ಪ್ರತಿದಿನ ಹಲವಾರು ಹಾಟ್‌ ವಿಷಯಗಳ ಬಗ್ಗೆ ನಿರ್ಭಯವಾಗಿ ಮಾತನಾಡುವ ಅಥವಾ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ಕಂಗನಾ ರಣಾವತ್ ಈಗ ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ.

ಸಾಮಾಜಿಕ ಮಾಧ್ಯಮ ಟೈಮ್‌ಲೈನ್‌ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಅವರ ಸ್ವರಚಿತ ಕವಿತೆಯನ್ನೂ ಶೇರ್ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಬರೆದ ಹೃದಯ ಸ್ಪರ್ಶಿ ಕವಿತೆ ನೆಟ್ಟಿಗರ ಮನ ಗೆದ್ದಿತ್ತು.

ಮೆರಿ ಕ್ರಿಸ್ಮಸ್ ಎಂದ ಕಂಗನಾ..! ಅಂದಹಾಗೆ ಈ ವಿಶ್ ಎಲ್ರಿಗೂ ಇಲ್ಲ

ಇದೀಗ ನಟಿ ಇನ್ನೊಂದು ರಾಖ್ (ಚಿತಾಭಸ್ಮ) ಎಂಬ ಶೀರ್ಷಿಕೆಯ ಕವಿತೆ ಶೇರ್ ಮಾಡಿದ್ದಾರೆ. ಈ ಕವಿತೆಯು ಆಕೆಯ ಇತ್ತೀಚಿನ ಫ್ಯಾಮಿಲಿ ಹೈಕಿಂಗ್ ಪ್ರವಾಸದ ಕುರಿತು ಅವರ ಅನುಭವಗಳನ್ನು ತಿಳಿಸುತ್ತದೆ.

ನಟಿ ತನ್ನ ಹೈಕಿಂಗ್ ವೀಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಕಂಗನಾ ಹಿಮದಲ್ಲಿ ಓಡುತ್ತಿರುವುದನ್ನು, ಸಂಬಂಧಿಕರ ಮೇಲೆ ಹಿಮವನ್ನು ಎಸೆಯುವುದನ್ನು ನೋಡಬಹುದು. ಸಾವಿನ ನಂತರ ಗಂಗಾ ನದಿಯಲ್ಲಿ ವ್ಯಕ್ತಿಯ ಚಿತಾಭಸ್ಮವನ್ನು ಮುಳುಗಿಸುವ ಪದ್ಧತಿಯ ಬಗ್ಗೆ ತನ್ನ ಆಲೋಚನೆಗಳನ್ನು ಹಂಚಿಕೊಂಡ ಕಂಗನಾ, ತನ್ನ ಚಿತಾಭಸ್ಮವನ್ನು ಪರ್ವತಗಳ ಮೇಲೆ ಹರಡಬೇಕೆಂಬ ಬಯಕೆಯನ್ನು ತಿಳಿಸಿದ್ದಾರೆ. ಈ ಹಿಂದೆ ಕಂಗನಾ ಬರೆದ ಆಸ್ಮನ್ ಎಂಬ ಕವಿತೆಯಲ್ಲಿ ಆಕಾಶದ ಮಹತ್ವವನ್ನು ಬರೆದಿದ್ದರು. ಆ ಕವಿತೆ ಪ್ರೀತಿ ಮತ್ತು ಜೀವನದ ನೈಜ ಸಾರವನ್ನು ಪ್ರತಿಬಿಂಬಿಸುತ್ತದೆ.