ನೀರಿಂದ್ಲೇ ಎಲ್ಲಾ ಅನ್ನೋ ನೀರೆ

‘ನೀರು ಕುಡಿಯೋದಕ್ಕೆ ಇಂತಿಷ್ಟು ಅಂತ ಲೆಕ್ಕ ಇಟ್ಟಿಲ್ಲ. ಆದರೆ ಇಡೀ ದಿನ ಕುಡಿಯೋ ನೀರನ್ನು ಲೆಕ್ಕ ಇಟ್ಟರೆ ಐದು ಲೀಟರ್ ಮೇಲಾಗುತ್ತೆ’ ಅಂತಾರೆ ಕತ್ರಿನಾ. ‘ಅಷ್ಟು ಚೆಂದದ ಸಾಫ್ಟ್ ಸ್ಕಿನ್ ಹೇಗೆ ಬಂತು?’ ಎಂದು ಕೇಳಿದ್ದಕ್ಕೆ ಆಕೆ ಕೊಟ್ಟ ಉತ್ತರ ನೀರು ಕುಡಿಯೋದು. ಎಷ್ಟು ಅಂತ ಕೇಳಿದರೆ ಲೆಕ್ಕ ಇಟ್ರೆ ತಾನೇ ಅಂದ್ಬಿಟ್ಳು ಮುಗ್ಧೆ. ಹಸಿರೆಲೆ ತರಕಾರಿಯೇ ಈಕೆಯ ಆರೋಗ್ಯದ ರಹಸ್ಯವಂತೆ. ಪ್ರೊಟೀನ್, ಕಾರ್ಬೊ ಹೈಡ್ರೇಟ್, ನಾರಿನಂಶ ಇರುವ ಪದಾರ್ಥ, ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಲೆಕ್ಕ ಹಾಕಿ ಸಮತೋಲನದಲ್ಲಿ ಸೇವಿಸ್ತಾರೆ. 

ನೋವಲ್ಲೂ ನಗುವ ಚೆಲುವೆ

‘ಹೌದು ಬೆರಳು ಮುರಿದಿದೆ. ಹಾಗಂತ ಸುಮ್ನೆ ಕೂರಲಿಕ್ಕಾಗುತ್ತಾ, ಎಕ್ಸರ್‌ಸೈಸ್ ಮಾಡ್ಬೇಕು ಅಂದ್ರೆ ಮಾಡ್ಬೇಕು ಅಷ್ಟೇ’ ಅನ್ನುತ್ತಾ ನಗುತ್ತಾಳೆ ಕತ್ರಿನಾ. ಸಲ್ಮಾನ್ ಖಾನ್ ಜೊತೆಗಿನ ‘ಭಾರತ್’ ಸಿನಿಮಾ ಶೂಟಿಂಗ್ ವೇಳೆ ಆದ ಗಾಯ. ಇನ್ನೂ ಕಡಿಮೆ ಆಗಿಲ್ಲ. ಹಾಗಂತ ಈ ಚೆಲುವೆ ಯಾಸ್ಮಿನ್ ಕರಾಚಿವಾಲಾ ಅವರ ಪಿಲಾಟೆಸ್ ಕ್ಲಾಸ್‌ಗೆ ಚಕ್ಕರ್ ಹೊಡ್ದಿಲ್ಲ. ಬಟ್ಟೆಕಟ್ಟಿ ಅದರಿಂದ ಏನೇನೋ ಎಕ್ಸರ್ ಸೈಸ್ ಮಾಡೋ ವೀಡಿಯೋವನ್ನೂ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾಳೆ. ಈಕೆ ಮಾಡ್ತಿರೋದು ಏರಿಯಲ್ ಪಿಲಾಟೆಸ್. ಬಟ್ಟೆಯ ಸಹಾಯದಿಂದ ಮಾಡುವ ಈ ಎಕ್ಸರ್‌ಸೈಸ್ ಫಿಟ್‌ನೆಸ್‌ಗೆ ಬಹಳ ಒಳ್ಳೆಯದು. ಎಲ್ಲಾ ಭಾಗಗಳಿಗೂ ಇದರಲ್ಲಿ ಎಕ್ಸರ್‌ಸೈಸ್ ಇದೆ.

ಎತ್ತರ: 5’6
ತೂಕ: 56ಕೆಜಿ
ಸುತ್ತಳತೆ: 34-26-34