Asianet Suvarna News Asianet Suvarna News

ರಾಹುಲ್​, ಪ್ರಿಯಾಂಕಾರನ್ನು ಒಂದೇ ಶಬ್ದದಲ್ಲಿ ಬಣ್ಣಿಸಿ ಎಂದಾಗ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ಹೇಳಿದ್ದೇನು?

ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಒಂದೇ ಶಬ್ದದಲ್ಲಿ ಬಣ್ಣಿಸಿ ಎಂದಾಗ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ಹೇಳಿದ್ದೇನು?
 

Kangana Ranaut Is Back With The Term Nepo Babies For Rahul And Priyanka Gandhi suc
Author
First Published Mar 29, 2024, 1:39 PM IST

ನಟಿ ಕಂಗನಾ ರಣಾವತ್​ಗೆ ಬಿಜೆಪಿ  ಹಿಮಾಚಲ ಪ್ರದೇಶದ (Himachal Pradesh) ಮಂಡಿ ಕ್ಷೇತ್ರದಿಂದ ಟಿಕೆಟ್​ ನೀಡಿದೆ.  ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ನಡಿ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು, ಮಂಡಿ ಪ್ರವಾಸ ಕೈಗೊಂಡಿದ್ದಾರೆ.  ಮಂಡಿ ಕ್ಷೇತ್ರದ ಮುಖಂಡರ ಜೊತೆ ಭೇಟಿ, ಸಭೆ ನಡೆಸುತ್ತಿದ್ದಾರೆ. ಕಂಗನಾ ಅವರ ರಾಜಕೀಯ ಕಾರ್ಯ ಬಲು ಚುರುಕಿನಿಂದ ಸಾಗಿದೆ. ಅಷ್ಟಕ್ಕೂ ಕಂಗನಾ ಅವರಿಗೆ ನೆಪೋಟಿಸಂ  ಎಂದರೆ ಮೊದಲಿನಿಂದಲೂ ಸಿಕ್ಕಾಪಟ್ಟೆ ಸಿಟ್ಟು. ಅಪ್ಪ-ಅಮ್ಮ ಸಿನಿಮಾದಲ್ಲಿ ಗುರುತಿಸಿಕೊಂಡ ಮಾತ್ರಕ್ಕೆ, ಅಂಥವರ ಮಕ್ಕಳಿಗೇ ಸಿನಿಮಾದಲ್ಲಿ ಛಾನ್ಸ್​ ಸಿಗುವ, ಅವರಿಗೆ ನಟನೆಯಲ್ಲಿ ಅರ್ಹತೆ ಇಲ್ಲದಿದ್ದರೂ ದೊಡ್ಡ ದೊಡ್ಡ ಚಿತ್ರಗಳು, ಪಾತ್ರಗಳು ಸಿಗುವ ನೆಪೋಟಿಸಂ ಪ್ರವೃತ್ತಿ ಬಗ್ಗೆ ಕಂಗನಾ ಸದಾ ಕಿಡಿ ಕಾರುತ್ತಲೇ ಬಂದವರು. ಇದೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಕಾರಣ, ರಾಜಕೀಯದಲ್ಲಿನ ಸ್ವಜನ ಪಕ್ಷಪಾತ (ನೆಪೋಟಿಸಂ) ಬಗ್ಗೆ ಕಿಡಿ ಕಾರುತ್ತಿದ್ದಾರೆ. 

ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಕಾರಣ, ಸಹಜವಾಗಿ ಕಂಗನಾ ಕಾಂಗ್ರೆಸ್​ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಟೈಮ್ಸ್​ ನೌಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರ ಮಕ್ಕಳಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಒಂದೇ ಪದದಲ್ಲಿ ವಿವರಿಸಿ ಎಂದು ಕೇಳಿದ್ದಕ್ಕೆ, ಕಂಗನಾ ‘ನೆಪೋಟಿಸಂ ಮಕ್ಕಳು’ ಎಂದು ಹೇಳಿದ್ದಾರೆ. ರಾಹುಲ್​ ಗಾಂಧಿಯನ್ನು ನೆಪೋಟಿಸಂ ಮಗು ಎಂದಿದ್ದಾರೆ. 

ಕಂಗನಾ ಹಾದಿ ತುಳಿಯಲಿದ್ದಾರಾ ಸೈಫ್​ ಅಲಿ ಪುತ್ರಿ? ರಾಜಕೀಯ ಎಂಟ್ರಿಗೆ ಸುಳಿವು ನೀಡಿದ ನಟಿ ಹೇಳಿದ್ದೇನು?

