ಕಾರ್ ಆಯ್ತು ಈಗ ವಾಚ್ ಗಿಫ್ಟ್: 'ಇಂಡಿಯನ್-2' ನಿರ್ದೇಶ ಶಂಕರ್‌ಗೆ ಕಮಲ್ ಹಾಸನ್ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.
ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಇತ್ತೀಚಿಗಷ್ಟೆ ಕೆಲಸ ಕಳೆದುಕೊಂಡಿದ್ದ ಮಹಿಳಾ ಬಸ್ ಡ್ರೈವರ್‌ಗೆ ಕಾರ್ ಗಿಫ್ಟ್ ನೀಡುವ ಮೂಲಕ ಸುದ್ದಿಯಾಗಿದ್ದರು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು, ಸ್ವಾತಂತ್ರರಾಗಿ ಜೀವನ ನಡೆಸಬೇಕು, ಎಲ್ಲರಿಗೂ ಸ್ಪೂರ್ತಿಯಾಗಬೇಕು ಎನ್ನುವ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದ ಡ್ರೈವರ್‌ಗೆ ಕಾರ್ ಗಿಫ್ಟ್ ಮಾಡಿ ಎಲ್ಲರಾ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಕಮಲ್ ಮತ್ತೊಂದು ಉಡುಗೊರೆ ಮೂಲಕ ಸುದ್ದಿಯಾಗಿದ್ದಾರೆ. ಹೌದು ಖ್ಯಾತ ನಿರ್ದೇಶಕ ಶಂಕರ್‌ಗೆ ದುಬಾರಿ ವಾಚ್ ಗಿಫ್ಟ್ ಆಗಿ ನೀಡಿದ್ದಾರೆ.
ಕಮಲ್ ಹಾಸನ್ ಸದ್ಯ ಇಂಡಿಯನ್ -2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾ ಸೆಟ್ಟೇರಿ ಅನೇಕ ವರ್ಷಗಳೇ ಆಗಿವೆ. ಅನೇಕ ಅಡೆತಡೆಗಳ ಬಳಿಕ ಇಂಡಿಯಾ-2 ಮುಕ್ತಾಯ ಹಂತ ತಲುಪಿದೆ. ಸದ್ಯ ಯಶಸ್ವಿಯಾಗಿ ಚಿತ್ರೀಕರಣ ಮುಗಿಯುತ್ತಿರುವ ಬೆನ್ನಲ್ಲೇ ಕಮಲ್ ಹಾಸನ್ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟಕ್ಕೂ ಕಮಲ್ ಈ ಉಡುಗೊರೆ ಕೊಡಲು ಕಾರಣ ಇಂಡಿಯನ್ -2 ಸಿನಿಮಾ. ಚಿತ್ರದ ಕೆಲವು ದೃಶ್ಯಗಳನ್ನು ಇಂಪ್ರೆಸ್ ಆದ ಕಮಲ್ ಈ ಗಿಫ್ಟ್ ನೀಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಬರೆದುಕೊಂಡಿದ್ದಾರೆ.
ಶಂಕರ್ ಕೈಗೆ ಸ್ವತಃ ಕಮಲ್ ಹಾಸನ್ ವಾಚ್ ಕಟ್ಟುವ ಫೋಟೋವನ್ನು ಶೇರ್ ಮಾಡಿ ಬಹಿರಂಗ ಪಡಿಸಿದ್ದಾರೆ. 'ನಾನು ಇಂದು ಇಂಡಿಯನ್ 2 ಚಿತ್ರದ ಪ್ರಮುಖ ದೃಶ್ಯಗಳನ್ನು ನೋಡಿದೆ. ಶಂಕರ್‌ಗೆ ನನ್ನ ಶುಭಾಶಯಗಳು. ಇದು ನಿಮ್ಮ ದೊಡ್ಡ ಸಿನಿಮಾ ಆಗಬಹುದು ಎಂಬುದು ನನ್ನ ಸಲಹೆ. ಏಕೆಂದರೆ ಇದು ನಿಮ್ಮ ಕಲಾ ಜೀವನದ ಅತ್ಯುನ್ನತ ಹಂತವಾಗಿದೆ. ಹೆಮ್ಮೆಯಿಂದಿರಿ. ಅನೇಕ ಹೊಸ ಎತ್ತರಗಳ ಹುಡುಕಾಟದಲ್ಲಿರಿ' ಎಂದು ತಮಿಳಿನಲ್ಲಿ ಬರೆದುಕೊಂಡಿದ್ದಾರೆ.
Project K: 600 ಕೋಟಿ ಬಜೆಟ್, ಪ್ರಭಾಸ್, ಅಮಿತಾಭ್, ಕಮಲ್, ದೀಪಿಕಾ ಪಡೆದ ಸಂಭಾವನೆ ಎಷ್ಟು?
ಅಂದಹಾಗೆ ಕಮಲ್ ಹಾಸನ್ ಸಿನಿಮಾ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಇಂಡಿಯಾ -2 ಕೂಡ ಭಾರಿ ನಿರಿಕ್ಷೆ ಮೂಡಿಸಿದ ಸಿನಿಮಾಗಳಲ್ಲಿ ಒಂದಾಗಿದೆ. 'ಇಂಡಿಯನ್ 2' ಬಿಡುಗಡೆ ದಿನಾಂಕ ಇನ್ನೂ ಘೋಷಿಸಲಾಗಿಲ್ಲ. ಆದರೆ ಈ ಸಿನಿಮಾ 2024 ರ ಪೊಂಗಲ್‌ಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಮಲ್ ಹಾಸನ್ ಕೊನೆಯದಾಗಿ ವಿಕ್ರಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಿಕ್ರಮ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಸಿನಿಮಾವಾಗಿದೆ. ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದ್ದು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಸಿನಿಮಾ ಸಕ್ಸಸ್ ಖುಷಿಗೆ ಕಮಲ್ ಸಿನಿಮಾತಂಡದ ಅನೇಕರಿಗೆ ರೋಲೆಕ್ಸ್ ವಾಚ್ ಅನ್ನು ಗಿಫ್ಟ್ ನೀಡಿದ್ದರು. ಇದೀಗ ಇಂಡಿಯನ್-2 ನಿರ್ದೇಶಕರಿಗೂ ವಾಚ್ ಗಿಫ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಕೆಲಸ ಕಳೆದುಕೊಂಡಿದ್ದ ಮಹಿಳಾ ಬಸ್ ಡ್ರೈವರ್‌ಗೆ ಕಾರ್ ಗಿಫ್ಟ್ ನೀಡಿದ ಕಮಲ್ ಹಾಸನ್
ಕಮಲ್ ಹಾಸನ್ ಇತ್ತೀಚಿಗಷ್ಟೆ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ. ಪ್ರಭಾಸ್ ಮತ್ತು ನಾಗ್ ಅಶ್ವನಿ ಕಾಂಬಿನೇಷನ್ ನಲ್ಲಿ ಬರ್ತಿರುವ ಪ್ರಾಜೆಕ್ಟ್ ಕೆ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಕೂಡ ನಟಿಸುತ್ತಿದ್ದಾರೆ. ಇದೀಗ ಕಮಲ್ ಹಾಸನ್ ಎಂಟ್ರಿ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.
