ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ನಟಿ, ರಾಜಕಾರಣಿ ಖುಷ್ಬೂ ಸುಂದರ್ ಸಂಚರಿಸುತ್ತಿದ್ದ ಕಾರಿಗೆ ಟ್ಯಾಂಕರ್ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಚೆನ್ನೈನ ಅಯ್ಯನಾರ್‌ಕೋಯಿಲ್‌ನಲ್ಲಿ ಅಪಘಾತ ನಡೆದಿದೆ.

ವೆಟ್ರಿ ವೇಲ್ ಯಾತ್ರಾ(ವಿಜಯಯಾತ್ರೆ)ಯಲ್ಲಿ ಭಾಗಿಯಾಗಲು ಕುಡ್ಡಲೋರ್‌ಗೆ ಪ್ರಯಾಣಿಸುತ್ತಿದ್ದ ಸಂದರ್ಭ ತಿರಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಮೇಲ್ಮರ್ವತ್ತೂರಿನಲ್ಲಿ ನಮಗೆ ಅಪಘಾತವಾಯ್ತು.

ಸಿ.ಟಿ.ರವಿ ಕೋಟಾದಡಿಯಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಬಿಜೆಪಿ ಶಾಸಕ

ಒಂದು ಟ್ಯಾಂಕರ್ ಬಂದು ನಮಗೆ ಗುದ್ದಿದೆ. ದೇವರ ದಯೆಯಿಂದ ನಾವು ಆರಾಮವಾಗಿದ್ದೇವೆ. ನಾವು ವೆಟ್ರಿಯಾತ್ರೆಯಲ್ಲಿ ಭಾಗಿಯಾಗಲು ಕುಡಲ್ಲೋರ್‌ಗೆ ತೆರಳುತ್ತಿದ್ದೆವುಎಂದು ಅವರು ಟ್ವೀಟ್ ಮಾಡಿದ್ದಾರೆ. ನಟಿ ಖುಷ್ಬೂ ಡ್ಯಾಮೇಜ್ ಆಗಿರು ಕಾರಿನ ಫೋಟೋ ಪೋಸ್ಟ್ ಮಾಡಿದ್ದಾರೆ.

ಟ್ಯಾಂಕರ್ ಬಂದು ತಮ್ಮಮ ಕಾರಿಗೆ ಗುದ್ದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಂಟೈನರ್ ನಮಗೆ ಬಂದು ಡಿಕ್ಕಿಯಾಗಿದೆ ಎಂದು ನಟಿ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಬಹಳಷ್ಟು ಜನ ಫ್ಯಾನ್ಸ್ ನಟಿಯ ಟ್ವೀಟ್‌ಗೆ ರಿಯಾಕ್ಟ್ ಮಾಡಿ ಕಮೆಂಟ್ ಮಾಡಿದ್ದಾರೆ.