ದುರ್ಗಾಷ್ಟಮಿಗೆ ಈರುಳ್ಳಿ ಖಾದ್ಯ: ಫೋಟೋ ಟ್ವೀಟಿಸಿ ಕಂಗನಾ ವಿವಾದ!

ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಅವರು ದುರ್ಗಾಷ್ಟಮಿ ಪ್ರಯುಕ್ತ ಈರುಳ್ಳಿಯ ಫೋಟೋ ಹಾಕುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದ್ದಾರೆ.

ಉತ್ತರ ಭಾರತದಲ್ಲಿ ಈಗ ಚೈತ್ರ ನವರಾತ್ರಿ ಆಚರಿಸಲಾಗುತ್ತಿದೆ. ಈ ವೇಳೆ ಮಂಗಳವಾರ ನಡೆದ ದುರ್ಗಾಷ್ಟಮಿ ಪ್ರಯುಕ್ತ ಉಪವಾಸವಿದ್ದರೆ ನಿಮ್ಮ ಮನೆಯಲ್ಲಿನ ಪ್ರಸಾದವು ಈ ರೀತಿ ಗೋಚರಿಸುತ್ತದೆ ಎಂಬ ಟ್ಯಾಗ್‌ಲೈನ್‌ನಲ್ಲಿ ಪೂರಿ, ಉಪ್ಪಿಟ್ಟು, ಮೊಸರು ಹಾಗೂ ಕತ್ತರಿಸಿದ ಈರುಳ್ಳಿಯ ಫೋಟೋವನ್ನು ನಟಿ ಕಂಗನಾ ಟ್ವೀಟ್‌ ಮಾಡಿದ್ದಾರೆ.

ಪೋಷಕರ ಲವ್ ರಹಸ್ಯ ಬಿಚ್ಚಿಟ್ಟ ಕಂಗನಾ; ಮಕ್ಕಳಿಗೆ ಸುಳ್ಳು ಹೇಳಿದ್ರಾ?

ದಕ್ಕೆ ಹಲವು ಟ್ವೀಟಿಗರು ವ್ಯಂಗ್ಯ ಮತ್ತು ಹಾಸ್ಯವಾಗಿ ಪ್ರತಿಕ್ರಿಯಿಸಿದ್ದರೆ, ಮತ್ತಷ್ಟುಜನ ಕಂಗನಾ ವಿರುದ್ಧ ಕಿಡಿಕಾರಿದ್ದಾರೆ. ‘9 ದಿನಗಳ ಹಬ್ಬದ ವೇಳೆ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಕ್ಕೆ ನಿಷೇಧವಿದೆ.

Scroll to load tweet…

9 ದಿನಗಳ ನವರಾತ್ರಿಯಂದು 9 ಶಕ್ತಿ ದೇವತೆಗಳಿಗೆ ಜನರು ದಿನವಿಡೀ ಉಪವಾಸವಿದ್ದು, ಪೂಜಾ ಪುನಸ್ಕಾರಗಳನ್ನು ಮಾಡುತ್ತಾರೆ’ ಎಂದು ಕಿರಿಕಾರಿದ್ದಾರೆ. ಈ ಸಲ ಚೈತ್ರ ನವರಾತ್ರಿ ಏ.13ರಂದು ಆರಂಭವಾಗಿದ್ದು ಏ.21ರ ರಾಮನವಮಿ ಆಚರಣೆಯೊಂದಿಗೆ ಮುಕ್ತಾಯವಾಗಲಿದೆ.