ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ತಲೈವಿ ಜೊತೆಗೆ 'ಪಾಂಗಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ಪಾಂಗಾದ ಫಸ್ಟ್ ಲುಕ್ ರಿವೀಲ್ ಆಗಿದ್ದು ಕಂಗನಾ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದ್ದಾರೆ. 

 

ಸದ್ಯ ಪಾಂಗಾ ಸಿನಿಮಾ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ.  ಚಿತ್ರದ ಪ್ರಮೋಶನ್‌ಗಾಗಿ ಕಂಗನಾ ರೈಲ್ವೇ ಸ್ಟೇಷನ್‌ನಲ್ಲಿ ಟಿಕೆಟ್ ಮಾರಿದ್ದಾರೆ. ಛತ್ರಪತಿ ಶಿವಾಜಿ ರೈಲ್ವೇ ಸ್ಟೇಷನ್‌ಗೆ ಹೋಗಿ ಪ್ರಯಾಣಿಕರಿಗೆ ಟಿಕೆಟ್ ಹಂಚಿದ್ದಾರೆ. ಅರೇ, ಟಿಕೆಟ್ ಮಾರಾಟ ಮಾಡುವುದಕ್ಕೂ, ಈ ಸಿನಿಮಾಗೂ ಏನ್ ಸಂಬಂಧ ಎಂದು ತಲೆಕೆಡಿಸಿಕೊಳ್ಳಬೇಡಿ! 

ಈ ಸಿನಿಮಾದಲ್ಲಿ ಕಂಗನಾ ಕಬಡ್ಡಿ ಆಟಗಾರ್ತಿ ಜಯಾ ಹಾಗೂ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.  ಈ ಚಿತ್ರಕ್ಕಾಗಿ ಕಂಗನಾ ತೂಕ ಹೆಚ್ಚಿಸಿಕೊಂಡಿದ್ದಾರೆ. 

'ಅಮ್ಮ'ನಾದ ಕಂಗನಾ ರಾಣಾವತ್; ಹೀಗಾಗಿದ್ದಾರೆ ನೋಡಿ 'ಕ್ವೀನ್'!

ಪಾಂಗಾ ಸಿನಿಮಾವನ್ನು ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರೀಚಾ ಚಡ್ಡ, ನೀನಾ ಗುಪ್ತಾ, ಜಸ್ಸಿ ಗೀಲ್ ನಟಿಸಿದ್ದಾರೆ. 2020 ಜನವರಿ 24 ರಂದು ಚಿತ್ರ ರಿಲೀಸ್ ಆಗಲಿದೆ. 

ಇನ್ನೊಂದೆಡೆ ಕಂಗನಾ 'ತಲೈವಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಲೈವಿ ಫಸ್ಟ್ ಲುಕ್ ಭಾರೀ ಚರ್ಚೆಗೊಳಗಾಗಿದೆ. 

ಡಿಸೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