Asianet Suvarna News Asianet Suvarna News

ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಿ ದೇವಾಲಯ ಶುಚಿಗೊಳಿಸಿದ ನಟಿ ಕಂಗನಾ: ನೆಟ್ಟಿಗರು ಏನಂದ್ರು?

ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಿ ದೇವಾಲಯದ ಆವರಣವನ್ನು ತೊಳೆದು ನಟಿ ಕಂಗನಾ ರಣಾವತ್​ ಶುಚಿಗೊಳಿಸಿದ್ದಾರೆ. ಇದಕ್ಕೆ ನೆಟ್ಟಿಗರು ಏನಂದ್ರು?
 

Kangana Ranaut sweeps temple floor in saree and sunglasses during Ayodhya visit suc
Author
First Published Jan 21, 2024, 3:58 PM IST

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆಗೆ ಆರಂಭವಾಗಿದೆ. ಇದಾಗಲೇ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಅಯೋಧ್ಯೆ ತಲುಪಿದ್ದಾರೆ. ಬಾಲಿವುಡ್​ ನಟ-ನಟಿಯರ ದಂಡು ಕೂಡ ಇದಾಗಲೇ ಅಯೋಧ್ಯೆಯಲ್ಲಿ ಬೀಡುಬಿಟ್ಟಿದೆ. ನಟಿ ಕಂಗನಾ  ರಣಾವತ್ (Kangana Ranaut) ಕೂಡ ಇದಾಗಲೇ ಅಯೋಧ್ಯೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ಸಾಧ್ಯವಾಗುವುದು ತಮ್ಮ ಹಿಂದಿನ ಜೀವನದ ಕರ್ಮದ ಫಲ ಎಂದಿದ್ದಾರೆ.  ಈ ಮಹತ್ವದ ಐತಿಹಾಸಿಕ ಕ್ಷಣವನ್ನು ಇಡೀ ವಿಶ್ವ ಕಣ್ತುಂಬಿಸಿಕೊಳ್ಳುತ್ತಿದ್ದಾರೆ.  ಇಡೀ ರಾಷ್ಟ್ರಕ್ಕಿದು ಅದೃಷ್ಟದ ಕ್ಷಣ ಎಂದು ಕಂಗನಾ ಹೇಳಿದರು.  ಅಯೋಧ್ಯೆಯ ದರ್ಶನ ಪಡೆಯಲು ಹಲವು ಜನ್ಮಗಳ ಪುಣ್ಯ ಮಾಡಿರಬೇಕು ಎಂದ ನಟಿ,   ಈ ಕಾರ್ಯಕ್ರಮ ಮುಗಿಯೋವರೆಗೂ ಅಯೋಧ್ಯೆಯಲ್ಲಿರೋದಾಗಿ ತಿಳಿಸಿದ್ದಾರೆ.  

ಅಯೋಧ್ಯೆಯಲ್ಲಿ ಇದಾಗಲೇ ಧಾರ್ಮಿಕ ಕಾರ್ಯಗಳು ನಡೆದಿದ್ದು, ಇದೀಗ ನಡೆದ  ಹನುಮಾನ್ ಯಜ್ಞದಲ್ಲಿ ಭಾಗಿಯಾಗಿದ್ದಾರೆ. ಇದರ ಫೋಟೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿವೆ.  ಹಣೆಗೆ ಬಿಂದಿ ಇಟ್ಟು ಆಭರಣವನ್ನು ಧರಿಸಿ ಅಪ್ಪಟ ಭಾರತೀಯ ನಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪೂಜೆಯ ಬಳಿಕ ನಟಿ ದೇವಾಲಯದ ಆವರಣವನ್ನು ಶುಚಿಗೊಳಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. 

ಆಮೀರ್​ ಖಾನ್​ ಪುತ್ರಿ ಇರಾ ರಿಸೆಪ್ಷನ್​ನಲ್ಲಿ ಜೈ ಶ್ರೀರಾಮ್​ ಎಂದು ಜಪಿಸಿದ ಕಂಗನಾ: ವಿಡಿಯೋ ವೈರಲ್

