ಮಹಾತ್ಮ ಗಾಂಧೀಜಿಗೆ ಕ್ಷಮೆ ಕೇಳಲು 'ಹೇ ರಾಮ್' ಸಿನಿಮಾ ಮಾಡಿದೆ; ಕಮಲ್ ಹಾಸನ್
ಮಹಾತ್ಮ ಗಾಂಧೀಜಿಗೆ ಕ್ಷಮೆ ಕೇಳಲು 'ಹೇ ರಾಮ್' ಸಿನಿಮಾ ಮಾಡಿದ್ದು ಎಂದು ಕಮಲ್ ಹಾಸನ್ ಬಹಿರಂಗ ಪಡಿಸಿದ್ದಾರೆ.
'ಹೇ ರಾಮ್' ಸಕಲಕಲಾವಲ್ಲಭ ಕಮಲ್ ಹಾಸನ್ ನಟನೆಯ ಅತ್ಯುತ್ತಮ ಚಿತ್ರಗಳಲ್ಲಿ ಒಂದು. 2000ರಲ್ಲಿ ರಿಲೀಸ್ ಆದ ಈ ಸಿನಿಮಾ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ವಿಶೇಷ ಎಂದರೆ ಆಗ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೂ ಭಾರತದಿಂದ ಅಧಿಕೃತ ಪ್ರವೇಶ ಪಡೆದ ಸಿನಿಮಾವಾಗಿತ್ತು. ಈ ಸಿನಿಮಾದ ಬಗ್ಗೆ ಕಮಲ್ ಹಾಸನ್ ಈಗ ಮಾತನಾಡಿದ್ದಾರೆ. ಈ ಮಾಡಿದ ಹಿಂದಿನ ಉದ್ದೇಶವೇನು ಎಂದು ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗಷ್ಟೆ ಕಮಲ್ ಹಾಸನ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂವಾದದಲ್ಲಿ ಹೇ ರಾಮ್ ಸಿನಿಮಾ ಯಾವ ಕಾರಣಕ್ಕೆ ಮಾಡಿದ್ದು ಎಂದು ಬಹಿರಂಗ ಪಡಿಸಿದರು.
ಅಂದಹಾಗೆ ಕಮಲ್ ಹಾಸನ್ ತುಂಬಾ ಇಷ್ಟ ಪಡುವ ವ್ಯಕ್ತಿಗಳಲ್ಲಿ ರಾಹುಲ್ ಗಾಂಧಿ ಕೂಡ ಒಬ್ಬರು. ಸಂವಾದದಲ್ಲಿ ಕಮಲ್ ಹಾಸನ್ ಮಹಾತ್ಮ ಗಾಂಧಿ ಬಗ್ಗೆ ಮಾತನಾಡಿದ್ದಾರೆ. ಯುವಕನಾಗಿದ್ದಾಗ ಮಹಾತ್ಮ ಗಾಂಧಿ ಇಷ್ಟವಾಗುತ್ತಿರಲಿಲ್ಲ ಎಂದು ಕಮಲ್ ಬಹಿರಂಗ ಪಡಿಸಿದರು. 'ನನ್ನ ತಂದೆ ಕಾಂಗ್ರೆಸ್ ಆಗಿದ್ದರು. ನಾನು ಚಿಕ್ಕವನಾಗಿದ್ದಾಗ ಪರಿಸರ ನನ್ನನ್ನು ಗಾಂಧೀಜಿಯವರ ಕಟು ವಿಮರ್ಶಕನನ್ನಾಗಿ ಮಾಡಿತ್ತು. ಆದರೆ 24-25ನೇ ವಯಸ್ಸಿನಲ್ಲಿ ಗಾಂಧೀಜಿಯನ್ನು ನಾನು ನನ್ನದೇ ಆದ ರೀತಿ ಕಂಡುಕೊಂಡೆ. ಬಳಿಕ ನಾನು ಗಾಂಧೀಜಿ ಅವರ ಅಭಿಮಾನಿಯಾದೆ' ಎಂದು ಹೇಳಿದರು. ಇದನ್ನ ಸರಿಪಡಿಕೊಳ್ಳಲು, ಗಾಂಧೀಜಿ ಅವರಿಗೆ ಕ್ಷಮೆ ಕೇಳಲು