ಸಿನಿಮಾ ಈಗಾಗಲೇ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಿಗುತ್ತಿದೆ. ಸಿನಿಮಾಗೆ ಸಿಕ್ಕ ಅಭೂತಪೂರ್ವ ಗೆಲುವಿಗೆ ಚಿತ್ರತಂಡ ಸಂತಸದ ಅಲೆಯಲ್ಲಿ ತೇಲುತ್ತಿದೆ. ಈ ಬಗ್ಗೆ ಮಾತನಾಡಿರುವ ಕಮಲ್ ಹಾಸನ್ ವಿಕ್ರಮ್ ಸಕ್ಸಸ್‌ನಿಂದ ಮೊದಲು ನಾನು ಸಾಲ ತೀರಿಸಿಕೊಳ್ಳಬೇಕು ಎಂದಿದ್ದಾರೆ. ಇದೇ ಸಮಯದಲ್ಲಿ ಮನಸ್ಸಿಗೆ ತಕ್ಕಂತೆ ತಿನ್ನುತ್ತೇನೆ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಏನಾದರು ಕೊಡುತ್ತೇನೆ ಎಂದು ಕಮಲ್ ಹಾಸನ್ ಹೇಳಿದರು.

ಸಕಲಕಲಾವಲ್ಲಭ ಕಮಲ್ ಹಾಸನ್(Kamal Haasan) ನಟನೆಯ ವಿಕ್ರಮ್(Vikram) ಸಿನಿಮಾ ಸೂಪರ್ ಸಕ್ಸಸ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಸಿನಿಮಾಗೆ ಎಲ್ಲಾ ಭಾಷೆಯಿಂದನೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಮಾಯಿ ಮಾಡಿದೆ. ವಿಕ್ರಮ್ ಸಿನಿಮಾದ ಸೂಪರ್ ಸಕ್ಸಸ್‌ನ ಖುಷಿಯಲ್ಲಿರುವ ಸಿನಿಮಾತಂಡ ಇತ್ತೀಚಿಗಷ್ಟೆ ಮಾಧ್ಯಮದ ಮುಂದೆ ಹಾಜರಾಗಿದ್ದರು. ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಮ್ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಗೆ ಸಿನಿಮಾತಂಡ ಫುಲ್ ಖುಷ್ ಆಗಿದೆ. 

Add Asianetnews Kannada as a Preferred SourcegooglePreferred

ಅಂದಹಾಗೆ ಸಿನಿಮಾ ಈಗಾಗಲೇ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಿಗುತ್ತಿದೆ. ಸಿನಿಮಾಗೆ ಸಿಕ್ಕ ಅಭೂತಪೂರ್ವ ಗೆಲುವಿಗೆ ಚಿತ್ರತಂಡ ಸಂತಸದ ಅಲೆಯಲ್ಲಿ ತೇಲುತ್ತಿದೆ. ಈ ಬಗ್ಗೆ ಮಾತನಾಡಿರುವ ಕಮಲ್ ಹಾಸನ್ ವಿಕ್ರಮ್ ಸಕ್ಸಸ್‌ನಿಂದ ಮೊದಲು ನಾನು ಸಾಲ ತೀರಿಸಿಕೊಳ್ಳಬೇಕು ಎಂದಿದ್ದಾರೆ. ಇದೇ ಸಮಯದಲ್ಲಿ ಮನಸ್ಸಿಗೆ ತಕ್ಕಂತೆ ತಿನ್ನುತ್ತೇನೆ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಏನಾದರು ಕೊಡುತ್ತೇನೆ ಎಂದು ಕಮಲ್ ಹಾಸನ್ ಹೇಳಿದರು.

'ಪ್ರತಿಯೊಬ್ಬರು ಪ್ರಗತಿ ಹೊಂದಬೇಕಾದರೆ ಹಣದ ಬಗ್ಗೆ ಚಿಂತಿಸದ ನಾಯಕ ಇರಬೇಕು. ಕ್ಷಣದಲ್ಲಿ 300 ಕೋಟಿ ಗಳಿಸಬಹುದು ಎಂದು ಹೇಳಿದಾಗ ಯಾರಿಗೂ ಅರ್ಥವಾಗಿರಲಿಲ್ಲ. ಈಗ ನೀವೆ ನೋಡಿದ್ರಿ ಎಂದಿದ್ದೀರಿ' ಎಂದರು. ಇದೇ ಸಮಯದಲ್ಲಿ ಕಮಲ್ ತನ್ನ ಸಾಲದ ಬಗ್ಗೆಯೂ ಕಮಲ್ ಬಹಿರಂಗ ಪಡಿಸಿದರು. 'ಮೊದಲು ಸಾಲವನ್ನೆಲ್ಲ ತೀರಿಸುತ್ತೇನೆ. ಮನಸಾರೆ ತಿನ್ನುತ್ತೇನೆ, ಗೆಳೆಯರಿಗೆ ಏನು ಬೇಕೊ ಅದನ್ನು ಕೊಡುತ್ತೇನೆ' ಎಂದು ಹೇಳಿದರು. ಕೊಡಲು ಇನ್ನೇನು ಇಲ್ಲ, ಬೇರೆಯವರ ಹಣ ಪಡೆದು ಇತರರಿಗೆ ಸಹಾಯ ಮಾಡುವಂತೆ ನಟಿಸಬೇಕಾಗಿಲ್ಲ. ನನಗೆ ಯಾವುದೇ ದೊಡ್ಡ ಬಿರುದುಗಳು ಬೇಡ. ನಾನು ಒಳ್ಳೆಯ ಮನುಷ್ಯನಾಗಲು ಬಯಸುತ್ತೇನೆ ಎಂದು ಕಮಲ್ ಹೇಳಿದ್ದಾರೆ.

