ರಚಿತಾ ರಾಮ್ ಟಾಲಿವುಡ್‌ನಲ್ಲಿ 'ಸೂಪರ್ ಮಚ್ಚಿ' ಎನ್ನುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಭರದಿಂದ ಸಾಗುತ್ತಿದ್ದು ಸಿನಿಮಾ ಸೆಟ್‌ನಲ್ಲಿ ಖ್ಯಾತ ನಟ ರಾಜೇಂದ್ರ ಪ್ರಸಾದ್‌ರನ್ನು ಭೇಟಿ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಟಾಲಿವುಡ್‌ಗೆ ಹಾರಿದ್ದಾರೆ. ಚಿರಂಜೀವಿ ಅಳಿಯ ಕಲ್ಯಾಣ್ ದೇವ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಈ ವರ್ಷ ಮಾಡಿದ 'ಸೀತಾರಾಮ ಕಲ್ಯಾಣ', ಐ ಲವ್ ಯೂ, 'ಅಯೋಗ್ಯ' ಸಿನಿಮಾಗಳು ಬಿಗ್ ಹಿಟ್ ನೀಡಿವೆ. ಟಾಲಿವುಡ್‌ನಲ್ಲೂ 'ಸೂಪರ್ ಮಚ್ಚಿ' ಬಿಗ್ ಹಿಟ್ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಚಿತ್ರ ವಿಮರ್ಶೆ: ಅವನೇ ಶ್ರೀಮನ್ನಾರಾಯಣ
ಟಾಲಿವುಡ್ ಸೂಪರ್ ಸ್ಟಾರ್ ರಾಜೇಂದ್ರ ಪ್ರಸಾದ್‌ರನ್ನು ಭೇಟಿ ಮಾಡಿ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ನಾನು ಲಕ್ಕಿ ಎಂದು ನನಗೆ ಗೊತ್ತಿದೆ' ಎಂದು ಬರೆದುಕೊಂಡಿದ್ದಾರೆ.
ರಚಿತಾ ರಾಮ್ ಕಲ್ಯಾಣ್ ದೇವ್ ಜೊತೆ 'ಸೂಪರ್ ಮಚ್ಚಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಭರದಿಂದ ಸಾಗುತ್ತಿದೆ. ಶೂಟಿಂಗ್ ಸೆಟ್‌ನಲ್ಲಿ ರಾಜೇಂದ್ರ ಪ್ರಸಾದ್‌ರನ್ನು ಭೇಟಿ ಮಾಡಿದ್ದಾರೆ.
ಅವಾರ್ಡ್ ಕಾರ್ಯಕ್ರಮದಲ್ಲಿ 'ವಿಜಯ್' ಮದುವೆ ಆಗುವುದಾಗಿ ರೋಸ್ ಕೊಟ್ಟ ರಶ್ಮಿಕಾ!
ರಾಜೇಂದ್ರ ಪ್ರಸಾದ್ ಇದುವರೆಗೂ 240 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಲಿವುಡ್‌ನಲ್ಲಿ 'ಕಿಂಗ್ ಆಫ್ ಕಾಮಿಡಿ' ಅಂತಾನೇ ಫೇಮಸ್. ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಕೂಡಾ ರಾಜೇಂದ್ರ ಪ್ರಸಾದ್ ಅವರ ಅಭಿಮಾನಿ. ಇವರು ಕನ್ನಡದಲ್ಲಿ 2005 ರಲ್ಲಿ 'ಮಹಾಸಾಧ್ವಿ ಮಲ್ಲಮ್ಮ' ಸಿನಿಮಾದಲ್ಲಿ ನಟಿಸಿದ್ದರು.
