ಮುಂಬೈ (ಮಾ. 05): ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಕಂಗನಾ ರಾಣಾವತ್ ಮಣಿಕರ್ಣಿಕಾ ಯಶಸ್ಸಿನ ಖುಷಿಯಲ್ಲಿದ್ದಾರೆ. 

ಕತ್ರಿನಾ 56 ಕೆಜಿಗೆ ಹೀಗೆ ಮಾಡ್ತಾರೆ!

ಕಂಗನಾ ಇತ್ತೀಚಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ’ನಾನು ಸಿಂಗಲ್ ಅಲ್ಲ. ನಾನೀಗ ಡೇಟಿಂಗ್‌ನಲ್ಲಿದ್ದೇನೆ’ ಎಂದಿದ್ದಾರೆ. 

‘ಎಲ್ಲರ ಜೀವನದಲ್ಲೂ ಇರುವಂತೆ ನನ್ನ ಜೀವನದಲ್ಲೂ ಒಬ್ಬರಿದ್ದಾರೆ. ನಾನವರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ. ನಾನು ಮಾಡುತ್ತಿರುವುದು ಸರಿ ಎನಿಸುತ್ತಿದೆ. ನನಗೂ ರೊಮ್ಯಾಂಟಿಕ್ ಆಗಿ ಇರಲು ಬರುತ್ತದೆ. ಜೀವನದಲ್ಲಿ ಸ್ಫೂರ್ತಿ ನೀಡಲು ನನಗೂ ಒಬ್ಬ ಕಂಪ್ಯಾನಿಯನ್ ಬೇಕು ಎನಿಸಲು ಶುರುವಾಗಿದೆ. ಪ್ರತಿದಿನ ಡೇಟಿಂಗ್ ಮಾಡಬೇಕು ಎಂದು ನನಗನಿಸುವುದಿಲ್ಲ. ಅಷ್ಟರ ಮಟ್ಟಿಗೆ ಪ್ರಬುದ್ಧಳಾಗಿದ್ದೇನೆ’ ಎಂದಿದ್ದಾರೆ. 

ದರ್ಶನ್ ’ಕುರುಕ್ಷೇತ್ರ’ ರಿಲೀಸ್‌ಗೆ ಅಡ್ಡಿಯಾದ್ರಾ ನಿಖಿಲ್ ಕುಮಾರಸ್ವಾಮಿ?

ಪ್ರೀತಿಯಿಲ್ಲದ ಜೀವನವನ್ನು ನನ್ನಂದ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೊದಲ ಪ್ರೀತಿಯಿಂದ ಕೆಟ್ಟ ಅನುಭವವಾಗಿದೆ. ಇದರಿಂದ ನಾನು ಬೇಗ ಹೊರಬಂದೆ ಎಂದಿದ್ದಾರೆ ಮಣಿಕರ್ಣಿಕಾ ಜಾನ್ಸಿ.  

ಲವ್, ಡೇಟಿಂಗ್ ಬಗ್ಗೆ ಇಷ್ಟೆಲ್ಲಾ ಮಾತನಾಡಿದರೂ ತಾವು ಇಷ್ಟಪಡುತ್ತಿರುವ, ಡೇಟಿಂಗ್ ನಡೆಸುತ್ತಿರುವ ವ್ಯಕ್ತಿ ಯಾರೆಂದು ಬಾಯಿಬಿಟ್ಟಿಲ್ಲ.