'ಮಗಧೀರ' ಚೆಲುವೆ ಕಾಜಲ್ ಅಗರ್ವಾಲ್ ಮೇಣದ ಪ್ರತಿಮೆ ಸಿಂಗಾಪೂರ್‌ನಲ್ಲಿ ನಿರ್ಮಾಣವಾಗಲಿದೆ. ಇದೇ ಮೊದಲ ಬಾರಿಗೆ ಸಿಂಗಾಪೂರ್‌ನಲ್ಲಿ ಸೌತ್ ಇಂಡಿಯನ್ ನಟಿಯೊಬ್ಬಳ ಮೇಣದ ಪ್ರತಿಮೆ ನಿರ್ಮಾಣವಾಗುತ್ತಿದೆ. 

ಸೌತ್ ಇಂಡಿಯನ್ ಮೋಸ್ಟ್ ಹ್ಯಾಪನಿಂಗ್ ನಟಿ ಕಾಜಲ್ ಅಗರ್‌ವಾಲ್ ಮೇಣದ ಪ್ರತಿಮೆ ಸಿಂಗಾಪೂರ್‌ನಲ್ಲಿ ಅನಾವರಣಗೊಳ್ಳಲಿದೆ. ಇದೇ ಮೊದಲ ಬಾರಿಗೆ ಸೌತ್ ಇಂಡಿಯನ್ ನಟಿಯೊಬ್ಬಳ ಮೇಣದ ಪ್ರತಿಮೆ ಸಿಂಗಾಪೂರ್‌ನಲ್ಲಿ ಅನಾವರಣಗೊಳ್ಳುತ್ತಿದೆ. 2020, ಫೆಬ್ರವರಿ 5 ರಂದು ಈ ಪ್ರತಿಮೆ ಅನಾವರಣಗೊಳ್ಳುತ್ತಿದೆ. 

ಈ ಹಿಂದೆ ತೆಲುಗು ಸೂಪರ್ ಸ್ಟಾರ್‌ಗಳಾದ ಪ್ರಭಾಸ್, ಮಹೇಶ್‌ ಬಾಬು ಪ್ರತಿಮೆಗಳನ್ನು ಸಿಂಗಾಪೂರ್‌ನಲ್ಲಿ ಸ್ಥಾಪಿಸಲಾಗಿದೆ. 

ಅನುಷ್ಕಾರನ್ನು ಬಿಟ್ಟು ಕಾಜಲ್ ಕೈ ಹಿಡಿಯುತ್ತಾರಾ ಪ್ರಭಾಸ್?

View post on Instagram
View post on Instagram


ಕಾಜಲ್ ಅಗರ್‌ವಾಲ್ ತೆಲುಗು, ತಮಿಳು ಸಿನಿಮಾರಂಗದಲ್ಲಿ ಕೇಳಿ ಬರುವ ಮೊದಲ ಹೆಸರು. ' ಕ್ಯೂ ಹೋ ಗಯಾ ನಾ' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಮಗಧೀರ, ಆರ್ಯ 2, ಬೃಂದಾವನಂ, ಮಿಸ್ಟರ್ ಪರ್ಫೆಕ್ಟ್, ಸಿಂಗಂ, ದಢಾ ಹೆಸರನ್ನು ತಂದು ಕೊಟ್ಟಿತು.

ಅಯ್ಯಯ್ಯೋ... ಎಲ್ಲರೆದುರು ಅಲಿಯಾ ಮುಂದೆ ಶರ್ಟ್ ಬಿಚ್ಚಿದ ರಣಬೀರ್!

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಮದುವೆ ಬಗ್ಗೆ ಹೇಳಿದ್ದಾರೆ. ಪ್ರಭಾಸ್ ಮೇಲೆ ಮನಸ್ಸಾಗಿದೆ ಎಂದಿದ್ದಾರೆ. ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡುತ್ತಾ, ನನ್ನ ಹುಡುಗ ಪೊಸೆಸಿವ್, ಕೇರಿಂಗ್ ಹಾಗೂ ಆಧ್ಯಾತ್ಮಿಕ ಮನಸ್ಥಿತಿ ಹೊಂದಿರುವವನಾಗಿರಬೇಕು ಎಂದು ಗಮನ ಸೆಳೆದಿದ್ದರು. 

ಸದ್ಯ ಹಿಂದಿ ಸಿನಿಮಾ 'ಮುಂಬೈ ಸಾಗಾ'ದಲ್ಲಿ ಜಾನ್ ಅಬ್ರಾಹಿಂ ಜೊತೆ ಕಾಣಿಸಿಕೊಂಡಿದ್ದಾರೆ. ಸಂಜಯ್ ಗುಪ್ತಾ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.