ಬಾಲಿವುಡ್ ನಟಿ ಕಂಗನಾ ರಣಾವತ್ ಊರೆಲ್ಲಾ ಉಪದೇಶ ಮಾಡಿ ತಾವು ಮಾತ್ರ ಬೇರೆಯೇ ಮಾಡ್ತಾರೆ. ಇದೀಗ ನಟಿ ಮತ್ತೊಮ್ಮೆ ಬಿಟ್ಟಿ ಉಪದೇಶ ಮಾಡೋಕೋಗಿ ಟ್ರೋಲ್ ಆಗಿದ್ದಾರೆ.

ನಟ ಕಂಗನಾ ರಣಾವತ್ ಬುಧವಾರ ಪ್ರಾಚೀನ ಮಹಿಳೆಯರಿಗಾಗಿ ಮೆಚ್ಚುಗೆಯ ಟ್ವೀಟ್ ಮಾಡಿ ಈಗಿನ ಕಾಲದ ಸಾಧಕರು ತಮ್ಮದೇ ಸಂಸ್ಕೃತಿಗಳನ್ನು ಎತ್ತಿಹಿಡಿಯುವ ಬದಲು ಅಮೇರಿಕನ್ ಟೋರ್ನ್ಡ್ ಜೀನ್ಸ್ ಧರಿಸಿರುವುದಕ್ಕೆ ನಾಚಿಕೆಯಾಗಬೇಕು ಎಂದಿದ್ದಾರೆ.

ಬಾಲಿವುಡ್‌ ಕ್ವೀನ್ ವಿಚಾರಣೆ ಎದುರಿಸಲೇಬೇಕಾ..? ತಡೆ ನೀಡಲು ಹೈಕೋರ್ಟ್ ನಕಾರ

ಆಯಾ ದೇಶಗಳ ಮೊದಲ ಮಹಿಳಾ ವೈದ್ಯರು ಎಂಬ ಮೂರು ಮಹಿಳೆಯರ ಚಿತ್ರವನ್ನು ಶೇರ್ ಮಾಡಿದ ಕಂಗನಾ, "ನಮ್ಮ ಪ್ರತ್ಯೇಕತೆಯನ್ನು ಮಾತ್ರವಲ್ಲದೆ ಇಡೀ ನಾಗರಿಕತೆ, ಸಂಸ್ಕೃತಿಗಳು ಮತ್ತು ರಾಷ್ಟ್ರಗಳನ್ನು ಪ್ರತಿನಿಧಿಸುವ ಪ್ರಾಚೀನ ಮಹಿಳೆಯರಿಗೆ ಮೆಚ್ಚುಗೆಯ ಟ್ವೀಟ್.

ಇಂದು ಅಂತಹ ಸಾಧಕರು ಹರಿದ ಅಮೇರಿಕನ್ ಜೀನ್ಸ್ ಎನ್ ರಾಗ್‌ಗಳನ್ನು ಬ್ಲೌಸ್‌ನಂತೆ ಧರಿಸುತ್ತಾರೆ. ಇದು ಅಮೆರಿಕನ್ ಮಾರ್ಕೆಟಿಂಗ್ ಬಿಟ್ಟು ಬೇರೇನನ್ನೂ ಪ್ರತಿನಿಧಿಸುವುದಿಲ್ಲ ಎಂದಿದ್ದಾರೆ.

ಪೋಷಕರ ಮನೆ ಅಲಂಕರಿಸಿ, ಪೋಟೋ ಶೇರ್ ಮಾಡಿದ ಕಂಗನಾ ರಣಾವತ್‌!

ಆದ್ರೆ ಕಂಗನಾ ದುರಾದೃಷ್ಟವೋ ಏನೋ, ಕೆಲವೇ ಕ್ಷಣಗಳಲ್ಲಿ ನೆಟ್ಟಿಗರು ಕಂಗನಾ ಅದೇ ರೀತಿ ಬಟ್ಟೆ ಧರಿಸಿರೋ ಬಹಳ್ಟು ಫೋಟೋಗಳನ್ನು ಹರಿಯಬಿಟ್ಟು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.