Asianet Suvarna News Asianet Suvarna News

Kangana, Urfi Tweet War: ಉಫ್​... ಉರ್ಫಿಗೂ, ಅಕ್ಕಮಹಾದೇವಿಗೂ ಏನಪ್ಪಾ ಸಂಬಂಧ?

ಪಠಾಣ್​ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟಿ ಕಂಗನಾ ರಣಾವತ್​ ಟ್ವೀಟ್​ ಮಾಡಿದ್ದು, ಇದಕ್ಕೆ ಉರ್ಫಿ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ನಡುವೆ ನಡೆದಿರುವ ಸುದೀರ್ಘ ಟ್ವೀಟ್​ ಸಮರವೇನು?
 

Kangana Ranaut and Urfi Javed aka uorfi javed twitter war
Author
First Published Feb 1, 2023, 5:30 PM IST

ಒಂದೆಡೆ ನಟಿ ಕಂಗನಾ ರಣಾವತ್​ (Kangana Ranaut) ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿದ್ರೆ, ಇನ್ನೊಂದೆಡೆ ನಟಿ ಉರ್ಫಿ ಜಾವೇದ್​ (Urfi Javed) ಟ್ರೋಲ್​ ಕ್ವೀನ್​ ಎಂದು ಎನಿಸಿಕೊಂಡಿದ್ದಾರೆ. ಟ್ವೀಟ್​ ಮೂಲಕ ಒಂದೆಡೆ ಕಂಗನಾ ಎಲ್ಲರ ಬೆವರಿಳಿಸುತ್ತಿದ್ದರೆ, ಉರ್ಫಿಯಂತೂ ಹೇಳೋದೇ ಬೇಡ...ಅತ್ಯಂತ ಕನಿಷ್ಠ ಉಡುಗೆ ತೊಟ್ಟು, ಕೆಲವೊಮ್ಮೆ ಉಡುಗೆಯೇ ಇಲ್ಲದೇ ಪಡ್ಡೆ ಹುಡುಗರು ಜೊಲ್ಲು ಸುರಿಸುವಂತೆ ಮಾಡುತ್ತಾರೆ. ಒಟ್ಟಿನಲ್ಲಿ ಈ ಇಬ್ಬರು ನಟಿಯರು ಸಾಮಾಜಿಕ ಜಾಲತಾಣದ ಹಾಟ್​ ಟಾಪಿಕ್​ ಆಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಇದೇ ಕಾರಣಕ್ಕೆ ಕಂಗನಾ ಅವರ ಟ್ವಿಟರ್​ ಖಾತೆ ಅಮಾನತುಗೊಂಡಿತ್ತು. ಕಳೆದ ವಾರ ಪುನಃ ಅದು ಚಾಲ್ತಿಯಲ್ಲಿ ಬಂದಿದ್ದು, ಕಂಗನಾ ಒಂದೇ ಸಮನೆ ಪಠಾಣ್​ ವಿರುದ್ಧ ಟ್ವೀಟ್​ ವಾರ್​ ಶುರು ಮಾಡಿಕೊಂಡಿದ್ದಾರೆ. ಈ ಟ್ವೀಟ್​ ವಾರ್​ಗೆ ನಟಿ ಉರ್ಫಿ ಜಾವೇದ್​ ಎಂಟ್ರಿ ಕೊಟ್ಟಿದ್ದು, ಇಬ್ಬರ ನಡುವಿನ ಮಾತುಕತೆಯನ್ನು ನೋಡಿ ನೆಟ್ಟಿಗರು ಉಫ್​ ಎನ್ನುತ್ತಿದ್ದಾರೆ.

