ಬಾಲಿವುಡ್ 'ಕ್ವೀನ್' ಕಂಗನಾ ರಾಣಾವತ್ ಇತ್ತೀಚಿಗೆ ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುತ್ತಿವೆ. 'ಮಣಿಕರ್ಣಿಕಾ' ಬಿಗ್ ಹಿಟ್ ನಂತರ 'ತಲೈವಿ'ಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಇವರ ಮುಂಬರುವ ಸಿನಿಮಾ 'ಪಾಂಗ' ದ ಫಸ್ಟ್ ಲುಕ್ ಹೊರ ಬಿದ್ದಿದೆ. 

 

ಕಂಗನಾ ಸಹೋದರಿ ರಂಗೋಲಿ 'ಪಾಂಗಾ' ದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.  'ಅಮ್ಮನ ಪಾತ್ರಕ್ಕೆ ಮೊದಲು ಅಪ್ರೋಚ್ ಮಾಡಿದಾಗ ಕಂಗನಾಗೆ ಬೇಸರವಾಗಿತ್ತು. ಮಣಿಕರ್ಣಿಕಾದಲ್ಲಿ ತಾಯಿಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದರ ಯಶಸ್ಸಿನ ನಂತರ ಎರಡನೇ ಬಾರಿಗೆ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗೀಗ ಯಶಸ್ಸಿನ ಉತ್ತುಂಗದಲ್ಲಿರುವ ನಟಿಯರು ಕೂಡಾ ಅಮ್ಮನ ಪಾತ್ರ ಮಾಡಲು ಹಿಂಜರಿಯುತ್ತಿಲ್ಲ. ಇಷ್ಟಪಟ್ಟು ಮುಂದೆ ಬರುತ್ತಿದ್ದಾರೆ. ಇದು ಹೊಸ ಭಾರತ' ಎಂದು ಟ್ವೀಟ್ ಮಾಡಿದ್ದಾರೆ. 

'ತಲೈವಿ'ಯಲ್ಲಿ ಕಾಂಟ್ರೋವರ್ಸಿ ಹುಟ್ಟು ಹಾಕಲಿದ್ದಾರಾ ವಿಜಯ ದೇವರಕೊಂಡ?

ಫಸ್ಟ್ ಲುಕ್‌ನಲ್ಲಿ ಕಂಗಾನಾ ಎಥ್ನಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಟ್ಯಾಗ್‌ಲೈನ್ ನೋಡಿದ್ರೆ ಸಿನಿಮಾದಲ್ಲಿ ಕಂಗನಾ ಹೆಸರು ಜಯಾ. 

ಅಶ್ವಿನಿ ಐಯ್ಯರ್ ತಿವಾರಿ 'ಪಾಂಗಾ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಿಚಾ ಚಂದ ಹಾಗೂ ನೀನಾ ಗುಪ್ತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಬಡ್ಡಿ ಆಟಗಾರರ ಜೀವನಾಧಾರಿತ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ 24 ರಂದು ತೆರೆಗೆ ಬರಲಿದೆ.