ಬಿಹಾರದಲ್ಲಿ ಯುವತಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆಯನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ತೀವ್ರವಾಗಿ ಖಂಡಿಸಿದ್ದಾರೆ. ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ನಂತರ ಆಳವಾದ ಗಾಯಗಳಿಂದ ಸಂಕಟಪಟ್ಟಿದ್ದ ಯುವತಿ ಎರಡು ವಾರಗಳ ನಂತರ ಮೃತಪಟ್ಟಿದ್ದಳು.

ಭಾರತದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಮಾತನಾಡಿದ ನಟಿ, ನಮ್ಮ ಹೆಣ್ಮಕ್ಕಳು ಸುರಕ್ಷಿತವಾಗಿಲ್ಲ. ಪ್ರತಿದಿನ ಕ್ರೂರವಾದ ಘಟನೆಗಳು ನಡೆಯುತ್ತಿವೆ ಎಂದಿದ್ದಾರೆ. ಜಾತೀವಾದದ ದೃಷ್ಟಿಯಿಂದ ದೋಷಿಯನ್ನೂ, ಸಂತ್ರಸ್ತರನ್ನೂ ನೋಡಬೇಡಿ. ಅವರನ್ನು ಜಾತಿಯಿಂದಲೇ ವಿಂಗಡಿಸಬೇಡಿ. ಅನ್ಯಾಯದ ವಿರುದ್ಧ ಒಟ್ಟಿಗೆ ಹೋರಾಡೋಣ ಎಂದಿದ್ದಾರೆ.

ನಟಿ ಖುಷ್ಬೂ ಕಾರಿಗೆ ಟ್ಯಾಂಕರ್ ಡಿಕ್ಕಿ..! ಕಾರು ನಜ್ಜುಗುಜ್ಜು

ಆರೊಪಿ ಚಂದನ್ ರೈಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಕೃತ್ಯದಲ್ಲಿ ಆರೋಪಿಗೆ ನೆರವಾದ ಇತರ ಆರೋಪಿಗಳ ಪತ್ತೆಗೂ ಪ್ರಯತ್ನ ನಡೆಸಲಾಗುತ್ತಿದೆ. ನಟಿ ಕಂಗನಾ ರಣಾವತ್ ಯಾವುದೇ ಕೃತ್ಯ ನಡೆದಾಗಲೂ ಆ ಬಗ್ಗೆ ಟ್ವೀಟ್ ಮಾಡುತ್ತಲೇ ಇರುತ್ತಾರೆ.

ಬಾಲಿವುಡ್ ನಟ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಾಗ ನಟಿ ಬಾಲಿವುಡ್ ನೆಪೊಟಿಸಂ ಬಗ್ಗೆ ಮಾತನಾಡಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ದೇಶದಲ್ಲಾಗುವ ಹೆಚ್ಚಿನ ಕೃತ್ಯದಗಳ ಕುರಿತು ನಟಿ ಪ್ರತಿಕ್ರಿಯಿಸುತ್ತಲೇ ಇರುತ್ತಾರೆ.