ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಮುಂಬೈನ ಬಂಗಲೆ ಕೆಡವಿದ ಘಟನೆಗೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ನಟಿಯ ಕಚೇರಿಯನ್ನೂ ಒಳಗೊಂದಿರುವ ಬಂಗಲೆಯಲ್ಲಿ ಬಿಎಂಸಿ ತೆರವು ಕಾರ್ಯಾಚರಣೆ ನಡೆಸಿತ್ತು.

ಕಂಗನಾ ರಣಾವತ್ ಅವರ ಬಂಗಲೆಯ ಮುಂಭಾಗ ಕೆಡವಿ ತೆರವುಗೊಳಿಸಿರುವುದು ಕಾನೂನು ದುರ್ಬಳಕೆ, ದುರುದ್ದೇಶಕ್ಕೆ ಕಾನೂನೂ ಬಳಸಿಕೊಳ್ಳಲಾಗಿದೆ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.

ನಟಿ ಕಂಗನಾಳ ಮುಂಬೈ ಆಫೀಸ್ ಮೇಲೆ ಬುಲ್ಡೋಝರ್ ಹತ್ತಿಸಿದ ಮಹಾರಾಷ್ಟ್ರ ಸರ್ಕಾರ

ತೆರವು ಕಾರ್ಯಚರಣೆಯನ್ನು ವಿರೋಧಿಸಿ ಸೆಪ್ಟೆಂಬರ್‌ನಲ್ಲಿ ನಟಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ರೀತಿ ಹೇಳಿದೆ. ಈ ತೆರವು ಕಾರ್ಯಾಚರಣೆಯಿಂದಾಗಿ ನಟಿಗಾದ ನಷ್ಟಕ್ಕೆ ನಷ್ಟ ಪರಿಹಾರ ನೀಡುವಂತೆಯೂ ಕೋರ್ಟ್ ಆದೇಶಿಸಿದೆ. ಈ ಮೂಲಕ ಗೆಲುವು ಬಾಲಿವುಡ್ ಕ್ವೀನ್‌ನದ್ದಾಗಿದೆ.

ಮುಂಬೈನ ಪಾಲಿ ಹಿಲ್‌ನಲ್ಲಿರುವ ಕಂಗನಾ ಅವರ ಬಂಗಲೆಯನ್ನು ಬಿಎಂಸಿ ಸೆಪ್ಟೆಂಬರ್ 9ರಂದು ಕೆಡವಿತ್ತು. ಮಹಾರಾಷ್ಟ್ರ ಸರ್ಕಾರ ಹಾಗೂ ಆಡಳಿತದಲ್ಲಿರುವ ಶಿವಸೇನೆ ಬಗ್ಗೆ ಮಾತನಾಡಿದ್ದಕ್ಕೆ ಈ ರೀತಿ ಮಾಡಲಾಗಿದೆ ಎಂದು ನಟಿ ಆರೋಪಿಸಿದ್ದರು.

BMCಯಿಂದ ಬಂಗಲೆ ಹಾನಿ: 2 ಕೋಟಿ ಪರಿಹಾರ ಕೇಳಿದ ಕ್ವೀನ್ ಕಂಗನಾ..!

ಎಂಸಿಜಿಎಂ (ಗ್ರೇಟರ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್) ನಾಗರಿಕರ ಹಕ್ಕುಗಳ ವಿರುದ್ಧ ತಪ್ಪಾಗಿ ನಡೆದಿದೆ. ಇದು ಕಾನೂನನ್ನು ದುರುದ್ದೇಶಕ್ಕಾಗಿ ಬಳಸಿದ್ದಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಜೆ. ಕಥವಾಲ್ಲಾ ಮತ್ತು ಆರ್.ಐ.ಚಾಗ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ. ಯಾವುದೇ ನಾಗರಿಕರ ವಿರುದ್ಧ ಆಡಳಿತ ಸಂಸ್ಥೆಗಳು ತೋಳ್ಬಲ ತೋರಿಸುವುದನ್ನು ಅನುಮೋದಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.