ಬಾಲಿವುಡ್ ನಟಿ ಕಂಗನಾ ರಣಾವತ್ ಮೆರಿ ಕ್ರಿಸ್ಮಸ್ ಎಂದು ವಿಶ್ ಮಾಡಿದ್ದಾರೆ. ಆದ್ರೆ ಈ ವಿಶ್ ಎಲ್ಲರಿಗೂ ಇಲ್ಲ. ಆದರೆ ಯಾರಿಗೆಲ್ಲ ಈ ವಿಶ್ ಎಂದೂ ಹೇಳಿದ್ದಾರೆ ಬಾಲಿವುಡ್ ಕ್ವೀನ್. ಯಾರಿಗೆಲ್ಲ ಈ ವಿಶ್..? ಯಾಕೆ ಈ ಕಂಡೀಷನ್

ಭಾರತದ ಎಲ್ಲ ಹಬ್ಬವನ್ನು ಸ್ವೀಕರಿಸುವ ಮತ್ತು ಗೌರವಿಸುವ ಎಲ್ಲರಿಗೂ ಮೆರಿ ಕ್ರಿಸ್ಮಸ್ ಎಂದಿದ್ದಾರೆ ನಟಿ. ನಟಿ ನೆವ್ಯೂ ಜೊತೆ ಕ್ರಿಸ್ಮಸ್ ಟ್ರೀ ಮುಂದೆ ನಿಂತಿರೋ ಫೋಟೋ ಶೇರ್ ಮಾಡಿದ್ದಾರೆ.

ರಜನಿ ಸೆಟ್‌ನಲ್ಲಿ ನಾಲ್ವರಿಗೆ ಕೊರೋನಾ: ಬಿಪಿ ಏರುಪೇರು, ಸೌತ್‌ ಸೂಪರ್‌ಸ್ಟಾರ್ ಆಸ್ಪತ್ರೆಗೆ ದಾಖಲು

ಇನ್ನೊಂದು ಟ್ವೀಟ್ ಮಾಡಿದ ನಟಿ, ನಿನ್ನೆ ನನ್ನ ಅತ್ತಿಗೆ ಮೊದಲ ಬಾರಿ ನನ್ನ ಮನೆಗೆ ಬಂದರು. ರಂಗೋಲಿ ರುಚಿಯಾದ ಗಜರ್‌ ಹಲ್ವಾ ಮಾಡಿದ್ದರು. ಕಳೆದ ರಾತ್ರಿ ಊಟದ ಕೆಲವು ಫೊಟೋಗಳು ಎಂದು ಶೇರ್ ಮಾಡಿದ್ದಾರೆ ಕಂಗನಾ.

ಇತ್ತೀಚೆಗಷ್ಟೇ ನಟಿ ತಲೈವಿ ಸಿನಿಮಾದ ಶೂಟಿಂಗ್ ಮುಗಿಸಿ ಫೋಟೋ ಶೇರ್ ಮಾಡಿದ್ದರು. ಮಟೊ ಧಾಕಡ್ ಸಿನಿಮಾದಲ್ಲಿ ನಟಿಸುತ್ತಿದ್ದು ಇದೊಂದು ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದೆ. ಇತ್ತೀಚೆಗಷ್ಟೇ ನಟಿಯ ಸಹೋದರನ ಮದುವೆ ನಡೆದಿತ್ತು.