathanayakudu' ಮತ್ತು 'Lingaa' ಕೂಡ ಕ್ಲಿಕ್ ಆಗಿಲ್ಲ. ಆದರೂ ನಾನು ಸೂಪರ್ ಸ್ಟಾರ್ ತುಂಬಾನೇ ಶಾಂತವಾಗಿರುವುದನ್ನು ನೋಡಿದ್ದೀನಿ. ನೀವು ಅವರನ್ನು ಯಾವಾಗ ನೋಡಿದರೂ ಅವರ ಕೈ ಮುದ್ರಾ positionನಲ್ಲಿ ಇಟ್ಟುಕೊಂಡಿರುತ್ತಾರೆ,' ಎಂದಿದ್ದರು ಜಗಪತಿ. 

ಕೆಲವು ದಿನಗಳ ಹಿಂದೆ ಜಗಪತಿ ರಾಜಕೀಯ (Politics) ಪ್ರವೇಶದ ಬಗ್ಗೆ ಹರಿದಾಡುತ್ತಿತ್ತು. 'ನಾನು ಹೇಗೆ ರಾಜಕೀಯಕ್ಕೆ ಕಾಲಿಡಲಿ? ನನಗೆ ನಾಲ್ಕು ಮಂದಿಯನ್ನು ಕಂಟ್ರೋಲ್ ಮಾಡುವುದಕ್ಕೂ ಆಗೋಲ್ಲ. ನಾನು ಸುಳ್ಳು ಹೇಳುವ ವ್ಯಕ್ತಿ ಅಲ್ಲ. ಎಲ್ಲಿ ನೋಡಿದರೂ ಸುಳ್ಳು ಹೇಳುವವರಿದ್ದಾರೆ. ಅಸತ್ಯವೇ ಈ ಜಗತ್ತಿನ ಹೊಸ ಸತ್ಯ,' ಎಂದು ಜಗಪತಿ ಸ್ಪಷ್ಟನೆ ಕೊಟ್ಟಿದ್ದಾರೆ.

Follow Us:
Download App:
  • android
  • ios