ರೈತ ಪ್ರತಿಭಟನೆ ಬಗ್ಗೆ ನಟಿ ಪ್ರಣಿತಾ ಮಾತು | ಬಜೆಟ್ ಬಗ್ಗೆ ಬಹುಭಾಷಾ ನಟಿ ಹೇಳಿದ್ದೇನು..? ಇಲ್ಲಿ ಓದಿ

ಕಾನೂನು ಉಲ್ಲಂಘಿಸಿ, ಸಮಾಜದ ಸುವ್ಯವಸ್ಥೆಗೆ ಧಕ್ಕೆ ತರುವ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಇನ್ನೂ ಮಾತುಕತೆಗೆ ಸಿದ್ಧವಿದೆ. ಕಾಯ್ದೆಗಳು ಉತ್ತಮವಾಗಿದೆ. ಇತ್ತೀಚೆಗೆ ಮಂಡನೆಯಾದ ಬಜೆಟ್ ಭಾರತವು ದಶಕಗಳಲ್ಲಿ ಕಂಡ ಅತ್ಯಂತ ಸುಧಾರಿತ ಬಜೆಟ್ ಆಗಿದೆ ಎಂದು ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ರೈತ ಪ್ರತಿಭಟನೆಯ ಕುರಿತ ಮಾತುಕತೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಟಿ ಈ ಬಗ್ಗೆ ತಮ್ಮ ನಿಲುವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಕಷ್ಟು ಸೆಲೆಬ್ರಟಿಗಳು, ಗಾಯಕರು, ನಟ, ನಟಿಯರು ಈ ಸಂಬಂಧ ತಮ್ಮ ನಿಲುವನ್ನು ತಿಳಿಸಿದ್ದಾರೆ.

ರೈತ ಪ್ರತಿಭಟನೆ ಹೆಸರಿನಲ್ಲಿ ಭಾರತ ವಿರೋಧಿ ಪಿತೂರಿಗೆ ಟೂಲ್ ಕಿಟ್ ನೀಡಿದ ಗ್ರೇಟಾ ಧನ್ಬರ್ಗ್!

ಭಾರತದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಈಗ ಎಲ್ಲರ ಗಮನ ಸೆಳೆದಿದೆ. ಈಗಾಗಲೇ ವಿದೇಶದಿಂದಲೂ ಹಲವು ಪ್ರಮುಖರು ಪ್ರತಿಭಟನೆ ಸಂಬಂಧ ಟ್ವೀಟ್ ಮಾಡುತ್ತಿದ್ದಾರೆ.

Scroll to load tweet…

ಸ್ವೀಡನ್ ಮೂಲದ ಪರಿಸರವಾದಿ ಗ್ರೆಟಾ ಅವರೂ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಹಲವು ಆತಂಕಕಾರಿ ಟ್ವೀಟ್‌ಗಳನ್ನು ಮಾಡಿ ವಿವಾದ ಸೃಷ್ಟಿಸಿದ ಅವರ ವಿರುದ್ಧ ದೆಹಲಿ ಪೊಲೀಸರು ಪ್ರಕರಣವನ್ನೂ ದಾಖಲಿಸಿದ್ದಾರೆ.

ಇಂಟರ್‌ನ್ಯಾಷನಲ್ ಪಾಪ್‌ಸ್ಟಾರ್, ನಾಯಕಿ ಕಂ ಗಾಯಕಿ ಮತ್ತು ಉದ್ಯಮಿ ರಿಹಾನಾ ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಮುಷ್ಕರದ ಬಗ್ಗೆ ಟ್ವೀಟ್ ಮಾಡಿ ಸುದ್ದಿಯಾಗಿದ್ದರು. 'ನಾವೇಕೆ ಈ ಬಗ್ಗೆ ಚಕಾರ ಎತ್ತುತ್ತಿಲ್ಲ?' ಎಂದು ರೈತ ಪ್ರತಿಭಟನೆ ಬಗ್ಗೆ ಟ್ವಿಟ್ ಮಾಡಿದ್ದರು. ಈ ಟ್ವೀಟ್‌ಗೆ ಭಾರತದ ಪ್ರಮುಖ ಸೆಲೆಬ್ರಿಟಿಗಳು ಪ್ರತ್ಯುತ್ತರ ಕೊಟ್ಟಿದ್ದಾರೆ.