ಕಾಲಿವುಡ್ ಸ್ಟಾರ್ ಕಮಲ್ ಹಾಸನ್(Kamal Haasan) ನಟನೆಯ ವಿಕ್ರಮ್(Vikram) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಜೂನ್ 3ರಂದು ತೆರೆಗೆ ಬಂದ ವಿಕ್ರಮ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೋಟಿ ಕೋಟಿ ಗಳಿಕೆ ಮಾಡಿರುವ ವಿಕ್ರಮ್ ಮೊದಲ ದಿನಕ್ಕಿಂತ ಎರಡನೇ ದಿನ ಭರ್ಜರಿ ಕಲೆಕ್ಷನ್ ಮಾಡಿದೆ.

ಕಾಲಿವುಡ್ ಸ್ಟಾರ್ ಕಮಲ್ ಹಾಸನ್(Kamal Haasan) ನಟನೆಯ ವಿಕ್ರಮ್(Vikram) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಜೂನ್ 3ರಂದು ತೆರೆಗೆ ಬಂದ ವಿಕ್ರಮ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೋಟಿ ಕೋಟಿ ಗಳಿಕೆ ಮಾಡಿರುವ ವಿಕ್ರಮ್ ಮೊದಲ ದಿನಕ್ಕಿಂತ ಎರಡನೇ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಲೋಕೇಶ್ ಕನಗರಾಜ್ (Lokesh Kanagaraj)ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಮ್ ಸಿನಿಮಾ ವಿಕ್ರಮ್ ಸಿನಿಮಾಗೆ ಪ್ರೇಕ್ಷಕರರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಂದಹಾಗೆ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಮೊದಲ ದಿನ ಬರೋಬ್ಬರಿ 34 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ತಮಿಳುನಾಡು ಒಂದರಲ್ಲೇ ಸಿನಿಮಾ 20 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನುವ ಮಾಹಿತಿ ಬಹಿರಂಗವಾಗಿತ್ತು. ಈ ಬಗ್ಗೆ ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಸದ್ಯದಲ್ಲೇ ಕಮಲ್ ಹಾಸನ್ ಸಿನಿಮಾ ಸದ್ಯದಲ್ಲೇ 100 ಕೋಟಿ ಕ್ಲಬ್ ಸೇರಲಿದೆ ಎಂದಿದ್ದರು. ಇದೀಗ ವಿಕ್ರಮ್ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ. ಸಿನಿಮಾ ಬಿಡುಗಡೆಯಾಗಿ 2ನೇ ದಿನಗಳಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.

ತಮಿಳು ನಾಡಿನಲ್ಲಿ ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಮೂರನೇ ಸಿನಿಮಾ ಇದಾಗಿದೆ. ಮಲಿಮೈ ಮತ್ತು ಬೀಸ್ಟ್ ಸಿನಿಮಾ ಬಳಿಕ ವಿಕ್ರಮ್ ಹೆಚ್ಚು ಗಳಿಕೆ ಮಾಡಿದೆ. 2ನೇ ದಿನದಲ್ಲಿ ವಿಕ್ರಮ್ ಸಿನಿಮಾ ತಮಿಳುನಾಡಿನಲ್ಲಿ 60 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಒಟ್ಟು ಕಲೆಕ್ಷನ್ 100 ಕೋಟಿ ರೂ. ದಾಟಿದೆ. ಈ ಮೂಲಕ ದಕ್ಷಿಣ ಭಾರತದ ಮತ್ತೊಂದು ಸಿನಿಮಾ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಿದೆ.

ಇನ್ನು 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ 3ನೇ ಸಿನಿಮಾ ಇದಾಗಿದೆ. ದಶಾವತಾರಮ್ ಮತ್ತು ವಿಶ್ವರೂಪಮ್ ಸಿನಿಮಾ ಬಳಿಕ ವಿಕ್ರಮ್ ಸಿನಿಮಾ ಅತೀ ಹೆಚ್ಚು ಗಳಿಕೆ ಮಾಡಿದೆ. ವಿದೇಶದಲ್ಲೂ ವಿಕ್ರಮ್ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯುಎಸ್‌ಎನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

ಮತ್ತೆ ಸೌತ್ ಸ್ಟಾರ್ ಅಬ್ಬರಕ್ಕೆ ಮಂಕಾದ ಬಾಲಿವುಡ್; ಕಮಲ್ ಹಾಸನ್ ಮುಂದೆ ಮಂಡಿಯೂರಿದ ಅಕ್ಷಯ್ ಕುಮಾರ್

ವಿಶೇಷ ಅಂದರೆ ಅದೇ ದಿನ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್(Akshay Kumar) ನಟನೆಯ ಸಾಮ್ರಾಟ್ ಪೃಥ್ವಿರಾಜ್(Samrat Prithviraj) ಸಿನಿಮಾ ಕೂಡ ರಿಲೀಸ್ ಆಗಿದೆ. ಆದರೆ ಪೃಥ್ವಿರಾಜ್ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ನೀರಸ ಕಲೆಕ್ಷನ್ ಆಗಿದೆ.

Vikram Twitter Review;ಕಮಲ್ ಹಾಸನ್ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದನು?

ಅಂದಹಾಗೆ ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ದಕ್ಷಿಣ ಭಾರತದ ಮತ್ತಿಬ್ಬರು ಖ್ಯಾತ ಕಲಾವಿದರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಕೂಡ ನಟಿಸಿದ್ದಾರೆ. ಮೂವರು ಕಲಾವಿದರನ್ನು ಒಂದೇ ಸಿನಿಮಾದಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ತಮಿಳು ನಟ ಸೂರ್ಯ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ವಿಕ್ರಮ್ ಕಲೆಕ್ಷನ್ ಹೆಚ್ಚಾಗುತ್ತಿದ್ದು ಮೊದಲ ವಿಕೇಂಡ್‌ನಲ್ಲಿ ಎಷ್ಟು ಬಾಚಿಕೊಳ್ಳಲಿದೆ ಎಂದು ಕಾದುನೋಡಬೇಕು.