ಈ ವಿಡಿಯೋಗೆ ಹಲವಾರು ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಹೇಳಿಕೇಳಿ ನಟಿ ಕಂಗನಾ ಕಾಂಟ್ರವರ್ಸಿ ಲೇಡಿ ಎಂದೇ ಫೇಮಸ್​  ಆದವರು. ಇದ್ದದ್ದನ್ನು ಇದ್ದ ಹಾಗೆ ಹೇಳುವ ಮೂಲಕ ಹಲವರ ಕೆಂಗಣ್ಣಿಗೂ ಗುರಿಯಾಗುವುದು ಇದೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳುವ ಮೂಲಕ ಒಂದು ವರ್ಗಕ್ಕೆ ಕಿಚ್ಚು ಕೂಡ ಹಚ್ಚುತ್ತಿರುತ್ತಾರೆ ನಟಿ. ಪ್ರಧಾನಿಯರ ವಿರುದ್ಧ ಯಾರೇ ಮಾತನಾಡಿದರೂ ಅವರ ವಿರುದ್ಧವೇ ನಟಿ ತಿರುಗಿ ಬೀಳುವುದು ಇದೆ.  ನರೇಂದ್ರ ಮೋದಿ ಮುಟ್ಟಿದ್ದೆಲ್ಲವೂ ಚಿನ್ನ, ಅವರು ಎಂದಿಗೂ ಸೋಲಿಲ್ಲದ ಸರದಾರ ಎಂದು ಈ ಹಿಂದೆ  ಕಂಗನಾ ಹೇಳಿದ್ದರು.  ಮೋದಿಯವರ ಆಡಳಿತದಲ್ಲಿ  ಗುಜರಾತ್ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದೆ. ಅವರು ಪ್ರಧಾನಿಯಾದ ಮೇಲೆ  ಭಾರತದ ಆರ್ಥಿಕತೆಯು  4 ಟ್ರಿಲಿಯನ್‌ಗೆ ತಲುಪಿದೆ. ಹಲವು ದಶಕಗಳ ಕಾಲ ಆಡಳಿತ ನಡೆಸಿದ್ದರೂ ಭಾರತದ ಆರ್ಥಿಕತೆ 10ನೇ ಸ್ಥಾನದಲ್ಲಿತ್ತು. ಮೋದಿಯವರು ಪ್ರಧಾನಿಯಾದ  ಕೆಲವೇ ವರ್ಷಗಳಿಂದ ಐದನೇ ಸ್ಥಾನಕ್ಕೆ ತಲುಪಿದೆ ಎಂದೆಲ್ಲಾ ಕೊಂಡಾಡಿದ್ದಾರೆ.
 
ಇದೇ  ಕಾರಣಕ್ಕೆ ನಟಿಯನ್ನು ಕಾಲೆಳೆಯಲು ಕಾಯುತ್ತಿರುವ ಒಂದು ವರ್ಗವಿದೆ. ಇದೀಗ ಕೂಲಿಂಗ್​ ಗ್ಲಾಸ್​ ಹಾಕಿಕೊಂಡು, ಭರ್ಜರಿ ಆಭರಣವನ್ನೂ ತೊಟ್ಟು ದೇವಾಲಯದ ಶುಚಿ ಕಾರ್ಯ ಮಾಡುತ್ತಿರುವುದಕ್ಕೆ ಕೆಲವರು ನಟಿಯ ಕಾಲೆಳೆದಿದ್ದಾರೆ. ಇವೆಲ್ಲಾ ಪಬ್ಲಿಸಿಟಿ ಸ್ಟಂಟ್​ ಎಂದಿದ್ದಾರೆ. ಕೊನೆಯ ಪಕ್ಷ ಕೂಲಿಂಗ್​ ಗ್ಲಾಸ್​ ಆದರೂ ತೆಗೆದು ಇಡಬಹುದಿತ್ತು ಎಂದಿದ್ದಾರೆ. ಆದರೆ ಹಲವರು ನಟಿಯ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಶ್ರೀರಾಮನ ಮೇಲಿನ ಭಕ್ತಿ ಎದ್ದು ಕಾಣುತ್ತಿದೆ ಎನ್ನುತ್ತಿದ್ದಾರೆ. ಯಾರು ಏನೇ ಟೀಕೆ ಮಾಡಿದರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಬೇಡಿ, ಶ್ರೀರಾಮನ ಮೇಲೆ ಭಕ್ತಿ ಇದ್ದರೆ ಸಾಕು ಎಂದೆಲ್ಲಾ ನಟಿಗೆ ಫ್ಯಾನ್ಸ್ ಹೇಳುತ್ತಿದ್ದಾರೆ. ಅಯೋಧ್ಯೆಗೆ ಬರುವಾಗ ಬಂದ ಡ್ರೆಸ್​ನಲ್ಲಿಯೇ ಶುಚಿ ಕಾರ್ಯದಲ್ಲಿ ನಟಿ ತೊಡಗಿದ್ದಾರೆ, ಅದರಲ್ಲಿ ಕುಹಕವಾಡುವುದು ಏನಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯವರು ಖುದ್ದು ದೇವಾಲಯದ ಆವರಣವನ್ನು ಶುಚಿಗೊಳಿಸಿದ ಬಳಿಕ, ಎಲ್ಲರೂ ಈ ಸತ್ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ ಬೆನ್ನಲ್ಲೇ  ಹಲವಾರು ನಟ-ನಟಿಯರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು, ಜನರು ದೇಗುಲಗಳ ಶುಚಿ ಕಾರ್ಯದಲ್ಲಿ ತೊಡಗಿದ್ದಾರೆ. 

ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ದೇಗುಲದ ಆವರಣವನ್ನು ತಿಕ್ಕಿತಿಕ್ಕಿ ತೊಳೆದ ನಟ ಜಾಕಿ ಶ್ರಾಫ್​

 

 

Follow Us:
Download App:
  • android
  • ios