ಬಾಲಿವುಡ್ ಕ್ಯೂಟ್ ಕಪಲ್ ರಣಬೀರ್ ಕಪೂರ್- ಅಲಿಯಾ ಭಟ್ 'ಬ್ರಹ್ಮಸೂತ್ರ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ಚಿತ್ರದ ಶೂಟಿಂಗ್ ವಾರಣಾಸಿಯಲ್ಲಿ ನಡೆಯುತ್ತಿದೆ. 

 

ಅಲಿಯಾ ಭಟ್- ರಣಬೀರ್ ಕಪೂರ್ ಸಿನಿಮಾ ಸೆಟ್‌ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ. ಅಲಿಯಾ- ರಣಬೀರ್ ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡಿದ್ದಾರೆ. ಡ್ಯಾನ್ಸ್ ಮಾಡುವಾಗ ರಣಬೀರ್ ಶರ್ಟ್ ಬಿಚ್ಚಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬ್ರಹ್ಮಸೂತ್ರ ಶೂಟಿಂಗ್ ಭರದಿಂದ ಸಾಗುತ್ತಿದ್ದು 2020 ರ ಆರಂಭದಲ್ಲಿ ರಿಲೀಸ್‌ ಆಗಲಿದೆ ಎನ್ನಲಾಗಿದೆ. ಅಮಿತಾಬಚ್ಚನ್, ಮೌನಿ ರಾಯ್, ಅಕ್ಕಿನೇನಿ ನಾಗಾರ್ಜುನ್, ಡಿಂಪಲ್ ಕಪಾಡಿಯಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