ತನ್ನ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ ಗೆದ್ದ ನಂತರ ತಲೈವಿ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ನಂತರ, ಕಂಗನಾ ರಣಾವತ್ ತನ್ನ ಮುಂದಿನ ಪ್ರಾಜೆಕ್ಟ್‌ಗೆ ರಾಜಸ್ಥಾನ ತಲುಪಿದ್ದಾರೆ.

ನಟಿ ಈ ವಾರಾಂತ್ಯದಲ್ಲಿ ರಾಜಸ್ಥಾನದಲ್ಲಿ ತೇಜಸ್ ಚಿತ್ರೀಕರಣವನ್ನು ಪುನರಾರಂಭಿಸಿದ್ದಾರೆ. ಆಕ್ಷನ್ ಸಿನಿಮಾದಲ್ಲಿ ಕಂಗನಾ ಭಾರತೀಯ ವಾಯುಪಡೆಯ ಪೈಲಟ್ ಪಾತ್ರವನ್ನು ಮಾಡುತ್ತಿದ್ದಾರೆ.

ಶಾ ಪಠ್ಯದಲ್ಲಿ ಬಾಲಿವುಡ್‌ನ ಮುನ್ನಿ ಬದನಾಮ್ ಐಟಂ ಸಾಂಗ್..!

ಹಿಂದೆಂದೂ ನೋಡಿರದ ಅವತಾರದಲ್ಲಿ ನಟಿ ಕಾಣಿಸಲಿದ್ದಾರೆ. ಕಂಗನಾ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ತಂಡ ಮರುಭೂಮಿಯಲ್ಲಿ ಚಿತ್ರೀಕರಣ ಪ್ರಾರಂಭಿಸಿದೆ. ಭಾರತದಾದ್ಯಂತ ವಿವಿಧ ಭಾಗಗಳಲ್ಲಿ ತಾಪಮಾನ ಹೆಚ್ಚುತ್ತಿರುವುದನ್ನು ಗಮನಿಸಿದರೆ, ರಾಜಸ್ಥಾನದ ಮರುಭೂಮಿಗಳಲ್ಲಿ ಚಿತ್ರೀಕರಣವು ಸವಾಲಿನ ಕೆಲಸ. ಆದರೆ ತೇಜಸ್ ತಂಡವು ಅದನ್ನೆಲ್ಲ ಎದುರಿಸಿ ಶೂಟಿಂಗ್ ಮುಂದುವರೆಸಿದೆ. ನಟಿ ಟ್ವಿಟರ್‌ನಲ್ಲಿ  ಮರುಭೂಮಿಯಲ್ಲಿ ಕೆಲಸ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಅವರು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ, "ಸುಮಾರು 50 ಡಿಗ್ರಿಗಳಲ್ಲಿ ಆಕ್ಷನ್ ಮಾಡಬೇಕಾದರೆ ಸಾಧ್ಯವಿಲ್ಲ ಎನಿಸುತ್ತದೆ. ಆದರೆ ನಂತರ ಈ ದೇಹವನ್ನು ಬೆಂಕಿಯಲ್ಲಿ ಸುಡಲಾಗುತ್ತದೆ. ಹಾಗಿರುವಾಗ ಶೂಟ್ ಮಾಡಬಹುದುಲ್ಲಾ.. ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.