ಕಂಗನಾ ರಣಾವತ್ ತನ್ನ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅಭಿಮಾನಿಗಳಿಗೆ ತನ್ನ ವಾರ್ಡ್ರೋಬ್ ಮತ್ತು ಶೂ ಸಂಗ್ರಹದ ಲುಕ್ ಶೇರ್ ಮಾಡಿದ್ದಾರೆ. ಅವಳು ಮನೆಗೆ ಹಿಂದಿರುಗಿದಾಗಿನಿಂದಲೂ ಸ್ವಚ್ಛ ಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ತನ್ನನ್ನು ತಾನು ನನ್ನ ಸ್ವಂತ ಆಸ್ತಿಯ ಗುಲಾಮ ಎಂದು ಕರೆದುಕೊಂಡಿದ್ದಾರೆ.

ನಾನು ಮನೆಗೆ ಬಂದಾಗಿನಿಂದಲೂ ಕ್ಲೀನಿಂಗ್ ಮಾಡುತ್ತಿದ್ದೇನೆ. ಇಷ್ಟೊಂದು ದಿನ ಕ್ಲೀನಿಂಗ್ ಮಾಡಿ ನನ್ನ ವಸ್ತುಗಳಿಗೆ ನಾನೇ ಗುಲಾಮಳೆಂದು ಅನಿಸುತ್ತಿದೆ. 2021ಕ್ಕಾಗುವದಾಗ ಕ್ಲೀನ್ ಮುಗಿಸು ಕ್ವೀನ್ ತರ ಹೊಸ ವರ್ಷಕ್ಕೆ ಹೆಜ್ಜೆ ಹಾಕುತ್ತೇನೆ ಎಂದಿದ್ದಾರೆ.

'ತಂಗೀ ತಲೆ ಕೆಟ್ಟಿದ್ಯಾ..'? : ಕಂಗನಾಗೆ ನಟಿ ಊರ್ಮಿಳಾ ಟಾಂಗ್

ಈ ವಾರದ ಆರಂಭದಲ್ಲಿ ಮುಂಬೈಗೆ ಆಗಮಿಸಿದ ಕಂಗನಾ ಮುಂಬೈನ ತನ್ನ ಮನೆಯಲ್ಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಂಬೈ ಪೊಲೀಸರನ್ನು ಟೀಕಿಸಿದ ಮತ್ತು ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದಾಗಿನಿಂದ ನಟಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡಿದ್ದಾರೆ.