ಕಂಗನಾ ರಣಾವತ್ ಮೊದಲ ಬಾರಿಗೆ ಅಮೃತಸರದ ಗೋಲ್ಡನ್ ಟೆಂಪಲ್ ಎಂದೇ ಖ್ಯಾತವಾದ ಶ್ರೀ ಹರ್ಮಂದೀರ್ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ನಟಿ ಇನ್ಸ್ಟಾಗ್ರಾಮ್‌ನಲ್ಲಿ ಅವರ ಮೊದಲ ಭೇಟಿಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅವರೊಂದಿಗೆ ಸೋದರಳಿಯ ಪೃಥ್ವಿರಾಜ್ ಮತ್ತು ಸಹೋದರಿ ರಂಗೋಲಿ ಚಾಂದೇಲ್ ಸೇರಿದಂತೆ ಅವರ ಕುಟುಂಬ ಸದಸ್ಯರು ಇದ್ದರು.

ಫೋಟೋಗಳಲ್ಲಿ ಕಂಗನಾ ಅವರು ತಿಳಿ ನೀಲಿ ಸಲ್ವಾರ್ ಧರಿಸಿರುವುದು ಕಂಡುಬಂತು. ಪೃಥ್ವಿರಾಜ್‌ನನ್ನು ತನ್ನ ಎತ್ತಿಕೊಂಡು ಹೋಗುವ ಕಂಗನಾಳನ್ನು ಕಾಣಬಹುದು. ಇನ್ನೊಂದರಲ್ಲಿ ಕಂಗನಾ ಮತ್ತು ರಂಗೋಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಾಣಬಹುದು.

ನಾನು ಊಟ ಮಾಡೋ ತನಕ ಹೆಂಡ್ತಿ ಎಚ್ಚರ ಇರಬೇಕಾಗಿಲ್ಲ ಎಂದ ಅರ್ಜುನ್..! ಮಲೈಕಾ ಲಕ್ಕಿ.

ಫೊಟೋ ಹಂಚಿಕೊಂಡ ಕಂಗನಾ, ಇಂದು ನಾನು ಶ್ರೀ ಹರ್ಮಂದೀರ್ ಸಾಹಿಬ್ ಸುವರ್ಣ ದೇವಾಲಯಕ್ಕೆ ಭೇಟಿ ನೀಡಿದ್ದೇನೆ, ನಾನು ಉತ್ತರದಲ್ಲಿ ಬೆಳೆದಿದ್ದರೂ ಮತ್ತು ನನ್ನ ಕುಟುಂಬದ ಬಹುತೇಕ ಎಲ್ಲರೂ ಈಗಾಗಲೇ ಅನೇಕ ಬಾರಿ ದೇವಾಲಯಕ್ಕೆ ಭೇಟಿ ನೀಡಿದ್ದು ನಾನು ಮಾತ್ರ ಇದು ಮೊದಲ ಬಾರಿಗೆ ಬಂದಿದ್ದೇನೆ. ಗೋಲ್ಡನ್ ಟೆಂಪಲ್ ಸೌಂದರ್ಯ ಮತ್ತು ದೈವತ್ವದಿಂದ ಬೆರಗಾದೆ ಎಂದಿದ್ದಾರೆ.

ಕೆಲವು ವಾರಗಳ ಹಿಂದೆ, ಕಂಗನಾ ಅವರು ಕೋವಿಡ್ -19 ನಿಂದ ಚೇತರಿಸಿಕೊಂಡ ಕೂಡಲೇ ಹಿಮಾಚಲ ಪ್ರದೇಶದ ತನ್ನ ಊರಿಗೆ ಮರಳಿದ್ದಾರೆ. ಇತ್ತೀಚೆಗಷ್ಟೇ ನಟಿಯನ್ನು ಟ್ವಿಟರ್ ಬ್ಯಾನ್ ಮಾಡಿದೆ.