ಚಿರಂಜೀವಿ ಮನೆಯಲ್ಲಿ ಕಮಲ್ ಹಾಸನ್ 'ವಿಕ್ರಮ್' ಸಕ್ಸಸ್ ಪಾರ್ಟಿ; ಸಲ್ಮಾನ್ ಸೇರಿ ಯಾರೆಲ್ಲಾ ಭಾಗಿಯಾಗಿದ್ದರು?

ಇತ್ತೀಚಿಗಷ್ಟೆ ಕಮಲ್ ಹಾಸನ್ ಟಾಲಿವುಡ್ ಸ್ಟಾರ್ ಚಿರಂಜೀವಿ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಕಮಲ್ ಹಾಸನ್ ವಿಕ್ರಮ್ ಸಿನಿಮಾ ಸಕ್ಸಸ್‌ಗೆ ಮೆಗಾಸ್ಟಾರ್ ಪಾರ್ಟಿ ಆಯೋಜಿಸಿದ್ದರು. ವಿಕ್ರಮ್ ಭರ್ಜರಿ ಯಶಸ್ಸು ಕಂಡ ಖುಷಿಗೆ ತೆಲುಗು ಸ್ಟಾರ್ ಚಿರಂಜೀವಿ(Chiranjeevi) ತಮ್ಮ ನಿವಾಸದಲ್ಲಿ ಸಕ್ಸಸ್ ಪಾರ್ಟಿ ಹಮ್ಮಿಕೊಂಡಿದ್ದರು. ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅಂದಹಾಗೆ ಪಾರ್ಟಿಯಲ್ಲಿ ವಿಶೇಷ ಗೆಸ್ಟ್ ಆಗಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Kha) ಆಗಮಿಸಿದ್ದರು. 

ಚಿರಂಜೀವಿ ನಿವಾಸದಲ್ಲಿ ಘಟಾನುಘಟಿ ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ . ಕಮಲ್ ಹಾಸನ್ ಅವರಿಗೆ ಚಿರಂಜೀವಿ ಸನ್ಮಾನ ಮಾಡಿ ಗೌರವಿಸಿದ್ದರು. ಸಲ್ಮಾನ್ ಖಾನ್ ಮತ್ತು ವಿಕ್ರಮ್ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಹಾಜರಿದ್ದರು. ಸುಂದರ ಫೋಟೋಗಳನ್ನು ಶೇರ್ ಮಾಡಿ ಚಿರಂಜೀವಿ ವಿಕ್ರಮ್ ಸಿನಿಮಾವನ್ನು ಹೊಗಳಿದ್ದರು. 

ವಿಕ್ರಮ್‌ ಚಿತ್ರದ ಯಶಸ್ಸಿಗೆ ಕನ್ನಡದಲ್ಲೇ ಕೃತಜ್ಞತೆ ಸಲ್ಲಿಸಿದ ಕಮಲ್‌ಹಾಸನ್‌

ವಿಕ್ರಮ್ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ದಕ್ಷಿಣ ಭಾರತದ ಖ್ಯಾತ ನಟರಾದ ಫಹಾದ್ ಫಾಸಿಲ್ ಮತ್ತು ವಿಜಯ್ ಸತುಪತಿ ನಟಿಸಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ಕಾಲಿವುಡ್ ಸ್ಟಾರ್ ಸೂರ್ಯ ಬಣ್ಣ ಹಚ್ಚಿದ್ದಾರೆ. ವಿಕ್ರಮ್ ಸಿನಿಮಾ ಈಗಾಗಲೇ 300 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅಂದಹಾಗೆ ಸಿನಿಮಾ ಭರ್ಜರಿ ಯಶಸ್ಸು ಕಂಡ ಖುಷಿಗೆ ಕಮಲ್ ಹಾಸನ್ ಸಿನಿಮಾತಂಡಕ್ಕೆ ಅದ್ಭುತ ಗಿಫ್ಟ್ ನೀಡಿದ್ದಾರೆ. ನಟ ಸೂರ್ಯ ಅವರಿಗೆ ದುಬಾರಿ ವಾಚ್ ಗಿಫ್ಟ್ ಮಾಡಿರವ ಕಮಲ್, ನಿರ್ದೇಶಕ ಲೋಕೇಶ್ ಅವರಿಗೆ ಕಾರ್ ಉಡುಗೊರೆಯಾಗಿ ನೀಡಿದ್ದಾರೆ. ಅನೇಕ ಜನರಿಗೆ ಬೈಕ್ ಗಿಫ್ಟ್ ಮಾಡಿದ್ದಾರೆ.