ಹಾಗಾದರೆ ಈ ಟ್ವೀಟ್​ ವಾರ್​ ಶುರುವಾಗಿದ್ದು ಹೇಗೆ ಎಂದು ನೋಡೋಣ. ಪಠಾಣ್​ (Pathaan) ಬಿಡುಗಡೆಯಾಗಿ ನಾಲ್ಕು ದಿನಗಳಲ್ಲಿ ಪಠಾಣ್​  200 ಕೋಟಿ ರೂಪಾಯಿ ಗಳಿಸಿರುವುದರ ಕುರಿತು ಕಂಗನಾ ಟಾಂಗ್​ ನೀಡಿದ್ದರು. ಚಿತ್ರವು ಬಾಕ್ಸ್ ಆಫೀಸ್​ನಲ್ಲಿ (Box office) ಯಶಸ್ಸು ಗಳಿಸಿರುವ ಕುರಿತು ಮಾತನಾಡಿದ್ದ ನಟಿ, 'ದೇಶವು ಖಾನ್ (Khan) ಮತ್ತು ಮುಸ್ಲಿಂ (Muslim) ನಟರ ಪರವಾಗಿ ಪಕ್ಷಪಾತಿಯಾಗಿದೆ. ಅವರಿಗೆ ಮಣೆ ಹಾಕುವಂತೆ ತೋರುತ್ತಿದೆ. ಈ ದೇಶವು ಎಲ್ಲಾ ಖಾನ್‌ಗಳನ್ನು ಮಾತ್ರ ಮತ್ತು ಕೇವಲ ಖಾನ್​ಗಳನ್ನು ಮಾತ್ರ ಪ್ರೀತಿಸುವಂತೆ ತೋರುತ್ತಿದೆ. ದೇಶದಲ್ಲಿ  ಮುಸ್ಲಿಂ ನಟಿಯರ ಮೇಲಿನ ಪ್ರೀತಿಯೂ ಹೆಚ್ಚಾಗಿದೆ.  ಆದ್ದರಿಂದ ಭಾರತವನ್ನು ದ್ವೇಷ ಮತ್ತು ಫ್ಯಾಸಿಸಂ ಎಂದು ದೂಷಿಸುವುದು ಸರಿಯಲ್ಲ' ಎಂದು ಹೇಳಿದ್ದರು.

Kangana Ranaut: ಖಾನ್​ ಮತ್ತು ಮುಸ್ಲಿಮರ ಮೇಲೆ ಲವ್​: ಕಂಗನಾಗೆ ನೆಟ್ಟಿಗರಿಂದ ಭರ್ಜರಿ ಕ್ಲಾಸ್​

ಇದಕ್ಕೆ ಈಗ ಪ್ರತಿಕ್ರಿಯೆ ನೀಡಿರುವ ಉರ್ಫಿ, 'ಓಹ್. ಮುಸ್ಲಿಂ ನಟ, (muslim star) ಹಿಂದು ನಟ ಅಂತ ಏನು ವಿಂಗಡಣೆ ಮಾಡುತ್ತೀರಿ? ಧರ್ಮದಿಂದ ಕಲೆ ವಿಭಾಗವಾಗಿಲ್ಲ. ಕಲಾವಿದರು ಮಾತ್ರ ಇರುತ್ತಾರೆ' ಎಂದು ಉರ್ಫಿ ಜಾವೇದ್ ಹೇಳಿದ್ದಾರೆ. ಈ ಪ್ರತಿಕ್ರಿಯೆಗೆ ರಿಪ್ಲೈ ಮಾಡಿರುವ ಕಂಗನಾ, 'ಹೌದು ಡಿಯರ್​ ಉರ್ಫಿ, ನಿಮ್ಮ ಮಾತು ನಿಜವಾಗಿದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತಿತ್ತು. ಆದರೆ ವಾಸ್ತವ ಬೇರೆಯೇ ಆಗಿದೆ. ಆದ್ದರಿಂದ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದಾಗ ಮಾತ್ರ ಅದು ಸಾಧ್ಯ. ಇದು ಆಗದ ತನಕ, ಪರಿಸ್ಥಿತಿ ಹೀಗೆ ಇರಲಿದೆ. ಅದಕ್ಕಾಗಿಯೇ 2024ರ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸೇರಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಒತ್ತಾಯಿಸೋಣ' ಎಂದಿದ್ದಾರೆ ಕಂಗನಾ.

