ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ(Kannadati) ಧಾರಾವಾಹಿ ಹಿಂದಿಯಲ್ಲಿ ಡಬ್ ಆಗುವ ಮೂಲಕ ಹಿಂದಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಈಗಾಗಲೇ ಡಬ್ಬಿಂಗ್ ಕೆಲಸ ಪ್ರಾರಂಭವಾಗಿದ್ದು ಪ್ರೋಮೋ ಕೂಡ ಬಿಡುಗಡೆಯಾಗಿದೆ.

ಕನ್ನಡ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳು(Serials) ಪ್ರಸಾರವಾಗುತ್ತಿದ್ದು ಅಭಿಮಾನಿಗಳನ್ನು ರಂಜಿಸುತ್ತಿವೆ. ಒಂದಕ್ಕೊಂತ ಒಂದು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದ್ದು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿವೆ. ಕನ್ನಡದ ಧಾರಾವಾಹಿಗಳ ಜೊತೆಗೆ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಕನ್ನಡದ ಧಾರಾವಾಹಿಗಳಿಗೆ ಪೈಪೂಟಿ ನೀಡುವ ಮಟ್ಟದಲ್ಲಿ ಬೇರೆ ಭಾಷೆಯ ಧಾರಾವಾಹಿಗಳು ಡಬ್ ಆಗಿ ಕನ್ನಡದಲ್ಲಿ ಪ್ರಸಾರ ಆಗುತ್ತಿವೆ. ಆದರೀಗ ಕನ್ನಡದ ಜನಪ್ರಿಯ ಧಾರಾವಾಹಿಯೊಂದು ಹಿಂದಿ ಭಾಷೆಗೆ ಡಬ್ ಆಗುತ್ತಿರುವುದು ವಿಶೇಷ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ(Kannadati) ಧಾರಾವಾಹಿ ಹಿಂದಿಯಲ್ಲಿ ಡಬ್ ಆಗುವ ಮೂಲಕ ಹಿಂದಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.

ಈಗಾಗಲೇ ಡಬ್ಬಿಂಗ್ ಕೆಲಸ ಪ್ರಾರಂಭವಾಗಿದ್ದು ಪ್ರೋಮೋ ಕೂಡ ಬಿಡುಗಡೆಯಾಗಿದೆ. ಅಂದಹಾಗೆ ಕನ್ನಡತಿ ಹೆಸರಿನ ಧಾರಾವಾಹಿ ಹಿಂದಿಯಲ್ಲಿ ಅಜ್ಞಾಬಿ ಬನೇ ಹಮ್ಸಫರ್ ಹೆಸರಿನಲ್ಲಿ ಹಿಂದಿಯಲ್ಲಿ ಪ್ರಸಾರ ಪ್ರಾರಂಭಮಾಡುತ್ತಿದೆ. ಕನ್ನಡದ ಕನ್ನಡತಿ ಧಾರಾವಾಹಿ ಡಬ್ ಆಗುತ್ತಿರುವ ಸಂತಸವನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರೋಮೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಅಂದಹಾಗಿ ಕನ್ನಡತಿ ಧಾರಾವಾಹಿಯಲ್ಲಿ ನಾಯಕನಾಗಿ ಕರಣ್ ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ರಂಜನಿ ರಾಘವನ್ ನಟಿಸಿದ್ದಾರೆ. ಇಬ್ಬರು ಹರ್ಷ ಮತ್ತು ಭುವಿ ಪಾತ್ರದ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.ಇದೀಗ ಹಿಂದಿ ಅಭಿಮಾನಿಗಳ ಮನಗೆಲ್ಲಲು ಸಜ್ಜಾಗಿದ್ದಾರೆ.

ಕನ್ನಡತಿಯಲ್ಲಿ ದೇವತೆ, ರಾಮಾಚಾರಿಯಲ್ಲಿ ರಾಕ್ಷಸಿ.. ಅಬ್ಬಬ್ಬಾ, ಭಾವನಾ ಟ್ಯಾಲೆಂಟೇ!

ಅಂದಹಾಗೆ ಈ ಸಂತಸದ ವಿಚಾರವನ್ನು ನಟ ಕಿರಣ್ ರಾಜ್ ಸಹ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕರಣ್ ರಾಜ್ ಹಿಂದಿ ಪ್ರೋಮೋ ಶೇರ್ ಮಾಡಿದ್ದಾರೆ. ಕನ್ನಡ ಧಾರಾವಾಹಿ ಬೇರೆ ಭಾಷೆಗೆ ಡಬ್ ಆಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. ಕನ್ನಡತಿ ಧಾರಾವಾಹಿ ಶಿಕ್ಷಕಿ ಭುವನೇಶ್ವರಿ ಕನ್ನಡ ಸಾಹಿತ್ಯ ಕಟ್ಟ ಅಭಿಮಾನಿ. ಅಪ್ಪಟ ಕನ್ನಡ ಮಾತನಾಡುವ ಹುಡುಗಿ. ನಾಯಕ ಹರ್ಷನಿಗೆ ಕನ್ನಡ ಕಲಿಸುವ ಜೊತೆಗೆ ಹರ್ಷನ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹರ್ಷ ಯುವ ಉದ್ಯಮಿಯಾಗಿದ್ದಾರೆ. ಜೀವನದಲ್ಲಿ ಎಲ್ಲಕ್ಕಿಂತ ಹಣ ಮತ್ತು ಸಮಯ ಮುಖ್ಯ ಅಂತ ಅಂದುಕೊಂಡವನು. ಹರ್ಷನಿಗೆ ಕನ್ನಡ ಕಲಿಸುವ ಜೊತೆಗೆ ಪ್ರೀತಿ ಪಾಠ ಮಾಡುತ್ತ ಭುವಿ ತಾನೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಸದ್ಯ ಹರ್ಷ ಮತ್ತು ಭುವಿ ಮದುವೆ ಸುತ್ತ ಧಾರಾವಾಹಿ ನಡೆಯುತ್ತಿದೆ.

View post on Instagram


ಕನ್ನಡತಿ ಹೀರೋ ಕಿರಣ್ ರಾಜ್ ಬಳಿ ಇರೋ Mobile ಯಾವುದು? ಇದ್ರಲ್ಲಿ ಒಂದೇ ಒಂದು Selfie ಇಲ್ಲ ಯಾಕೆ?

ಈ ಧಾರಾವಾಹಿ ಪ್ರೇಕ್ಷಕರಿಗೆ ಮನರಂಜನೆ ನೀಡುವ ಜೊತೆಗೆ ಕನ್ನಡ ಮೇಲಿನ ಪ್ರೀತಿ ಮತ್ತು ಧಾರಾವಾಹಿ ಕೊನೆಯಲ್ಲಿ ಬರುವ ಸಿರಿಗನ್ನಡಂ ಗೆಲ್ಗೆ ಕಾನ್ಸೆಪ್ಟ್ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದೆ. ಅಂದಹಾಗೆ ಹಿಂದಿಯಲ್ಲಿ ಬರಲು ಸಿದ್ಧವಾಗಿರುವ ಈ ಧಾರಾವಾಹಿ ಹೇಗೆ ಮೂಡಿಬರಲಿದೆ ಹಿಂದಿ ಪ್ರೇಕ್ಷಕರು ಯಾವ ರೀತಿ ಬರಮಾಡಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.