 ‘ನನ್ನ ಪಾಲಿಗೆ ಕಾಂಗ್ರೆಸ್​ ಯಾವಾಗಲೂ ಕೆಟ್ಟ ಪಕ್ಷವೇ ಆಗಿದೆ. ಅದರಲ್ಲಿಯೂ ಹೆಚ್ಚಾಗಿ ಇಲ್ಲಿಯ ನೆಪೋಟಿಸಂ ವಿರುದ್ಧ ನಾನು ಸದಾ ಕೆಂಡಾಮಂಡಲ ಆಗಿದ್ದೇನೆ. ಚಿತ್ರರಂಗದಲ್ಲಿನ ನೆಪೋಟಿಸಂ ಬಗ್ಗೆ ನಾನು ಸದಾ ಟೀಕಿಸುತ್ತಲೇ ಬಂದಿರುವ ಕಾರಣ,  ನಾನು ಟಾರ್ಗೆಟ್​ ಆಗಿದ್ದೆ. ಆದರೆ ಟಾರ್ಗೆಟ್​ ಆಗಿರುವ ಬಗ್ಗೆ ನನಗೇನೂ ಹೆದರಿಕೆ ಇಲ್ಲ. ನಾನು ನೇರಾನೇರ ಮಾತನಾಡುವವಳು. ಇದೀಗ ಕಾಂಗ್ರೆಸ್​ ಕೂಡ ನೆಪೋಟಿಸಂ, ಗುಂಪುಗಾರಿಕೆ, ವಂಶ ಪಾರಂಪರ್ಯ ರಾಜಕೀಯದಿಂದ ಕೂಡಿದೆ. ಈ ಕಾರಣದಿಂದಲೇ ನಾನು ಕಾಂಗ್ರೆಸ್​ ಪಕ್ಷವನ್ನು ಇಷ್ಟಪಡುವುದಿಲ್ಲ. ಅದೇ ರೀತಿ,  ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ  ‘ನೆಪೋಟಿಸಂ ಮಕ್ಕಳು’. ಅವರು ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರವಾಗಿದ್ದಾರೆ ಎಂದು ಅವರು ಟೀಕೆ ಮಾಡಿದ್ದಾರೆ.  
  
ಇದರ ನಡುವೆಯೇ, ಕಂಗನಾ ಅವರು,  ಹಿಮಾಚಲ ಪ್ರದೇಶದಿಂದ ಸ್ಪರ್ಧಿಸುವುದಿಲ್ಲ ಎನ್ನುವ ಹಳೆಯ ವಿಡಿಯೋ ಕೂಡ ಸಕತ್​ ಸೌಂಡ್​ ಮಾಡುತ್ತಿದೆ. ನಾನು ತುಂಬಾ ಕ್ಲಿಷ್ಟಕರ ಎನಿಸಿರುವ ರಾಜ್ಯದಿಂದ ಮಾತ್ರ  ಚುನಾವಣೆಗೆ ಸ್ಪರ್ಧಿಸಲು ಬಯಸುವುದಾಗಿ ಇದರಲ್ಲಿ ನಟಿ ಹೇಳಿದ್ದಾರೆ. 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನನಗೆ ಗ್ವಾಲಿಯರ್ ಆಯ್ಕೆಯನ್ನು ನೀಡಲಾಗಿತ್ತು.  ಹಿಮಾಚಲ ಪ್ರದೇಶದ ಜನಸಂಖ್ಯೆ ಕೇವಲ 60ರಿಂದ 70 ಲಕ್ಷದಷ್ಟು ಮಾತ್ರ. ಇಲ್ಲಿ ಬಡತನ-ಅಪರಾಧ ಯಾವುದೂ ಇಲ್ಲ. ನಾನು ರಾಜಕೀಯಕ್ಕೆ ಬಂದರೆ, ಸಂಕೀರ್ಣತೆಗಳನ್ನು ಹೊಂದಿರುವ ರಾಜ್ಯವನ್ನು ನಾನು ಬಯಸುತ್ತೇನೆ.  ನಾನು  ಆ ಕ್ಷೇತ್ರದಲ್ಲೂ ರಾಣಿಯಾಗುತ್ತೇನೆ. ನಿಮ್ಮಂಥ ಚಿಕ್ಕವರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದಿದ್ದರು. ಇದೀಗ ಹಿಮಾಚಲದಿಂದಲೇ ಸ್ಪರ್ಧಿಸುತ್ತಿರುವುದರಿಂದ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ.

'ದರ್ಶನ್'​ ನಟಿ ನವನೀತ್​ ಕೌರ್​ಗೆ ಬಿಜೆಪಿಯಿಂದ ಟಿಕೆಟ್​: ಹನುಮಾನ್​ ಚಾಲೀಸಾದಿಂದ ಸುದ್ದಿಯಾಗಿದ್ದ ಸಂಸದೆ

Follow Us:
Download App:
  • android
  • ios