ಏಕರೂಪ ನಾಗರಿಕ ಸಂಹಿತೆ (Uniform Civil code) ಬದಲು ಏಕರೂಪದ ಬಟ್ಟೆಯ ಕುರಿತು ಮಾತನಾಡಿದ  ಉರ್ಫಿ,  'ಏಕರೂಪ ಬಟ್ಟೆಯು ನನಗೆ ಕೆಟ್ಟ ಐಡಿಯಾವಾಗಿದೆ. ನನ್ನ ಬಟ್ಟೆಗಳಿಂದಲೇ ನಾನು ಜನಪ್ರಿಯಳು' ಎಂದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕಂಗನಾ, ಅಕ್ಕಮಹಾದೇವಿಯ ಉದಾಹರಣೆ ಕೊಟ್ಟಿದ್ದಾರೆ. 'ಭಾರತದಲ್ಲಿ ಅಕ್ಕ ಮಹಾದೇವಿ ಎಂಬ ರಾಣಿ ಇದ್ದರು. ಅವರಿಗೆ ಭಗವಂತ ಶಿವನ ಮೇಲೆ ಅಪಾರ ಪ್ರೀತಿ. ಇದನ್ನು ವಿರೋಧಿಸಿದ ಆಕೆಯ ಪತಿ, ಶಿವನನ್ನೇ ಪ್ರೀತಿಸುವುದಾದರೆ, ನನ್ನಿಂದ ಏನನ್ನೂ ತೆಗೆದುಕೊಂಡು ಹೋಗಬಾರದೆಂದು ನ್ಯಾಯ ಪಂಚಾಯಿತಿ (ಅನುಭವ ಮಂಟಪ) ಎದುರು ವಾದಿಸಿದ್ದರು. ಆ ಕ್ಷಣವೆ ತನ್ನೆಲ್ಲಾ ಉಡುಪುಗಳನ್ನು ಕಿತ್ತೊಗೆದು ಅಲ್ಲಿಂದ ಹೊರಟುಹೋದ ಆಕೆ ಮುಂದೆಂದು ಮೈ ಮುಚ್ಚುವ ಸಲುವಾಗಿ ಬಟ್ಟೆ ತೊಡಲಿಲ್ಲ' ಎಂದು ಕಂಗನಾ ರಣಾವತ್ ಹೇಳಿದ್ದಾರೆ. 'ಇವು ಎರಡೂ ಕೂಡ ಸ್ವಯಂ ಅಭಿವ್ಯಕ್ತಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಮಹಾದೇವಿ ಅಕ್ಕ (Akka Mahadevi) ಶೈನಿಂಗ್ ಸ್ಟಾರ್. ಮಹಾದೇವಿ ತುಂಬ ಶ್ರೇಷ್ಠಳು. ಕಾಡಿನಲ್ಲಿ ಬದುಕಿದ ಅಕ್ಕ ಮಹಾದೇವಿ ಆಮೇಲೆ ಯಾವತ್ತೂ ಬಟ್ಟೆ ಧರಿಸಲಿಲ್ಲ. ಯಾರಿಗೂ ನಿಮ್ಮ ದೇಹದ ಬಗ್ಗೆ ನಿಂದಿಸಲು ಬಿಡಬೇಡ, ನೀವು ಪವಿತ್ರ, ದೈವಾಂಶವನ್ನುಳ್ಳವಳು' ಎಂದು ಕಂಗನಾ ಹೇಳಿದ್ದು, ಸದ್ಯ ಇವರ ಟ್ವೀಟ್​ ವಾರ್​, ಒಂದು ಹಂತಕ್ಕೆ ಬಂದು ನಿಂತಿದೆ. ಆದರೆ ಉರ್ಫಿಯನ್ನು ಅಕ್ಕಮಹಾದೇವಿಗೆ ಹೋಲಿಸಿದ್ದಕ್ಕೆ ನೆಟ್ಟಿಗರು ಈಗ ಕಂಗನಾ ವಿರುದ್ಧ ಗರಂ ಆಗಿದ್ದಾರೆ. 

ಕಾಸ್ಟ್​ ಕೌಚಿಂಗ್ ಭಯಾನಕ ಅನುಭವ ಬಿಚ್ಚಿಟ್ಟ ನಟ Ankit Gupta!

 

Follow Us:
Download App:
  • android
  • ios