ಕಾಜಲ್ ಮತ್ತು ಗೌತಮ್ ದಂಪತಿ ಮಗನ ಫೋಟೋವನ್ನು ಎಲ್ಲೂ ಶೇರ್ ಮಾಡಿರಲಿಲ್ಲ. ಅಭಿಮಾನಿಗಳು ನೆಚ್ಚಿನ ನಟಿಯ ಮಗನ ಫೋಟೋವನ್ನು ನೋಡಲು ಕಾತರರಾಗಿದ್ದರು. ಇದೀಗ ಅಮ್ಮಂದಿರ ದಿನದ ವಿಶೇಷವಾಗಿ ಮಗನ ಫೋಟೋ ಶೇರ್ ಮಾಡಿ ಭಾವುಕ ಸಾಲು ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ತಾಯಿತನವನ್ನು ಸಂಭ್ರಮಿಸುತ್ತಿದ್ದಾರೆ. ಏಪ್ರಿಲ್ 18ರಂದು ಗಂಡ ಮಗುವಿಗೆ ಜನ್ಮ ನೀಡಿರುವ ನಟಿ ಕಾಜಲ್ ಮಗನಿಗೆ ನೀಲ್ ಕಿಚಲು ಎಂದು ನಾಮಕರಣ ಮಾಡಿದ್ದಾರೆ. ಕಾಜಲ್ ಮತ್ತು ಗೌತಮ್ ದಂಪತಿ ಮಗನ ಫೋಟೋವನ್ನು ಎಲ್ಲೂ ಶೇರ್ ಮಾಡಿರಲಿಲ್ಲ. ಅಭಿಮಾನಿಗಳು ನೆಚ್ಚಿನ ನಟಿಯ ಮಗನ ಫೋಟೋವನ್ನು ನೋಡಲು ಕಾತರರಾಗಿದ್ದರು. ಇದೀಗ ಅಮ್ಮಂದಿರ ದಿನದ ವಿಶೇಷವಾಗಿ ಮಗನ ಫೋಟೋ ಶೇರ್ ಮಾಡಿ ಭಾವುಕ ಸಾಲು ಹಂಚಿಕೊಂಡಿದ್ದಾರೆ.
ನೀನು ಎಷ್ಟು ಅಮೂಲ್ಯನು ಮತ್ತು ಯಾವಾಗಲೂ ನನಗೆ ಎಂದು ತಿಳಿಯಬೇಕೆಂದು ನಾನು ಬಯಸುತ್ತೇನೆ. ನಾನು ನಿನ್ನನ್ನು ನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡೆ, ನಿನ್ನ ಪುಟ್ಟ ಕೈಯನ್ನು ನನ್ನಲ್ಲು ಹಿಡಿದುಕೊಂಡೆ, ನಿನ್ನ ಬೆಚ್ಚಗಿನ ಉರಿರನ್ನು ಅನುಭವಿಸಿದೆ ಮತ್ತು ನಿಮ್ಮ ಸುಂದರವಾದ ಕಣ್ಣುಗಳನ್ನು ನೋಡಿದ ಕ್ಷಣ ನಾನು ಶಾಶ್ವತವಾಗಿ ಪ್ರೀತಿಸುತ್ತಿದ್ದೇನೆ ಎಂದು ನನಗೆ ತಿಳಿದಿದೆ. ನೀನು ನನ್ನ ಮೊದಲು ಮಗು. ನನ್ನ ಮೊದಲ ಮಗ. ನನ್ನ ಮೊಲ ಎಲ್ಲವೂ. ನಿಜವಾಗಿಯೂ ಮುಂಬರುವ ವರ್ಷಗಳಲ್ಲಿ ನಾನು ನಿನಗೆ ಕಲಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ತಾಯಿಯಾಗುವುದು ಏನು ಎಂದು ನೀನು ನನಗೆ ಕಲಿಸಿದ್ದೀಯ. ನೀನು ನನಗೆ ನಿಸ್ವಾರ್ಥಿಯಾಗಿರಲು ಕಲಿಸಿದ್ದೀಯಾ. ಶುದ್ಧ ಪ್ರೀತಿ ಎಂದು ಹೇಳಿದರು.
ಇದು ತುಂಬ ಭಯದ ವಿಚಾರವಾಗಿದೆ. ಅದಕ್ಕಿಂತ ಹೆಚ್ಚಾಗಿ ಸುಂದರವಾದ ಅನುಭವವಾಗಿದೆ. ನಾನು ಇನ್ನು ಕಲಿಯಲು ತುಂಬಾ ಇದೆ ಎಂದು ದೀರ್ಘವಾಗಿ ಸಾಲುಗಳನ್ನು ಬರೆದಿದ್ದಾರೆ. ಸುಂದರ ಸಾಲುಗಳ ಜೊತೆಗೆ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Kajal Aggarwal Pregnant: ಪ್ರೆಗ್ನೆನ್ಸಿ ವೇಳೆ ಕಾಜಲ್ ಫುಲ್ ವರ್ಕ್‌ಔಟ್!
ಮಗಧೀರ, ಆರ್ಯ 2 ಸೇರಿದಂತೆ ತೆಲುಗು ಹಾಗೂ ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಕಾಜಲ್ ಅರ್ಗವಾಲ್. 2020ರಲ್ಲಿ ಬಹುಕಾಲದ ಗೆಳೆಯ ಗೌತಮ್ ಕೀಚಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೈದರಾಬಾದ್ ಮತ್ತು ಮುಂಬೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಇದೀಗ ಕಾಜಲ್ ದಂಪತಿ ಮದುವೆಯಾಗಿ 2 ವರ್ಷಗಳಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.
ಸಿಂಗಮ್‌ನ ಕಾಜಲ್ Baby Shower ಫೋಟೋ ವೈರಲ್!
ಕಾಜಲ್ ಸಿನಿಮಾ ಜರ್ನಿ ಬಗ್ಗೆ ಹೇಳುವುದಾದರೆ ಹಿಂದಿ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕಾಜಲ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿಗಳಿಸಿದರು. 2009ರಲ್ಲಿ ಬಂದ ಮಗಧೀರ ಸಿನಿಮಾ ಕಾಜಲ್ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ ಸಿನಿಮಾವಾಗಿದೆ. ಈ ಸಿನಿಮಾ ಬಳಿಕ ಆರ್ಯ-2, ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್, ಸಿಂಗಂ, ಮೆರ್ಸೆಲ್, ಜನತಾ ಗ್ಯಾರೇಜ್ ಸೇರಿದಂತೆ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
