ಪುರುಷ ಮತ್ತು ಮಹಿಳೆಯ ನಡುವಿನ ಪ್ರತಿಯೊಂದು ಸಂಬಂಧವೂ ಪ್ರಣಯದಿಂದ ಕೂಡಿಲ್ಲ ಎಂದು ನಟ ಅರ್ಜುನ್ ಕಪೂರ್ ಹೇಳುತ್ತಾರೆ. ಅವರ ಇತ್ತೀಚಿನ ಚಿತ್ರ "ಸಂದೀಪ್ ಔರ್ ಪಿಂಕಿ ಫಾರಾರ್" ಪ್ರೀತಿಯಿಲ್ಲದ ವಾಸ್ತವ ಜಗತ್ತನ್ನು ಚಿತ್ರಿಸಲು ಪ್ರಯತ್ನಿಸುತ್ತದೆ. ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಈ ಚಿತ್ರವು ಪ್ರಣಯಕ್ಕಿಂತ ಹೆಚ್ಚಿನ ವಿಚಾರಗಳಿಗೆ ಗೌರವವನ್ನು ನೀಡುತ್ತದೆ ಎಂದು ಅರ್ಜುನ್ ಹೇಳಿದ್ದಾರೆ

ಕಲಾವಿದರಾಗಿ ನಾವು ಯಾವಾಗಲೂ ಡಿಫರೆಂಟಾಗಿ ಏನಾದರೂ ಮಾಡಬೇಕೆಂದು ಬಯಸುತ್ತೇವೆ. ಈ ಸಿನಿಮಾ ನಿಜಕ್ಕೂ ವಾಸ್ತವತೆಯ ಆಧಾರದಲ್ಲಿ ಬರೆದದ್ದು. ಸಿನಿಮಾ ಲವ್ ಸ್ಟೋರಿಯಾದಾಗ ಬಹಳಷ್ಟು ವಿಚಾರಗಳು ಮಿಕ್ಸ್ ಆಗುತ್ತವೆ. ಪ್ರೀತಿ, ಪ್ರಣಯ ಬೆಳವಣಿಗೆಯನ್ನು ವಿವರಿಸುವುದಕ್ಕೇ ಫೋಕಸ್ ನೀಡಬೇಕಾಗುತ್ತದೆ ಎಂದಿದ್ದಾರೆ.

ಮೊದಲ ಮದುವೆಯಲ್ಲಿ ಮಗನಿರೋ ಮಹಿಳೆಯ ಜೊತೆ ಡೇಟಿಂಗ್: ಮಲೈಕಾ ಪಾಸ್ಟ್ ಬಗ್ಗೆ ಅರ್ಜುನ್ ಮಾತು..

ಮಹಿಳೆಯರು ಮತ್ತು ಪುರುಷರಿಗೆ ಭಿನ್ನ ರೀತಿಯಲ್ಲಿ ಅವರ ಭಾವನೆ, ಸಂಬಂಧದಲ್ಲಿ ಉಳಿಯಲು ಬಿಡಬೇಕು. ಆದರೆ ಗೌರವ ಸಮಾನಾಗಿರಬೇಕು. ಬಹಳಷ್ಟು ಸಲ ಪ್ರೀತಿಯಲ್ಲಿದ್ದಾಗ ಗೌರವಿಸುವುದು ಮರೆತುಹೋಗುತ್ತದೆ ಎಂದಿದ್ದಾರೆ.

ಮೇ 20 ರಂದು ಡಿಜಿಟಲ್ ಮೂಲಕ ಬಿಡುಗಡೆಯಾದ ಈ ಸಿನಿಮಾ ಲಿಂಗಅಸಮಾನತೆ ಮತ್ತು ವರ್ಗದ ವಿಷಯಗಳನ್ನು ಪರಿಶೋಧಿಸುತ್ತದೆ. ಬ್ಯಾನರ್ಜಿ ಮತ್ತು ವರುಣ್ ಗ್ರೋವರ್ ಕಥೆ ಬರೆದಿದ್ದಾರೆ. ದೇಶಾದ್ಯಂತದ ಜನರಿಗೆ ಹೋಲಿಸಿದರೆ ಮುಂಬೈನಲ್ಲಿ ಒಬ್ಬರು ಪಾಟ್ರಿಯಾರ್ಕಿ ಸಮಸ್ಯೆ ಎದುರಿಸಬೇಕಾಗಿಲ್ಲ ಎಂದು ಅರ್ಜುನ್ ಹೇಳಿದ್ದಾರೆ.

ಇದು ಉಪ್ಪಿನಕಾಯಿಯನ್ನು ಬಡಿಸಲು ಮಹಿಳೆಗೆ ಕೇಳುವಷ್ಟು ಸರಳವಾಗಿದೆ. ನಾನು ಅದನ್ನು ಎಂದಿಗೂ ಮಾಡಬೇಕಾಗಿಲ್ಲ, ನನ್ನ ತಂಗಿ ಮನೆಯಲ್ಲಿ ಅದನ್ನು ಮಾಡಬೇಕಾಗಿಲ್ಲ, ಅಥವಾ ನಾನು ತಿನ್ನುವುದನ್ನು ಮುಗಿಸುವವರೆಗೂ ನನ್ನ ಸಂಗಾತಿ ಎಚ್ಚರವಾಗಿ ಕುಳಿತುಕೊಳ್ಳಬೇಕೆಂದು ನಾನು ಎಂದಿಗೂ ನಿರೀಕ್ಷಿಸುವುದಿಲ್ಲ ಅಥವಾ ಅವಳು ಏನನ್ನಾದರೂ ಸರಿಯಾಗಿ ಮಾಡಿದರೆ, ಅದಕ್ಕೆ ನಾನು ಮನ್ನಣೆ ಪಡೆಯುತ್ತೇನೆ ಎಂದಿದ್ದಾರೆ.