ನಟಿ ಕಾಜಲ್ ಹಾಗೂ ಉದ್ಯಮಿ ಗೌತಮ್‌ ಹನಿಮೂನ್‌ಗೆಂದು ಮಾಲ್ಡೀವ್ಸ್‌ಗೆ ತೆರಳಿದ್ದಾರೆ.  ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಬೋಲ್ಡ್‌ ರೆಡ್‌ ಮ್ಯಾಕ್ಸಿ ಧರಿಸಿ ಕಾಜಲ್ ಕಂಗೊಳ್ಳಿಸುತ್ತಿದ್ದಾರೆ. ವೈಟ್ ಟೀ ಶರ್ಟ್‌ ಹಾಗೂ ಶಾರ್ಟ್‌ ಧರಿಸಿರುವ ಗೌತಮ್ ಸಮುದ್ರಕ್ಕೆ ಬೆನ್ನು ಮಾಡಿ ನಿಂತು ಪೋಸ್ ಕೊಟ್ಟಿದ್ದಾರೆ.

ಎಲ್ಲೆಲ್ಲೂ ಪ್ರೇಮ.. ಕಾಜಲ್-ಗೌತಮ್ ಲಿಪ್‌ಲಾಕ್ ವೈರಲ್ 

ಸೋಷಿಯಲ್ ಮೀಡಿಯಾದಲ್ಲಿ ಗೌತಮ್ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದು,  ಮಾಲ್ಡೀವ್ಸ್‌ನ ದುಬಾರಿ ವಿಲ್ಲಾದಲ್ಲಿ ನಿಂತು ಫೋಸ್ ಮಾಡಿರುವ ಫೋಟೋ ಕೂಡ ಅಪ್ಲೋಡ್ ಮಾಡಿಕೊಂಡಿದ್ದಾರೆ.  ತುಂಬಾ ದಿನಗಳ ನಂತರ ವಿದೇಶಕ್ಕೆ ಪ್ರಯಣಿಸುತ್ತಿರುವುದಕ್ಕೆ ಇಬ್ಬರೂ ಸಂತಸ ವ್ಯಕ್ತಪಡಿಸಿದ್ದಾರೆ.

 

 
 
 
 
 
 
 
 
 
 
 
 
 

@kitchlug 😘 @conrad_maldives @twaincommunications @aasthasharma ❤️

A post shared by Kajal Aggarwal (@kajalaggarwalofficial) on Nov 8, 2020 at 2:58am PST

ಈ ಹಿಂದೆ ಕಾಜಲ್‌ ತಮ್ಮ ಫ್ಯಾಮಿಲಿ ಜೊತೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಆದರೆ ಪತಿ ಜೊತೆ ಮೊದಲ ಸಲವಾದ ಕಾರಣ ಏನೋ ಸ್ಪೆಷಲ್ ಫೀಲ್ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಕಾಜಲ್‌ ರೆಡ್‌ ಮ್ಯಾಕ್ಸಿ ಹೆಣ್ಣು ಮಕ್ಕಳ ಕಣ್ಸೆಳೆದಿದೆ.

ಹಳದಿ ಸೀರೆಯಲ್ಲಿ ಕಾಜಲ್: ಬ್ಲೌಸ್‌ನಲ್ಲೇ ಎಟ್ಯಾಚ್ ಆಗಿತ್ತು ಅಟ್ರಾಕ್ಟಿವ್ ಜ್ಯುವೆಲ್ಲರಿ 

ಕಳೆದ ವಾರ ಮುಂಬೈನ ತಾಜ್‌ ಹೋಟೆಲ್‌ನಲ್ಲಿ, ಉದ್ಯಮಿ ಗೌತಮ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಕರು. ಅಂದಿನಿಂದ ಸೋಷಿಯಲ್ ಮೀಡಿಯಾದ ಕೇಂದ್ರ ಬಿಂದುವಾಗಿದ್ದಾರೆ. ಸಾಮಾನ್ಯವಾಗಿ ಮದುವೆಯಾದ ನಂತರ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾದರೆ, ಕಾಜಲ್ ಮಾತ್ರ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಕೆಲವು ಬ್ರ್ಯಾಂಡ್‌ಗಳಿಗೆ ಪೋಸ್‌ ಕೊಟ್ಟು ಮಾರ್ಕೆಟಿಂಗ್ ಮಾಡುತ್ತಿದ್ದಾರೆ.