ನಾನು 'ಹೇ ರಾಮ್' ಸಿನಿಮಾ ಮಾಡಿದೆ. ಆ ಸಿನಿಮಾದಲ್ಲಿ ಮಹಾತ್ಮಾ ಗಾಂಧಿಯನ್ನು ಕೊಲ್ಲಲು ಬಯಸುವ ಹಂತಕನ ಸಮಾನವಾದ ಪಾತ್ರ ಮಾಡಿದ್ದೆ. ಆದರೆ ಅವನು ಗಾಂಧೀಜಿಗೆ ಹತ್ತಿರವಾಗುತ್ತಾ ಹೋದಾಗ ತನ್ನ ಮನಸ್ಸನ್ನು ಬದಲಾಯಿಸಿಕೊಳ್ಳುತ್ತಾನೆ' ಎಂದು ಕಮಲ್ ಹಾಸನ್ ಹೇ ರಾಮ್ ಸಿನಿಮಾದ ಹಿಂದಿನ ಕಾರಣ ವಿವರಿಸಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ನಟ ಕಮಲ್ ಹಸನ್!
ಇದು ನಾನು ನನ್ನದೇ ಮಾರ್ಗದಲ್ಲಿ ಬಾಬುಗೆ ಕ್ಷಮೆ ಕೇಳಿದ ರೀತಿ. ಇದು ಸಂಪೂರ್ಣ ನನ್ನ ಐಡಿಯಾ ಎಂದು ಕಮಲ್ ಹಾಸನ್ ಹೇಳಿದರು. 'ವಿಮರ್ಶೆಯ ಕೆಟ್ಟ ರೂಪ ಹತ್ಯೆಯಾಗಿದೆ, ಇದು ತುಂಬಾ ಚೀಪ್ ಎಂದು ನಾನು ಭಾವಿಸುತ್ತೇನೆ' ಎಂದು ಕಮಲ್ ಹಾಸನ್ ಹತ್ಯೆ ಬಗ್ಗೆ ಹೇಳಿದರು.
ಕಮಲ್ ಹಾಸನ್ ಮತ್ತು ರಾಹುಲ್ ಗಾಂಧಿ ಅವರ ಸಂವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ಸದ್ಯ ಭಾರತ್ ಜೋಡೋ ಯಾತ್ರೆಯಲ್ಲಿದ್ದಾರೆ. ಕಮಲ್ ಹಾಸನ್ ಕೂಡ ಸಾಥ್ ನೀಡಿದ್ದಾರೆ. ಸಿನಿಮಾ ಶೂಟಿಂಗ್ ನಡುವೆಯೂ ಕಮಲ್ ಹಾಸನ್ ರಾಹುಲ್ ಗಾಂಧಿ ಜೊತೆ ಸಂವಾದಲ್ಲಿ ಕಾಣಿಸಿಕೊಂಡರು. ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು.
ಕನ್ನಡ ಚಿತ್ರರಂಗದ ಆ ದಿನಗಳು ಮತ್ತೆ ಮರುಕಳಿಸಿದೆ; ಕಾಂತಾರ ಬಗ್ಗೆ ಕಮಲ್ ಹಾಸನ್ ಮೆಚ್ಚುಗೆ
ಕಮಲ್ ಹಾಸನ್ ಸದ್ಯ ಇಂಡಿಯನ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ಇದೀಗ ಕಿಕ್ ಸ್ಟಾರ್ಟ್ ಮಾಡಿರುವ ಸಿನಿಮಾತಂಡ ಭರ್ಜರಿಯಾಗಿ ಚಿತ್ರೀಕರಣ ಮಾಡುತ್ತಿದೆ. ಶಂಕರ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಕೊನೆಯದಾಗಿ ಕಮಲ್ ವಿಕ್ರಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿತ್ತು.