Asianet Suvarna News Asianet Suvarna News

'ಬಾಹುಬಲಿ-2' ರೆಕಾರ್ಡ್ ಬ್ರೇಕ್ ಮಾಡಿದ 'ವಿಕ್ರಮ್'; ಸಕ್ಸಸ್ ಪಾರ್ಟಿಯಲ್ಲಿ ಕಮಲ್ ಮಿಂಚಿಂಗ್

ವಿಕ್ರಮ್ ಸಿನಿಮಾ ತಮಿಳುನಾಡಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ತನ್ನದೆ ನಾಡಿನಲ್ಲಿ ಈ ಪರಿ ಕಲೆಕ್ಷನ್ ಮಾಡಿರುವುದು ವಿಶೇಷವಾಗಿದೆ. ಅಂದಹಾಗೆ ವಿಕ್ರಮ್ ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳಲ್ಲಿ ತಮಿಳುನಾಡಿನಲ್ಲಿ  150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅಂದಹಾಗೆ ಬಾಹುಬಲಿ-2 ಸಿನಿಮಾ ತಮಿಳುನಾಡಿನಲ್ಲಿ 146 ಕೋಟಿ ಬಾಚಿಕೊಂಡಿತ್ತು.  

Kamal Haasan starrer Vikram breaks Baahubali 2 record in Tamil Nadu sgk
Author
Bengaluru, First Published Jun 20, 2022, 11:42 AM IST

ಸಕಲಕಲಾವಲ್ಲಭ ಕಮಲ್ ಹಾಸನ್(Kamal Haasan) ನಟನೆಯ ವಿಕ್ರಮ್(Vikram) ಸಿನಿಮಾ ಸೂಪರ್ ಸಕ್ಸಸ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಸಿನಿಮಾಗೆ ಎಲ್ಲಾ ಭಾಷೆಯಿಂದನೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿಯಲ್ಲೂ ಸಿನಿಮಾಗೆ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಲಿವುಡ್‌ ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಮಾಯಿ ಮಾಡಿದೆ. ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಮ್ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಗೆ ಸಿನಿಮಾತಂಡ ಫುಲ್ ಖುಷ್ ಆಗಿದೆ. 

ಅಂದಹಾಗೆ ಸಿನಿಮಾ ಈಗಾಗಲೇ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಿಗುತ್ತಿದೆ. ಸಿನಿಮಾಗೆ ಸಿಕ್ಕ ಅಭೂತಪೂರ್ವ ಗೆಲುವಿಗೆ ಚಿತ್ರತಂಡ ಸಂತಸದ ಅಲೆಯಲ್ಲಿ ತೇಲುತ್ತಿದೆ. ಇದೀಗ ಕಮಲ್ ಹಾಸನ್ ಸಿನಿಮಾ ಮತ್ತೊಂದು ದಾಖಲೆ ಮಾಡಿದೆ. ಹೌದು, ತೆಲುಗಿನ ಬ್ಲಕ್ ಬಸ್ಟರ್ ಹಿಟ್, ಇಡೀ ವಿಶ್ವವೆ ದಕ್ಷಿಣ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದೆ. ಹೌದು ಅತಿ ಹೆಚ್ಚು ದಾಖಲೆಗನ್ನು ನಿರ್ಮಿಸಿದ್ದ ಬಾಹುಬಲಿ-2 ಸಿನಿಮಾವನ್ನು ಹಿಂದಿಕ್ಕಿದೆ ಕಮಲ್ ಹಾಸನ್ ವಿಕ್ರಮ್ ಸಿನಿಮಾ. 

ತಮಿಳಿನಲ್ಲಿ ಬಾಹುಬಲಿ-2 ಗಳಿಸಿದೆಷ್ಟ?  

ಈಗಾಗಲೇ ಕೋಟಿ ಕೋಟಿ ಬಾಚಿಕೊಂಡಿರುವ ವಿಕ್ರಮ್ ಸಿನಿಮಾ ತಮಿಳುನಾಡಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ತನ್ನದೆ ನಾಡಿನಲ್ಲಿ ಈ ಪರಿ ಕಲೆಕ್ಷನ್ ಮಾಡಿರುವುದು ವಿಶೇಷವಾಗಿದೆ. ಅಂದಹಾಗೆ ವಿಕ್ರಮ್ ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳಲ್ಲಿ ತಮಿಳುನಾಡಿನಲ್ಲಿ  150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅಂದಹಾಗೆ ಬಾಹುಬಲಿ-2 ಸಿನಿಮಾ ತಮಿಳುನಾಡಿನಲ್ಲಿ 146 ಕೋಟಿ ಬಾಚಿಕೊಂಡಿತ್ತು.  

'ವಿಕ್ರಮ್‌'ನಿಂದ ಬಂದ ಹಣದಲ್ಲಿ ಮೊದಲು ಸಾಲ ತೀರಿಸ್ತೀನಿ; ಕಮಲ್ ಹಾಸನ್

ಭರ್ಜರಿ ಸಕ್ಸಸ್‌ನ ಖುಷಿಲ್ಲರುವ ಸಿನಿಮಾತಂಡ ಇತ್ತೀಚಿಗಷ್ಟೆ ಸಕ್ಸಸ್ ಪಾರ್ಟಿ ಮಾಡಿದೆ. ಸಕ್ಸಸ್ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ನಿರ್ದೇಶಕ ಲೋಕೇಸ್ ಕನಗರಾಜ್,ಸಂಗೀತ ನಿರ್ದೇಶಕ ಅನಿರುದ್ಧ್, ವಿಜಯ್ ಸೇತುಪಟಿ ಭಾಗಿಯಾಗಿದ್ದರು. 

ಕಾಲಿವುಡ್ ನ “ಮಾಸ್ಟರ್” ಅನ್ನು ಹಿಂದಿಕ್ಕಿದ “ವಿಕ್ರಮ್” ಎರಡನೇ ವಾರದ ಕಲೆಕ್ಷನ್ಸ್ ಎಷ್ಟು ಗೊತ್ತಾ???

ವಿಕ್ರಮ್ ಸಿನಿಮಾದ ಬಗ್ಗೆ ಹೇಳುವುದಾದರೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದೆ.  ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ದಕ್ಷಿಣ ಭಾರತದ ಖ್ಯಾತ ನಟರಾದ ಫಹಾದ್ ಫಾಸಿಲ್ ಮತ್ತು ವಿಜಯ್ ಸತುಪತಿ ನಟಿಸಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ಕಾಲಿವುಡ್ ಸ್ಟಾರ್ ಸೂರ್ಯ ಬಣ್ಣ ಹಚ್ಚಿದ್ದಾರೆ. ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿರುವ ಖುಷಿಗೆ ಕಮಲ್ ಹಾಸನ್ ಸಿನಿಮಾತಂಡಕ್ಕೆ ಅದ್ಭುತ ಗಿಫ್ಟ್ ನೀಡಿದ್ದಾರೆ. ನಟ ಸೂರ್ಯ ಅವರಿಗೆ ದುಬಾರಿ ವಾಚ್ ಗಿಫ್ಟ್ ಮಾಡಿರವ ಕಮಲ್, ನಿರ್ದೇಶಕ ಲೋಕೇಶ್ ಅವರಿಗೆ ಕಾರ್ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಅನೇಕ ಜನರಿಗೆ ಬೈಕ್ ಗಿಫ್ಟ್ ಮಾಡಿದ್ದಾರೆ.

Follow Us:
Download App:
  • android
  • ios